ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.. ವೈದ್ಯ ಕುಟುಂಬವೇ ಮಾಡಿಕೊಂಡ ಅನಾಹುತ; ಕಾರಣವೇನು?

author-image
admin
Updated On
ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.. ವೈದ್ಯ ಕುಟುಂಬವೇ ಮಾಡಿಕೊಂಡ ಅನಾಹುತ; ಕಾರಣವೇನು?
Advertisment
  • ಕಾರು ಚಾಲಕ ಮನೆ ಬಳಿ ಬಂದಾಗ ಬೆಳಕಿಗೆ ಬಂದ ದುರಂತ
  • ಪತ್ನಿ, ಇಬ್ಬರು ಮಕ್ಕಳ ಜೊತೆ ಸಾವಿಗೆ ಶರಣಾಗಿರುವ ವೈದ್ಯ
  • ವೈದ್ಯರ ಒಬ್ಬ ಮಗ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ

ಚೆನ್ನೈ: ಸಾಲದ ಶೂಲ ಅನ್ನೋದು ಯಾರನ್ನು ಸುಮ್ಮನೆ ಬಿಡೋದಿಲ್ಲ. ಇದಕ್ಕೆ ತಮಿಳುನಾಡಿನ ಈ ವೈದ್ಯ ಕುಟುಂಬದ ಘೋರ ದುರಂತವೇ ಉದಾಹರಣೆ. ಭಾರೀ ಸಾಲ ಮಾಡಿಕೊಂಡು ಒತ್ತಡಕ್ಕೆ ಸಿಲುಕಿದ್ದ ವೈದ್ಯ ಕುಟುಂಬ ಸಾವಿಗೆ ಶರಣಾಗಿದೆ.

ವೈದ್ಯ ಬಾಲಮುರುಗನ್ ಅವರು ಚೆನ್ನೈನಲ್ಲಿ ಅಲ್ಟ್ರಾ ಸೌಂಡ್ ಸೆಂಟರ್‌ಗಳನ್ನು ನಡೆಸುತ್ತಿದ್ದ. ಇಂದು ಬೆಳಗ್ಗೆ ಇವರ ಕಾರು ಚಾಲಕ ಮನೆ ಬಳಿ ಬಂದಾಗ ಯಾರೂ ಬಾಗಿಲು ತೆಗೆದಿರಲಿಲ್ಲ. ಕಾರು ಚಾಲಕ ಪೊಲೀಸರಿಗೆ ಮಾಹಿತಿ ಕೊಟ್ಟ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಯ್ಯೋ ಪಾಪ.. ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ 4 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು? 

52 ವರ್ಷದ ವೈದ್ಯ ಡಾ. ಬಾಲಮುರುಗನ್ ಧ್ವನಿಶಾಸ್ತ್ರಜ್ಞ ಆಗಿದ್ದರು. 47 ವರ್ಷದ ಪತ್ನಿ ಸುಮತಿ ವಕೀಲೆಯಾಗಿದ್ದರು. ಮಕ್ಕಳಾದ ಜಸ್ವಂತ್ ಕುಮಾರ್, ಲಿಂಗೇಶ್ ಕುಮಾರ್ ಕುಟುಂಬ ಚೆನ್ನೈನ ಅಣ್ಣಾನಗರದಲ್ಲಿ ವಾಸಿಸುತ್ತಿತ್ತು. ಡಾ.ಬಾಲಮುರುಗನ್ ದಂಪತಿಯ ಒಬ್ಬ ಮಗ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಮತ್ತೊಬ್ಬ 11ನೇ ತರಗತಿ ಓದುತ್ತಿದ್ದ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವೈದ್ಯ ಕುಟುಂಬವೇ ಸಾವಿಗೆ ಶರಣಾಗಿದೆ ಎನ್ನಲಾಗಿದೆ. ವೈದ್ಯ ಡಾ. ಬಾಲಮುರುಗನ್ ಭಾರೀ ಸಾಲ ಮಾಡಿದ್ದರು. ಹಣ ಸಾಲ ನೀಡಿದವರಿಂದ ಕಿರುಕುಳ ಇದ್ದು, ಆರ್ಥಿಕ ಸಮಸ್ಯೆ ಹಾಗೂ ಸಾಲದಿಂದ ಹೊರ ಬರಲಾರದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment