/newsfirstlive-kannada/media/post_attachments/wp-content/uploads/2025/04/MS-DHONI-1.jpg)
ಚೆಪಾಕ್ನಲ್ಲಿ ನಿನ್ನೆ ಚೆನ್ನೈಗೆ ಪಂಜಾಬ್ ಪವರ್ಫುಲ್ ಪಂಚ್ ಕೊಡ್ತು. ಬೌಲಿಂಗ್ ಚಹಲ್ ಚಮಕ್ ಕೊಟ್ರೆ, ಬ್ಯಾಟಿಂಗ್ನಲ್ಲಿ ಪ್ರಭ್ ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್ ಶೈನ್ ಆದ್ರು. ಪಂಜಾಬ್ ಶೇರ್ಗಳ ಘರ್ಜನೆಯ ಮುಂದೆ ಚೈನ್ನೈ ಕಿಂಗ್ಸ್ ಸೈಲೆಂಟ್ ಆದ್ರು. ಸ್ಯಾಮ್ ಕರನ್ ಆಟ ನೀರಿನಲ್ಲಿ ಹೋಮ ಮಾಡಿದಂತಾಯ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಶೇಕ್ ರಶೀದ್, ಆಯುಶ್ ಮ್ಹಾತ್ರೆ ಅಲ್ಪಮೊತ್ತಕ್ಕೆ ಔಟಾದ್ರು. ರವೀಂದ್ರ ಜಡೇಜಾ 17 ರನ್ಗಳಿಸಿ ನಿರ್ಗಮಿಸಿದ್ರು. ಪವರ್ ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡ ಚೆನ್ನೈ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತ್ತು.
ಇದನ್ನೂ ಓದಿ: ಇಂದಿನಿಂದ ಒಂದೇ ಗ್ರಾಮೀಣ ಬ್ಯಾಂಕ್, ಕರ್ನಾಟಕದ ಆ ಎರಡು ಬ್ಯಾಂಕ್ಗಳು ವಿಲೀನ..!
ಈ ಬಾರಿ ಕುಸಿತ ಕಂಡ ಚೆನ್ನೈಗೆ ಸ್ಯಾಮ್ ಕರನ್ ಆಸರೆಯಾಗಿ ನಿಂತ್ರು. ಕರನ್ ಆರ್ಭಟಕ್ಕೆ ಪಂಜಾಬ್ ಪಡೆ ನಲುಗಿತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಡೆವಾಲ್ಡ್ ಬ್ರೆವಿಸ್, ಸ್ಯಾಮ್ ಕರನ್ಗೆ ಸಾಥ್ ನೀಡಿದ್ರು. ಈ ಜೋಡಿ 78 ರನ್ಗಳ ಜೊತೆಯಾಟವಾಡಿತು. 2 ಬೌಂಡರಿ, 1 ಸಿಕ್ಸರ್ ಸಿಡಿಸಿದ ಬ್ರೆವಿಸ್ 32 ರನ್ಗಳಿಸಿದ್ರು. ಚೆಪಾಕ್ ಅಂಗಳದಲ್ಲಿ ಧೂಳೆಬ್ಬಿಸಿದ ಸ್ಯಾಮ್ ಕರನ್ 9 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು. ಅದ್ರಲ್ಲೂ ಸೂರ್ಯಾಂಶ್ ಶೆಡ್ಗೆ ಎಸೆದ 16ನೇ ಓವರ್ನಲ್ಲಿ ಬರೋಬ್ಬರಿ 26 ರನ್ ಚಚ್ಚಿದ್ರು. 187ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ಸ್ಯಾಮ್ ಕರನ್ 44 ಎಸೆತಗಳಲ್ಲಿ 88 ರನ್ಗಳಿಸಿದ್ರು.
88 ರನ್ಗಳಿಸಿ ಸ್ಯಾಮ್ ಕರನ್ ಔಟಾದ್ರು. ಬಳಿಕ ಬಂದ ಧೋನಿ 1 ಸಿಕ್ಸರ್, 1 ಬೌಂಡರಿ ಬಾರಿಸಿ ಪೆವಿಲಿಯನ್ ಸೇರಿದ್ರು. 19ನೇ ಓವರ್ನ ಮೊದಲ ಎಸೆತದಲ್ಲಿ ಧೋನಿಯನ್ನ ಔಟ್ ಮಾಡಿದ ಚಹಲ್, 4ನೇ ಎಸೆತದಲ್ಲಿ ಹೂಡಾ, 5ನೇ ಎಸೆತದಲ್ಲಿ ಅನ್ಶುಲ್ ಕಾಂಬೋಜ್, 6ನೇ ಎಸೆತದಲ್ಲಿ ನೂರ್ ಅಹ್ಮದ್ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿ, ತನ್ನದೇ ಸ್ಟೈಲ್ನಲ್ಲಿ ಸಂಭ್ರಮಿಸಿದ್ರು.
ಇದನ್ನೂ ಓದಿ: ರಿಂಕು ಸಿಂಗ್ ಕೆನ್ನೆಗೆ ಕುಲ್ದೀಪ್ ಯಾದವ್ ಹೊಡೆದಿದ್ದು ಯಾಕೆ..? ಸ್ಪಷ್ಟನೆ ನೀಡಿದ KKR
ಕೊನೆಯ ಓವರ್ 2ನೇ ಎಸೆತದಲ್ಲಿ ಶಿವಂ ದುಬೆ ಔಟ್ ಆಗೋದ್ರೊಂದಿಗೆ ಚೆನ್ನೈ ಆಲೌಟ್ ಆಯ್ತು. 190 ರನ್ಗಳಿಸಿದ ಚೆನ್ನೈ ಪಂಜಾಬ್ಗೆ 191 ರನ್ಗಳ ಟಾರ್ಗೆಟ್ ನೀಡ್ತು. ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಡಿಸೆಂಟ್ ಆರಂಭ ಪಡೆಯಿತು. 5 ಬೌಂಡರಿ ಚಚ್ಚಿದ ಪ್ರಿಯಾಂಶ್ ಆರ್ಯ 15 ಎಸೆತಗಳಲ್ಲೇ 23 ರನ್ ಸಿಡಿಸಿದ್ರು. ರಿಧಮ್ ಕಂಡುಕೊಂಡ ಪ್ರಭ್ ಸಿಮ್ರನ್ ಸಿಂಗ್ ಸ್ಪೋಟಕ ಆಟವಾಡಿದ್ರು. 5 ಬೌಂಡರಿ, 3 ಸಿಕ್ಸರ್ ಸಿಡಿಸಿದ ಪ್ರಭ್ಸಿಮ್ರನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ರು.
ಅರ್ಧಶತಕ ಸಿಡಿಸಿ ಪ್ರಭ್ಸಿಮ್ರನ್ ಔಟಾದ್ರೆ, ನೆಹಾಲ್ ವಡೇರಾ 5 ರನ್ಗಳಿಸಿ ನಿರ್ಗಮಿಸಿದ್ರು. ಸಾಲಿಡ್ ಆಟವಾಡಿದ ಶ್ರೇಯಸ್ ಅಯ್ಯರ್ ಅಬ್ಬರದ ಅರ್ಧಶತಕ ಸಿಡಿಸಿದ್ರು. ಶ್ರೇಯಸ್ ಅಯ್ಯರ್ ಸಾಥ್ ನೀಡಿದ ಶಶಾಂಕ್ ಸಿಂಗ್ 11 ಎಸೆತಗಳಲ್ಲಿ 23 ರನ್ ಚಚ್ಚಿದ್ರು. ಆದ್ರೆ, 18ನೇ ಓವರ್ನ 3ನೇ ಎಸೆತದಲ್ಲಿ ಬಿಗ್ ಶಾಟ್ ಹೊಡೆಯಲು ಹೋಗಿ ಡೆವಾಲ್ಡ್ ಬ್ರೆವಿಸ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದ್ರು.
ಇದನ್ನೂ ಓದಿ: ತವರಲ್ಲಿ CSKಗೆ ಭಾರೀ ಅವಮಾನ.. ಧೋನಿ ಪಡೆಗೆ ಹಿಗ್ಗಾಮುಗ್ಗಾ ಬಾರಿಸಿದ ಶ್ರೇಯಸ್, ಪ್ರಭಸಿಮ್ರನ್
ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್, ಸುರ್ಯಾಂಶ್ ಶೆಗ್ಡೆ ವಿಕೆಟ್ ಕಬಳಿಸಿದ ಚೆನ್ನೈ ಕಮ್ಬ್ಯಾಕ್ ಮಾಡ್ತು. ಆದ್ರೆ, ಗೆಲುವಿನ ದಡ ಸೇರಲು ಆಗಲಿಲ್ಲ. ಜೋಸ್ ಇಂಗ್ಲೀಸ್, ಮಾರ್ಕೋ ಯಾನ್ಸೆನ್ ಅಜೇಯವಾಗುಳಿದುಕೊಂಡು ಪಂಜಾಬ್ನ ಗೆಲ್ಲಿಸಿದ್ರು. 19.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಪಂಜಾಬ್ 4 ವಿಕೆಟ್ಗಳ ಜಯ ಸಾಧಿಸಿತು. ಚೆನ್ನೈ ಚೆಪಾಕ್ನಲ್ಲಿ ಸತತ 5ನೇ ಸೋಲಿಗೆ ಶರಣಾಯ್ತು. ಜೊತೆಗೆ ಅಧಿಕೃತವಾಗಿ ಪ್ಲೇ ಆಫ್ ರೇಸ್ನಿಂದ ಐಪಿಎಲ್ನಿಂದ ಹೊರಬೀಳ್ತು.
ಇದನ್ನೂ ಓದಿ: ತಿಮ್ಮಪ್ಪನ ದರ್ಶನ ಪಡೆದ RCB ಕ್ಯಾಪ್ಟನ್, ವಿಕೆಟ್ ಕೀಪರ್.. 18 ವರ್ಷಗಳ ಸತತ ಹೋರಾಟಕ್ಕೆ ಬ್ರೇಕ್ ಬೀಳುತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್