/newsfirstlive-kannada/media/post_attachments/wp-content/uploads/2025/03/CSK-ball-tampering-2.jpg)
ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಬೌಲರ್ ಖಲೀಲ್ ಅಹ್ಮದ್, ಬಾಲ್ ವಿರೂಪಗೊಳಿಸಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಇಟ್ಕೊಂಡು ಗಂಭೀರ ಆರೋಪ ಮಾಡಿದ್ದಾರೆ. ಬೆನ್ನಲ್ಲೇ ಆರೋಪ ಸಾಬೀತಾದರೆ ಸಿಎಸ್​​ಕೆ ಮತ್ತೆ 2 ವರ್ಷ ನಿಷೇಧಕ್ಕೆ ಒಳಗಾಗುತ್ತಾ ಎಂಬ ಪ್ರಶ್ನೆ ಕೂಡ ಶುರುವಾಗಿದೆ.
ಆಗಿದ್ದೇನು..?
ವೈರಲ್ ಆಗಿರುವ ವಿಡಿಯೋದಲ್ಲಿ ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್​, ಬೌಲರ್​ ಖಲೀಲ್ ಅಹ್ಮದ್​ ಬಳಿಗೆ ಬರುತ್ತಾರೆ. ಅದೇ ಸಮಯದಲ್ಲಿ ಖಲೀಲ್ ಅಹ್ಮದ್ ತಮ್ಮ ಜೇಬಿನಿಂದ ಏನೋ ತೆಗೆಯುತ್ತಾರೆ. ಆಗ ಕ್ಯಾಮೆರಾ ಖಲೀಲ್ ಅಹ್ಮದ್​ ಬೆನ್ನಿನ ಮೇಲೆ ಕೇಂದ್ರೀಕರಿಸಿದ್ದರೂ, ಅವರು ಜೇಬಿನಿಂದ ಏನು ತೆಗೆದರು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ವಿಡಿಯೋ ವೈರಲ್ ಬೆನ್ನಲ್ಲೇ, ಅಭಿಮಾನಿಗಳು ತಮ್ಮದೇ ಅರ್ಥದಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇಬ್ಬರು ಸೇರಿಕೊಂಡು ಬಾಲ್​ ವಿರೂಪಗೊಳಿಸಿದ್ದಾರೆ ಅಂತಾ ಕಿಡಿಕಾರಿದ್ದಾರೆ. ಸಿಎಸ್​​ಕೆ ವಿರುದ್ಧ ಅಭಿಮಾನಿಗಳು ಇಂಥ ಆರೋಪವನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಆದರೆ ಅದೊಂದು ಸಾಮಾನ್ಯ ದೃಶ್ಯವಾಗಿರಬಹುದು ಅಂತಲೂ ಕೆಲವರು ಹೇಳ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/03/CSK-ball-tampering.jpg)
ನಿಯಮ ಏನು ಹೇಳುತ್ತೆ..?
ಕ್ರಿಕೆಟ್ ನಿಯಮದ ಪ್ರಕಾರ, ಯಾರೂ ಚೆಂಡನ್ನು ವಿರೂಪಗೊಳಿಸುವಂತಿಲ್ಲ. ಅಂತಾರಾಷ್ಟ್ರಿಯ ಕ್ರಿಕೆಟ್​ನಲ್ಲಿ ಅನೇಕ ಬಾರಿ ನಿಯಮದ ಪ್ರಕಾರ ಆಟಗಾರರು ಶಿಕ್ಷೆಯನ್ನು ಅನುಭವಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಸ್ಯಾಂಡಲ್​ಪೇಪರ್ ಗೇಟ್ ಹಗರಣ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಆಸಿಸ್​ ಆಟಗಾರರಾದ ಸ್ಟಿವನ್ ಸ್ಮಿತ್, ಡೆವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಕಠಿಣ ಶಿಕ್ಷೆಗೆ ಒಳಗಾದರು. ಐಪಿಎಲ್​ನಲ್ಲಿ ಇಂತಹ ಯಾವುದೇ ಪ್ರಕರಣಗಳು ಆಗಿಲ್ಲ. ಕ್ರಿಕೆಟ್ ನಿಯಮಗಳ ಪ್ರಕಾರ, MCC ಕಾನೂನು 42.3 ಅಡಿಯಲ್ಲಿ ಚೆಂಡು ವಿರೂಪಗೊಳಿಸೋದು ಅಪರಾಧ ಎಂದು ಹೇಳುತ್ತದೆ. ಹೀಗೆ ಮಾಡುವ ಆಟಗಾರ ಅಥವಾ ತಂಡ ಒಂದರಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಿಸುವ ಅವಕಾಶ ನಿಯಮದಲ್ಲಿ ಇದೆ.
ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಹೀಗಿದ್ದೂ 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ತಂಡವನ್ನು ಅಮಾನತುಗೊಳಿಸಲಾಗಿತ್ತು. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ವಿವಾದದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 2018ರಲ್ಲಿ ಸಿಎಸ್‌ಕೆ ಅದ್ಭುತ ಪುನರಾಗಮನದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು.
https://twitter.com/Devx_07/status/1904044385991369088
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us