ಚೆನ್ನೈ ವಿರುದ್ಧ ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಬೆಂಗಳೂರು ಟೀಮ್​ಗೆ ಸ್ಟಾರ್​ ಆಟಗಾರರ ಎಂಟ್ರಿ

author-image
Ganesh Nachikethu
Updated On
ಚೆನ್ನೈ ವಿರುದ್ಧ ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಬೆಂಗಳೂರು ಟೀಮ್​ಗೆ ಸ್ಟಾರ್​ ಆಟಗಾರರ ಎಂಟ್ರಿ
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ರೋಚಕ ಪಂದ್ಯ!
  • ಇಂದಿನ ಪಂದ್ಯದಲ್ಲಿ ಚೆನ್ನೈ, ಬೆಂಗಳೂರು ತಂಡಗಳು ಮುಖಾಮುಖಿ
  • ಟಾಸ್​​ ಗೆದ್ದ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದಿಂದ ಬೌಲಿಂಗ್​ ಆಯ್ಕೆ

ಇಂದು ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ರುತುರಾಜ್ ಗಾಯಕ್ವಾಡ್ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ 18ನೇ ಸೀಸನ್​ನಲ್ಲಿ ಆರ್​​​ಸಿಬಿ ಟೀಮ್​ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೀಸನ್​​ನ ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದ ಆರ್​​​ಸಿಬಿ ಇಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹಾಗಾಗಿ ಆರ್​​ಸಿಬಿಯಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದಾರೆ. ಪ್ರಾಕ್ಟೀಸ್​ ವೇಳೆ ಸಣ್ಣ ಗಾಯಕ್ಕೆ ತುತ್ತಾದ ಕಾರಣ ಭುವಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಈಗ ಗಾಯದಿಂದ ಚೇತರಿಸಿಕೊಂಡಿರೋ ಭುವಿ ಆರ್​​ಸಿಬಿ ತಂಡದ ಪರ ಆಡಲಿದ್ದಾರೆ ಎಂದು ಕ್ಯಾಪ್ಟನ್​ ರಜತ್​ ಪಾಟಿದಾರ್​​ ಕನ್ಫರ್ಮ್​​ ಮಾಡಿದ್ದಾರೆ.

ಸಿಎಸ್‌ಕೆ ವಿರುದ್ಧ ಆರ್​​ಸಿಬಿ ತಂಡ ಹೀಗಿದೆ!

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ದೇವದತ್​ ಪಡಿಕ್ಕಲ್​​, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ಇದನ್ನೂ ಓದಿ:ಚೆನ್ನೈ ತಂಡಕ್ಕೆ ಭಾರೀ ನಡುಕ; ಆರ್​​ಸಿಬಿಗೆ ಅಪಾಯಕಾರಿ ಆಟಗಾರನ ಎಂಟ್ರಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment