/newsfirstlive-kannada/media/post_attachments/wp-content/uploads/2025/03/DHONI-2-1.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಬದ್ಧವೈರಿಗಳ ಕದನ ಕ್ರಿಕೆಟ್ ಪ್ರೇಮಿಗಳಿಗೆ ಸಖತ್ ಕಿಕ್ ನೀಡ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ, ಸಿಎಸ್ಕೆ ಭದ್ರಕೋಟೆಯಲ್ಲಿ ಭರ್ಜರಿ ಆಟವಾಡಿತು. ಆರ್ಸಿಬಿ ಅಬ್ಬರಕ್ಕೆ ಸಿಎಸ್ಕೆ ಬೌಲರ್ಗಳು ತಬ್ಬಿಬ್ಬಾದ್ರು.
ಚೆನ್ನೈನ ಚೆಪಾಕ್ ಅಂಗಳದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಆರ್ಸಿಬಿಗೆ ಓಪನರ್ ಫಿಲ್ ಸಾಲ್ಟ್ ಒಳ್ಳೆ ಸ್ಟಾರ್ಟ್ ನೀಡಿದ್ರು. 200ರ ಸ್ಟ್ರೈಕ್ರೇಟ್ನಲ್ಲಿ ಆರ್ಭಟಿಸಿದ ಫಿಲ್ ಸಾಲ್ಟ್ 5 ಬೌಂಡರಿ, 1 ಸಿಕ್ಸರ್ ಚಚ್ಚಿದ್ರು. 16 ಎಸೆತಗಳಲ್ಲಿ 32 ರನ್ ಚಚ್ಚಿದ್ರು. 32 ರನ್ಗಳಿದ್ದ ಫಿಲ್ ಸಾಲ್ಟ್ ಚಾಣಾಕ್ಯ ಧೋನಿಯ ಕೈಚಳಕಕ್ಕೆ ಬಲಿಯಾದ್ರು. ಜಸ್ಟ್ 0.16 ಸೆಕೆಂಡ್ಗಳಲ್ಲಿ ಶರವೇಗದ ಸ್ಟಂಪಿಂಗ್ ಮಾಡಿದ ಧೋನಿ ಫಿಲ್ ಸಾಲ್ಟ್ಗೆ ಪೆವಿಲಿಯನ್ ದಾರಿ ತೋರಿಸಿದ್ರು.
MS DHONI IS THE GOD OF STUMPING 🦁🔥 pic.twitter.com/ajZQyIYiq5
— Johns. (@CricCrazyJohns) March 28, 2025
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ದೇವದತ್ತ್ ಪಡಿಕ್ಕಲ್ ಬಿರುಸಿನ ಆಟವಾಡಿ ಔಟಾದ್ರು. 2 ಬೌಂಡರಿ, 2 ಸಿಕ್ಸರ್ ಸಿಡಿಸಿದ ಪಡಿಕ್ಕಲ್ 27 ರನ್ಗಳಿಸಿ ನಿರ್ಗಮಿಸಿದ್ರು. ಆರಂಭದಲ್ಲಿ ಸ್ಟ್ರಗಲ್ ಮಾಡಿದ ವಿರಾಟ್ ಕೊಹ್ಲಿ ಬಳಿಕ ರಿದಮ್ ಕಂಡುಕೊಂಡರು. ಪತಿರಣ ಬೌಲಿಂಗ್ನಲ್ಲಿ ಬೌಂಡಿರಿ, ಸಿಕ್ಸರ್ ಸಿಡಿಸಿ ಮಿಂಚಿದ್ರು. ಮಿಂಚಿದಷ್ಟೇ ವೇಗವಾಗಿ ಮರೆಯಾದ್ರು. 31 ರನ್ಗಳಿಗೆ ಕೊಹ್ಲಿ ಆಟ ಅಂತ್ಯವಾಯ್ತು.
ಬಳಿಕ ಕಣಕ್ಕಿಳಿದ ಜಿತೇಶ್ ಶರ್ಮಾ, ಲಯಮ್ ಲಿವಿಂಗ್ ಸ್ಟೋನ್ ಅಲ್ಪ ಮೊತ್ತಕ್ಕೆ ಔಟಾದ್ರು. ಇನ್ನೊಂದು ತುದಿಯಲ್ಲಿ ಕ್ರಿಸ್ ಕಚ್ಚಿ ನಿಂತಿದ್ದ ನಾಯಕ ರಜತ್ ಪಟಿದಾರ್ ಕಾನ್ಪಿಡೆಂಟ್ ಆಟವಾಡಿದ್ರು. ಸಿಎಸ್ಕೆ ದಾಳಿಯನ್ನ ನಿರ್ಭಿತವಾಗಿ ಎದುರಿಸಿ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. 4 ಫೋರ್, 3 ಸಿಕ್ಸರ್ ಚಚ್ಚಿದ ರಜತ್ ಪಟಿದಾರ್ 541 ರನ್ ಸಿಡಿಸಿ ಔಟಾದ್ರು. ಕೃನಾಲ್ ಪಾಂಡ್ಯ ಡಕೌಟ್ ಆದ್ರು. ಅಂತಿಮ ಓವರ್ನಲ್ಲಿ ಆರ್ಭಟಿಸಿದ ಟಿಮ್ ಡೇವಿಡ್ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ನೆರವಾದ್ರು. ಕೇವಲ 8 ಎಸೆತದಲ್ಲಿ 3 ಸಿಕ್ಸರ್, ಒಂದು ಬೌಂಡರಿಯೊಂದಿಗೆ 22 ರನ್ಗಳ ಕಾಣಿಕೆ ನೀಡಿದರು. ಸ್ಯಾಮ್ ಕರನ್ ಎಸೆದ ಕೊನೆ ಓವರ್ನಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ್ರು.
ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 196 ರನ್ಗಳ ಬಿಗ್ ಸ್ಕೋರ್ ಕಲೆಹಾಕಿತು. ಚೆನ್ನೈ ಪರ ನೂರ್ ಅಹ್ಮದ್ 3, ಮತೀಶಾ ಪತಿರಣ 2, ಅಶ್ವಿನ್, ಖಲೀಲ್ ಅಹ್ಮದ್ ತಲಾ 1 ವಿಕೆಟ್ ಕಬಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್