/newsfirstlive-kannada/media/post_attachments/wp-content/uploads/2025/04/Dhoni-1.jpg)
ನಾಯಕತ್ವ ಬದಲಾದ್ರೂ ಸಿಎಸ್ಕೆ ಆಟ ಬದಲಾಗಲಿಲ್ಲ. ಮತ್ತದೇ ಕಳಪೆ ಆಟ, ಮತ್ತದೇ ಸೋಲಿನ ಓಟ. ಕೊಲ್ಕತ್ತಾ ನೈಟ್ ರೈಡರ್ಸ್ನ ರಣವ್ಯೂಹದಲ್ಲಿ ಸಿಲುಕಿದ ಸಿಎಸ್ಕೆ ನಿನ್ನೆ ವಿಲ ವಿಲ ಒದ್ದಾಡಿಬಿಡ್ತು. ಹೋಮ್ಗ್ರೌಂಡ್ನಲ್ಲಿ ಚೆನ್ನೈ ಪರದಾಟ ನಡೆಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ ಮೆರೆದಾಡಿತು. ಸಂಪೂರ್ಣ ಯೆಲ್ಲೋಮಯವಾಗಿದ್ದ ಚೆಪಾಕ್ ಮೈದಾನ ಸಂಪೂರ್ಣ ಸೈಲೆಂಟ್ ಆಗಿತ್ತು.
ಚೆಪಾಕ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ಗೆ ಬಂದ ಚೆನ್ನೈ ಸೂಪರ್ ಕಿಂಗ್ಸ್ ಕೆಕೆಆರ್ ಬೌಲರ್ಸ್ ಶಾಕ್ ಮೇಲೆ ಶಾಕ್ ನೀಡಿದ್ರು. ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳ ಮ್ಯಾಜಿಕಲ್ ಬೌಲಿಂಗ್ಗೆ ಯೆಲ್ಲೋಆರ್ಮಿ ಸ್ಟನ್ ಆಯ್ತು. ರನ್ಗಳಿಸಲು ಪರದಾಡಿದ ಸಿಎಸ್ಕೆ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ಇದನ್ನೂ ಓದಿ: ಕ್ಯಾಪ್ಟನ್ MS ಧೋನಿಗೆ ಭಾರೀ ಅವಮಾನ.. ಕೇವಲ 104 ರನ್ಗಳ ಟಾರ್ಗೆಟ್ ನೀಡಿದ ಚೆನ್ನೈ
ರಚಿನ್ ರವಿಂದ್ರ, ಡಿವೋನ್ ಕಾನ್ವೆ ಗುಡ್ ಸ್ಟಾರ್ಟ್ ನೀಡಲೇ ಇಲ್ಲ. ಕಾನ್ವೆ 12 ರನ್ಗಳಿಸಿ ನಿರ್ಗಮಿಸಿದ್ರೆ, ರಚಿನ್ ರವೀಂದ್ರ ಆಟ ಜಸ್ಟ್ 3 ರನ್ಗೆ ಅಂತ್ಯವಾಯ್ತು. ಸಿಕ್ಕ ಜೀವದಾನದ ಹೊರತಾಗಿಯೂ ವಿಜಯ್ ಶಂಕರ್ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಫೇಲ್ ಆದ್ರು, ವರುಣ್ ಚಕ್ರವರ್ತಿ ವಿಜಯ್ ಶಂಕರ್ ವಿಕೆಟ್ ಎಗರಿಸಿದ್ರು.
ರಾಹುಲ್ ತ್ರಿಪಾಠಿ ಸುನಿಲ್ ನರೇನ್ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆದ್ರೆ, ರವಿಚಂದ್ರನ್ ಅಶ್ವಿನ್ 1 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಆಲ್ರೌಂಡರ್ ರವಿಂದ್ರ ಜಡೇಜಾ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೀಪಕ್ ಹೂಡ ಸೊನ್ನೆ ಸುತ್ತಿದ್ರು. ಸ್ಪಿನ್ ಟ್ರ್ಯಾಪ್ಗೆ ಬಿದ್ದ ಕ್ಯಾಪ್ಟನ್ ಧೋನಿ 1 ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.
ನೂರ್ ಅಹ್ಮದ್ ಆಟಕ್ಕೆ ವೈಭವ್ ಅರೋರ ಬ್ರೇಕ್ ಹಾಕಿದ್ರು. ಶಿವಂ ದುಬೆ ಕೊನೆಯ ಓವರ್ವರೆಗೂ ಬ್ಯಾಟಿಂಗ್ ಮಾಡಿದ್ರು. ಇಂಪ್ಯಾಕ್ಟ್ಫುಲ್ ಇನ್ನಿಂಗ್ಸ್ ಆಡಲಿಲ್ಲ. ರನ್ಗಳಿಕೆಗೆ ತಿಣುಕಾಟ ನಡೆಸಿದ ಶಿವಂದುಬೆ 29 ಎಸೆತ ಎದುರಿಸಿ ಕೇವಲ 31 ರನ್ಗಳಿಸಿದ್ರು. 20 ಓವರ್ ಅಂತ್ಯಕ್ಕೆ ಸಿಎಸ್ಕೆ 9 ವಿಕೆಟ್ ಕಳೆದುಕೊಂಡು ಕೇವಲ 103 ರನ್ಗಳಿಸಿತು.
ಇದನ್ನೂ ಓದಿ: ಧೋನಿ ಕ್ಯಾಪ್ಟನ್ ಆದ್ರೂ ಮುಂದುವರೆದ CSK ಸೋಲು.. ಮನೆಯಂಗಳದಲ್ಲಿ ಚೆನ್ನೈ ತಂಡ ಧೂಳೀಪಟ
104 ರನ್ಗಳ ಸಾದಾರಣ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್ ಅಬ್ಬರದ ಆರಂಭ ಪಡೆದುಕೊಳ್ತು. ಸುನಿಲ್ ನರೇನ್-ಕ್ವಿಂಟನ್ ಡಿಕಾಕ್ ಅಬ್ಬರಿಸಿದ್ರು. 3 ಸಿಕ್ಸರ್ ಸಿಡಿಸಿ ಡಿ ಕಾಕ್ 16 ಎಸೆತಗಳಲ್ಲಿ 23 ರನ್ಗಳಿಸಿದ್ರು. ಡಿ ಕಾಕ್ ಮಿಂಚಿ ಮರೆಯಾದ್ರೆ 5 ಸಿಕ್ಸರ್, 2 ಬೌಂಡರಿ ಬಾರಿಸಿದ ಸುನಿಲ್ ನರೇನ್ ಸಿಎಸ್ಕೆ ಬೌಲರ್ಗಳನ್ನ ಬೆಂಡೆತ್ತಿದ್ರು. ಜಸ್ಟ್ 18 ಎಸೆತಗಳಲ್ಲಿ 44 ರನ್ ಸಿಡಿಸಿದ್ರು. ಆ ಮೂಲಕ ನರೈನ್ ಸಿಎಸ್ಕೆ ದುಸ್ವಪ್ನವಾಗಿ ಕಾಡಿದರು. ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ, ಬೌಲಿಂಗ್ನಲ್ಲೂ ಆರ್ಭಟಿಸಿದರು. ತಮ್ಮ ಕೋಟಾದ ನಾಲ್ಕು ಓವರ್ಗಳಲ್ಲಿ ಕೇವಲ 13 ರನ್ ನೀಡಿ, ಮೂರು ವಿಕೆಟ್ ಪಡೆದರು.
ನರೇನ್ ಔಟಾದ ಬಳಿಕ 3ನೇ ವಿಕೆಟ್ಗೆ ಜೊತೆಯಾದ ಅಜಿಂಕ್ಯಾ ರಹಾನೆ-ರಿಂಕು ಸಿಂಗ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ರಹಾನೆ ಅಜೇಯ 20 ರನ್ಗಳಿಸಿದ್ರೆ ರಿಂಕು ಸಿಂಗ್ ಅಜೇಯ 15 ರನ್ಗಳಿಸಿದ್ರು. 10.1 ಓವರ್ಗಳಲ್ಲಿ ಗೆಲುವಿನ ದಡ ಸೇರಿದ ಕೊಲ್ಕತ್ತಾ 8 ವಿಕೆಟ್ಗಳ ಭರ್ಜರಿ ಜಯಬೇರಿ ಬಾರಿಸಿತು. ಭಾರಿ ಅಂತರದ ಜಯದೊಂದಿಗೆ ರನ್ರೇಟ್ ಹೆಚ್ಚಿಸಿಕೊಂಡ ಕೆಕೆಆರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.
ಇದನ್ನೂ ಓದಿ: ಆಲ್ರೌಂಡರ್ಗೆ ಬಿಗ್ ಶಾಕ್; IPLಗೆ ಬಂದಿದ್ದಕ್ಕೆ ಮುಂಬೈ ತಂಡದ ಪ್ಲೇಯರ್ ಬ್ಯಾನ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್