ಅಂತಿಮ ಪಂದ್ಯದಲ್ಲಿ ಚೆನ್ನೈಗೆ ಜಯ.. ಸೀಸನ್- 18ಕ್ಕೆ ಗೆಲುವಿನೊಂದಿಗೆ ವಿದಾಯ ಹೇಳಿದ ಧೋನಿ ಪಡೆ!

author-image
Bheemappa
Updated On
ಅಂತಿಮ ಪಂದ್ಯದಲ್ಲಿ ಚೆನ್ನೈಗೆ ಜಯ.. ಸೀಸನ್- 18ಕ್ಕೆ ಗೆಲುವಿನೊಂದಿಗೆ ವಿದಾಯ ಹೇಳಿದ ಧೋನಿ ಪಡೆ!
Advertisment
  • ಲೀಗ್​ನ ಕೊನೆ ಪಂದ್ಯದಲ್ಲಿ ಗುಜರಾತ್​ಗೆ ಹೀನಾಯ ಸೋಲು
  • ಈ ಸೀಸನ್​ನಲ್ಲಿ ಒಟ್ಟು ಎಷ್ಟು ಪಂದ್ಯಗಳನ್ನು ಸಿಎಸ್​ಕೆ ಗೆದ್ದಿದೆ?
  • ಕೇವಲ 23 ಎಸೆತದಲ್ಲಿ 57 ರನ್​ ಬಾರಿಸಿದ ಜೂನಿಯರ್​ ಎಬಿಡಿ

2025ರ ಐಪಿಎಲ್​ನ ಕೊನೆಯ ಲೀಗ್​​ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ವಿರುದ್ಧ ಭರ್ಜರಿಯಾಗಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿದಾಯ ಹೇಳಿದೆ. ಈ ಸೀಸನ್​​ನಲ್ಲಿ 14 ಪಂದ್ಯಗಳ ಪೈಕಿ 4 ರಲ್ಲಿ ಮಾತ್ರ ಚೆನ್ನೈ ಗೆಲುವು ಪಡೆದಂತೆ ಆಗಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನಾಯಕ ಧೋನಿ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂದುಕೊಂಡಂತೆ ಬೃಹತ್​ ರನ್​ಗಳನ್ನು ಕಲೆ ಹಾಕಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಆಯುಷ್ 3 ಫೋರ್. 3 ಸಿಕ್ಸರ್ ಸಮೇತ ಕೇವಲ 17 ಬಾಲ್​ಗಳಲ್ಲಿ 34 ರನ್​ ಬಾರಿಸಿದರು. ಇನ್ನೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಕಾನ್ವೆ, ಕೇವಲ 35 ಬಾಲ್​ಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ಗಳಿಂದ 52 ರನ್​ ಚಚ್ಚಿ ಔಟ್ ಆದರು. ಉರ್ವಿಲ್ ಪಟೇಲ್, ಕೇವಲ 19 ಎಸೆತದಲ್ಲಿ 4 ಫೋರ್, 2 ಸಿಕ್ಸರ್​ನಿಂದ 37 ಬಾರಿಸಿದರು.

ಇದನ್ನೂ ಓದಿ:ಬದ್ಧವೈರಿ ಆದರೂ ಚೆನ್ನೈ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ RCB.. ಯಾಕೆ ಗೊತ್ತಾ?

publive-image

ಮಧ್ಯಮ ಕ್ರಮಾಂಕದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರು ಕೇವಲ 23 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳಿಂದ ಭರ್ಜರಿ 57 ರನ್​ ಬಾರಿಸಿದರು. ಆಲ್​ರೌಂಡರ್​ ರವೀಂದ್ರ ಜಡೇಜಾ (21) ರನ್​ ಗಳಿಸಿದರು. ಇದರಿಂದ ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್​ಗೆ 231 ರನ್​​ಗಳ ಬೃಹತ್​ ಗುರಿ ನೀಡಿತ್ತು. ಗುಜರಾತ್ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ವಿಕೆಟ್​ ಪಡೆದು ಸಂಭ್ರಮಿಸಿದರು.

231 ರನ್​ಗಳ ಗುರಿ ಬೆನ್ನಟ್ಟದ್ದ ಗುಜರಾತ್ ಪಡೆ ಆರಂಭದಲ್ಲೇ ಎಡವಿತು. 13 ರನ್​ ಗಳಿಸಿ ಆಡುತ್ತಿದ್ದ ನಾಯಕ ಶುಭ್​ಮನ್ ಗಿಲ್​ ಔಟ್ ಆದರು. ಇವರ ನಂತರ ಬಂದ ಜೋಶ್ ಬಟ್ಲರ್ ಕೇವಲ 05 ರನ್​ಗೆ ಪೆವಿಲಿಯನ್ ದಾರಿ ಹಿಡಿದರು. ರುದರ್​ಫೋರ್ಡ್​ ಡಕೌಟ್​ ಆಗಿ ಹೊರ ನಡೆದರೇ, ಶಾರುಕ್​ಖಾನ್ ಕೊಂಚ ಹೋರಾಟ ನಡೆಸಿ 19 ರನ್​ಗೆ ಕ್ಯಾಚ್ ಕೊಟ್ಟರು.

ಇನ್ನೊಂದೆಡೆ ಕ್ರೀಸ್​ನಲ್ಲಿದ್ದ ಓಪನರ್​ ಸಾಯಿ ಸುದರ್ಶನ್ ಒಂದು ಸಿಕ್ಸರ್​ ಬಾರಿಸದೇ 6 ಬೌಂಡರಿಗಳಿಂದ 41 ರನ್​ಗಳಿಸಿ ಆಡುವಾಗ ಔಟ್ ಆದರು. ಇಲ್ಲಿಗೆ ಗುಜರಾತ್ ಟೈಟನ್ಸ್​ ಬ್ಯಾಟಿಂಗ್ ಬಲ ಕುಸಿಯಿತು. ರಾಹುಲ್ ತೈವಾಟಿಯಾ 14, ಅರ್ಶದ್ ಖಾನ್ 20 ರನ್​ ಬಿಟ್ಟರೇ ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಗುಜರಾತ್​ ಟೈಟನ್ಸ್​ 18.3 ಓವರ್​ಗಳಲ್ಲಿ ಕೇವಲ 147 ರನ್​ಗೆ ಆಲೌಟ್​ ಆಗಿ ಸೋಲೋಪ್ಪಿಕೊಂಡಿತು. ಅಂತಿಮ ಪಂದ್ಯದಲ್ಲಿ 83 ರನ್​ಗಳ ಭರ್ಜರಿಯಾಗಿ ಗೆದ್ದು ನಗುವಿನೊಂದಿಗೆ ಈ ಸೀಸನ್​ಗೆ ಚೆನ್ನೈ ವಿದಾಯ ಹೇಳಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment