/newsfirstlive-kannada/media/post_attachments/wp-content/uploads/2025/03/KOHLI-Dhoni-1.jpg)
ಐಪಿಎಲ್ ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಸಮಾಧಾನದ ನಡುವೆ ಹೈದ್ರಾಬಾದ್ ವಿರುದ್ಧ ಸೋತಿರುವುದು ಹೆಚ್ಚು ನೋವು ನೀಡುತ್ತಿದೆ. ಇದರಿಂದ ತಂಡಕ್ಕೆ, ಮತ್ತೊಂದು ಟೆನ್ಶನ್ ಶುರುವಾಗಿದೆ. ಪ್ಲೇ ಆಫ್ಗೂ ಮೊದಲು ನಡೆಯೋ ಕ್ಲೈಮ್ಯಾಕ್ಸ್ ಪಂದ್ಯಗಳಲ್ಲಿ, ಆರ್ಸಿಬಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದ್ದು ಇದೀಗ ಚೆನ್ನೈ ಗೆಲುವಿಗೆ ಆರ್ಸಿಬಿ ಪ್ರಾರ್ಥಿಸುವಂತೆ ಆಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ನ ಪಂದ್ಯ ನಡೆಯುತ್ತಿದೆ. ಈಗಾಗಲೇ ಟಾಸ್ ಗೆದ್ದಿರುವ ಚೆನ್ನೈ ತಂಡ ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯ ಧೋನಿ ಪಡೆ ಗೆಲುವು ಪಡೆದರೆ ಏನು ಪ್ರಯೋಜನ ಇಲ್ಲ. ಆದರೆ ಈ ಗೆಲುವು ಆರ್ಸಿಬಿ ಅತ್ಯಂತ ಮುಖ್ಯವಾಗಿದೆ.
ಇದನ್ನೂ ಓದಿ: ತನ್ನ ಅಭಿಮಾನಿ ಕುಟುಂಬಕ್ಕೆ ಹಣ ನೀಡಿದ ಸಚಿವ ಜಮೀರ್ ಅಹ್ಮದ್.. ಎಷ್ಟು ಲಕ್ಷ?
ಏಕೆಂದರೆ ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಚೆನ್ನೈ ತಂಡ ಗೆಲುವು ಸಾಧಿಸಿದರೆ, ಗುಜರಾತ್ ಒಟ್ಟು 14 ಪಂದ್ಯಗಳಿಂದ 18 ಅಂಕಗಳಿಗೆ ಫಿಕ್ಸ್ ಆಗಲಿದೆ. ಇದರಿಂದ ಆರ್ಸಿಬಿಗೆ ಇನ್ನೊಂದು ಪಂದ್ಯ ಇರುವುದರಿಂದ ಲಕ್ನೋ ವಿರುದ್ಧ ಗೆಲುವು ಪಡೆದರೆ ಒಟ್ಟು 19 ಅಂಕಗಳಿಂದ ಟಾಪ್- 2 ಸ್ಥಾನ ಸಿಗಲಿದೆ. ಈ ಸ್ಥಾನ ಸಿಕ್ಕರೇ ಫೈನಲ್ ಹೋಗಲು ಸುಲಭವಾಗುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಪಡೆಯನ್ನು ಧೋನಿ ಪಡೆ ಮಣ್ಣು ಮುಕ್ಕಿಸಿದರೆ ಆರ್ಸಿಬಿಗೆ ಲಾಭದಾಯಕವಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿಯಲ್ಲಿ ಆರ್ಸಿಬಿಗೆ ಬದ್ಧ ವೈರಿಯಾದರೂ ಪ್ರತಿ ಬಾರಿ ಟ್ರೋಫಿಯ ಕನಸು ನುಚ್ಚು ನೂರು ಮಾಡುತ್ತಿರುವ ತಂಡ ಹೈದ್ರಾಬಾದ್ ಆಗಿದೆ. ಈಗಾಗಲೇ ಹೈದ್ರಾಬಾದ್ ತಂಡ ಆರ್ಸಿಬಿಯನ್ನು ಸೋಲಿಸಿ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಚೆನ್ನೈ ಟೀಮ್ ಇಂದು ಗೆಲುವು ಸಾಧಿಸಿದರೆ ಬೆಂಗಳೂರು ತಂಡಕ್ಕೆ ಟಾಪ್-2 ಸ್ಥಾನಕ್ಕೆ ಇನ್ನೊಂದು ಅವಕಾಶವಂತೂ ಇದ್ದೇ ಇರುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ