newsfirstkannada.com

ಕನ್ನಡಿಗ ರಾಚಿನ್​ ಕಮಾಲ್​​.. ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಚೆನ್ನೈ

Share :

Published March 22, 2024 at 11:52pm

Update March 22, 2024 at 11:54pm

    ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​​

    ಮೊದಲ ಐಪಿಎಲ್​ ಪಂದ್ಯದಲ್ಲೇ ಚೆನ್ನೈಗೆ ಭರ್ಜರಿ ಗೆಲುವು

    ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಹೀನಾಯ ಸೋಲು

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಚೆನ್ನೈ ಗೆದ್ದು ಬೀಗಿದೆ.

ಆರ್​​ಸಿಬಿ ನೀಡಿದ 174 ರನ್​ಗಳ ಬೆನ್ನತ್ತಿದ ಚೆನ್ನೈ ಪರ ರಾಚಿನ್ ರವೀಂದ್ರ 37, ಗಾಯಕ್ವಾಡ್​​ 15, ರಹಾನೆ 19, ಮಿಚೆಲ್​​ 22, ರವೀಂದ್ರ ಜಡೇಜಾ 25, ದುಬೆ 38 ರನ್​ ಗಳಿಸಿ ಚೆನ್ನೈ ತಂಡವನ್ನು ಗೆಲ್ಲಿಸಿದ್ರು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಬರೋಬ್ಬರಿ 8 ಫೋರ್​ ಸಮೇತ 35 ರನ್​ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್​​​ ರಾಚಿನ್​ ರವೀಂದ್ರಗೆ ಕ್ಯಾಚ್​ ನೀಡಿದ್ರು.

ಫಾಫ್​ ಡುಪ್ಲೆಸಿಸ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​​ ಕೇವಲ ಮೂರು ಬಾಲ್​ ಆಡಿ ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಎಂ.ಎಸ್​ ಧೋನಿಗೆ ಕ್ಯಾಚ್​ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ರಜತ್​​ ಮಾಡಿದ ತಪ್ಪನ್ನೇ ಮಾಡಿದ್ದಾರೆ. ಅದೇ ಮಾದರಿ ಬಾಲ್​ ಮುಟ್ಟಿ ಧೋನಿಗೆ ಕ್ಯಾಚ್​ ನೀಡಿದ್ದಾರೆ.

ಇನ್ನು, ಆರ್​​ಸಿಬಿ ಪರ ಓಪನಿಂಗ್​​​ ಮಾಡಿದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಚ್ಚರಿ ರೀತಿಯಲ್ಲಿ ಔಟ್​ ಆಗಿದ್ದಾರೆ. ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಸಿಕ್ಸ್​ ಹೊಡೆಯಲು ಹೋದ ಕೊಹ್ಲಿಯದ್ದು ಫೋರಾ ಅಥವಾ ಔಟಾ ಎಂದು ಅಂಪೈರ್​ ಕನ್​ಫ್ಯೂಸ್​ ಆದರು. ಕೊಹ್ಲಿ 20 ಬಾಲ್​ನಲ್ಲಿ 1 ಸಿಕ್ಸರ್​ನೊಂದಿಗೆ 21 ರನ್​ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.

21 ಬಾಲ್​ ಎದುರಿಸಿದ ಕ್ಯಾಮೆರಾನ್​ ಗ್ರೀನ್​ 1 ಫೋರ್​ ಸಮೇತ 18 ರನ್​ ಸಿಡಿಸಿದ್ರು. ಬಳಿಕ ಕ್ರೀಸ್​ಗೆ ಬಂದ ಅನೂಜ್​ ರಾವತ್​​​ ಸಿಎಸ್​ಕೆ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 25 ಬಾಲ್​ನಲ್ಲಿ 3 ಸಿಕ್ಸರ್​​, 4 ಫೋರ್​ ಸಮೇತ 48 ರನ್​ ಚಚ್ಚಿದ್ರು. ಎಂದಿನಂತೆ ಈ ಬಾರಿ ದಿನೇಶ್​ ಕಾರ್ತಿಕ್​ ಮೋಡಿ ಮಾಡಿದ್ರು. ಕೇವಲ 25 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಬಾರಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ರಾಚಿನ್​ ಕಮಾಲ್​​.. ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಚೆನ್ನೈ

https://newsfirstlive.com/wp-content/uploads/2024/03/CSK-win.jpg

Load More