/newsfirstlive-kannada/media/post_attachments/wp-content/uploads/2025/03/KOHLI-VS-CSK.jpg)
IPL-2025! ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿ ಆಗಿದ್ದವು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್, 7 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿ, ಐಪಿಎಲ್​ನಲ್ಲಿ ಶುಭಾರಂಭ ಮಾಡಿದೆ.
ಮುಂದಿನ ಪಂದ್ಯ ಯಾವಾಗ..?
ಆರ್​ಸಿಬಿ ಮುಂದಿನ ಪಂದ್ಯ ಇದೇ ವಾರ ಶುಕ್ರವಾರದಂದು ನಡೆಯಲಿದೆ. ಅಂದರೆ ಮಾರ್ಚ್ 28 ರಂದು ಎರಡನೇ ಪಂದ್ಯ ನಡೆಯಲಿದೆ. ವಿಶೇಷ ಅಂದ್ರೆ ಶುಕ್ರವಾರ, ಆರ್​ಸಿಬಿ ಅಭಿಮಾನಿಗಳ ಬದ್ಧವೈರಿ ತಂಡ ಸಿಎಸ್​ಕೆ ವಿರುದ್ಧ ಮ್ಯಾಚ್ ಇದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್​ ತಂಡಗಳ ನಡುವೆ ಕಾದಾಟ ನಡೆಯಲಿದೆ.
ಎಷ್ಟು ಗಂಟೆಗೆ ಪಂದ್ಯ..?
ಶುಕ್ರವಾರ ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ, 7.30 ರಿಂದ ಪಂದ್ಯಗಳು ಆರಂಭವಾಗಲಿದೆ. ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗಾಗಲೇ ಟಿಕೆಟ್ ಖರೀದಿಸಿ ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್​ಕೆ ಮುಂಬೈ ವಿರುದ್ಧ 4 ವಿಕೆಟ್​ಗಳ ಜಯಗಳಿಸಿದೆ. ಎರಡೂ ತಂಡಗಳು ಒಂದೊಂದು ಗೆಲುವು ಸಾಧಿಸಿದ್ದು, ಮತ್ತೊಂದು ಗೆಲುವಿಗಾಗಿ ಎದುರು ನೋಡುತ್ತಿವೆ. ಇನ್ನು, ಆರ್​ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಸಣ್ಣ ಬದಲಾವಣೆಯಾದರೂ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಅವರನ್ನು ಬೆಂಚ್​​ನಲ್ಲಿ ಕೂರಿಸಲಾಗಿತ್ತು. ಪರಿಣಾಮ ಕೆಕೆಆರ್ ವಿರುದ್ಧ ಬೌಲಿಂಗ್ ವಿಭಾಗದಲ್ಲಿ ಕೊಂಚ ಹಿನ್ನಡೆ ಆಗಿತ್ತು. ಹೀಗಾಗಿ ಆರ್​ಸಿಬಿ ಬದಲಾವಣೆಯೊಂದಿಗೆ ಸಿಎಸ್​ಕೆ ವಿರುದ್ಧ ಕಣಕ್ಕಿಳಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಲಕ್ನೋ ಕಾಡಿದ ದೊಡ್ಡ ವೀಕ್ನೆಸ್.. ಗೆಳೆಯರ ನಡುವಿನ ಫೈಟ್​ನಲ್ಲಿ ಗೆಲ್ಲುವ ಫೇವರಿಟ್ ತಂಡ ಯಾವುದು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us