ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲ್ಯಾನ್​​; KL​​ ರಾಹುಲ್​ ಖರೀದಿಗೆ ಮುಂದಾದ ಚೆನ್ನೈ ಸೂಪರ್​ ಕಿಂಗ್ಸ್​

author-image
Ganesh Nachikethu
Updated On
ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲ್ಯಾನ್​​; KL​​ ರಾಹುಲ್​ ಖರೀದಿಗೆ ಮುಂದಾದ ಚೆನ್ನೈ ಸೂಪರ್​ ಕಿಂಗ್ಸ್​
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಟೂರ್ನಿ
  • IPL ಲೀಗ್​ ಆರಂಭಕ್ಕೆ ಮೂರು ತಿಂಗಳು ಮಾತ್ರ ಬಾಕಿ
  • ಚೆನ್ನೈ ಸೂಪರ್​ ಕಿಂಗ್ಸ್​ ತಂಡದಿಂದ ಭರ್ಜರಿ ಪ್ಲ್ಯಾನ್​​

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ಇನ್ನೇನು ಮೂರು ತಿಂಗಳು ಮಾತ್ರ ಬಾಕಿ ಇದೆ. ಇದೇ ತಿಂಗಳು 23 ಮತ್ತು 24ನೇ ತಾರೀಕು ಮೆಗಾ ಹರಾಜು ನಡೆಯಲಿದ್ದು, ಎಲ್ಲರ ಚಿತ್ತ ಬಿಡ್‌ ಅಂಗಳದತ್ತ ನೆಟ್ಟಿದೆ. 2 ವಾರಗಳ ಹಿಂದೆಯೇ ಅಕ್ಟೋಬರ್​ 31ನೇ ತಾರೀಕು ಬಿಸಿಸಿಐ ಸೂಚನೆಯಂತೆ ಐಪಿಎಲ್​ ತಂಡಗಳ ಮಾಲೀಕರು ರೀಟೈನ್​ ಲಿಸ್ಟ್​ ಸಲ್ಲಿಕೆ ಮಾಡಿವೆ.

ಇನ್ನು, ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್​ ಲಿಸ್ಟ್​ ಮಾಡಿ ಐಪಿಎಲ್​ ತಂಡಗಳ ಮಾಲೀಕರಿಗೆ ಕಳಿಸಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರು ಇದ್ದಾರೆ.

ಹೇಗಾದ್ರೂ ಮಾಡಿ ಮುಂದಿನ ಸೀಸನ್​​ನಲ್ಲಿ ಕಪ್​ ಗೆದ್ದು ಮತ್ತೆ ಚಾಂಪಿಯನ್​​​ ಆಗಬೇಕು ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಯಾರಿ ನಡೆಸಿಕೊಂಡಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರೋ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 4 ಶತಕ ಸಿಡಿಸಿರೋ ಸ್ಟಾರ್​ ಆಟಗಾರನಿಗೆ ಮಣೆ ಹಾಕಲಿದೆ.

ಹರಾಜಿಗೆ ಬಂದ ಕನ್ನಡಿಗ ರಾಹುಲ್​​

ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಂದ ಕನ್ನಡಿಗ ಕೆ.ಎಲ್​ ರಾಹುಲ್​ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ ಮಾಡುವ ಸಾಧ್ಯತೆಗಳಿವೆ. ಇವರು ಓಪನಿಂಗ್​ ಮತ್ತು ಮಿಡಲ್​ ಆರ್ಡರ್​​ ಬ್ಯಾಟರ್​ ಕೂಡ ಹೌದು. ಜತೆಗೆ ವಿಕೆಟ್​​ ಕೀಪಿಂಗ್​​​ ಮತ್ತು ನಾಯಕತ್ವದ ಸಾಮರ್ಥ್ಯ ಹೊಂದಿದ್ದಾರೆ. ಇದರ ಮಧ್ಯೆ ರಾಹುಲ್​ ಬಗ್ಗೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಕೆ.ಎಲ್​ ರಾಹುಲ್​ ಮೇಲೆ ಚೆನ್ನೈ ಕಣ್ಣು

ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ಮಾಡಬಹುದು ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ 2022 ಮತ್ತು 203ರ ಐಪಿಎಲ್​ ಸೀಸನ್​ನಲ್ಲಿ ಪ್ಲೇಆಫ್ ತಲುಪಿತು.

ಚೆನ್ನೈಗೆ ರಾಹುಲ್ ಏಕೆ?

ಸಿಎಸ್‌ಕೆ ಎಂಎಸ್ ಧೋನಿ ಉತ್ತರಾಧಿಕಾರಿ ಹುಡುಕಾಟದಲ್ಲಿದೆ. ಇದಕ್ಕಾಗಿ ಸಮರ್ಥ ಆಟಗಾರರನ್ನು ಬಿಡ್​​ ಮಾಡಲು ಎದುರು ನೋಡುತ್ತಿದೆ. ವಿಕೆಟ್​ ಕೀಪರ್​ ಮತ್ತು ಕ್ಯಾಪ್ಟನ್​​​ಗಾಗಿ ಆರ್​​ಸಿಬಿ ರಾಹುಲ್​ ಅವರನ್ನು ಬಿಡ್​ ಮಾಡಬಹುದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment