/newsfirstlive-kannada/media/post_attachments/wp-content/uploads/2024/07/Young.jpg)
ಭಾರತದ ಯುವಕರೊಂದಿಗೆ ತಾನು ಯಾಕೆ ಡೇಟ್ ಮಾಡಲ್ಲ ಅನ್ನೋದರ ಬಗ್ಗೆ ರಿಲೇಷನ್ಶಿಪ್ ಕೋಚ್ ಚೇತನಾ ಚಕ್ರವರ್ತಿ ಮಾತಾಡಿದ್ದಾರೆ. ಇಂಡಿಯನ್ ಯೂಥ್ಗೆ ಡೇಟಿಂಗ್, ರೊಮಾನ್ಸ್ ಸೇರಿ ಹಲವು ವಿಷಯಗಳಲ್ಲಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ ಎಂದು ಹೇಳಿಕೆ ನೀಡಿರುವ ಚೇತನಾ ಅವರ ವಿಡಿಯೋ ಸಖತ್ ವೈರಲ್ ಆಗಿದೆ.
ಚೇತನಾ ಚಕ್ರವರ್ತಿ ಹೇಳಿದ್ದೇನು..?
ಭಾರತೀಯ ಪುರುಷರಿಗೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲ. ಈ ಬಗ್ಗೆ ಯಾರು ಅವರಿಗೆ ಕಲಿಸಿಲ್ಲ. ಇವರು ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಅಸಮರ್ಥರಾದಾಗ ಮಹಿಳೆಯರ ಮೇಲೆ ಗೂಬೆ ಕೂರಿಸುತ್ತಾರೆ. ಮಹಿಳೆಯರನ್ನು ಬಹಳ ಅಗ್ರೆಸ್ಸಿವ್ ಎಂದು ಕರೆಯುತ್ತಾರೆ. ಏನು ಹೇಳಬೇಕು ಎಂದು ತೋಚದೆ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಚೇತನಾ ಗಂಭೀರ ಆರೋಪ ಮಾಡಿದ್ದಾರೆ.
View this post on Instagram
ಹೀಗೆ ಮುಂದುವರಿದ ಅವರು, ಭಾರತದ ಪುರುಷರಿಗೆ ರೊಮಾನ್ಸ್, ಡೇಟಿಂಗ್ ಬಗ್ಗೆ ಏನು ಗೊತ್ತೇ ಇಲ್ಲ. ಇವರ ಪ್ರಕಾರ ಪ್ರಣಯ ಎಂದರೆ ತಿಂಗಳಿಗೊಮ್ಮೆ ಊಟಕ್ಕೆ ಹೋಗುವುದು. ರೊಮಾನ್ಸ್ ಎನ್ನುವುದು ಪ್ರತಿದಿನ ನಡೆಯುತ್ತದೆ. ಸಣ್ಣಪುಟ್ಟ ಸನ್ನೆಗಳಿಂದಲೂ ರೊಮಾನ್ಸ್ ಮಾಡಬಹುದು. ಇದು ಭಾರತೀಯ ಹುಡುಗರಿಗೆ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಇವರಿಗೆ ಅದು ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲ ಎಂದಿದ್ದಾರೆ ಚೇತನಾ.
ಮನೆ ನಿರ್ವಹಣೆ ಬಗ್ಗೆ ಕೂಡ ಅರ್ಧಂಬರ್ಧ ಗೊತ್ತಿರುತ್ತದೆ. ಇವರಿಗೆ ಸಂಪೂರ್ಣ ಜವಾಬ್ದಾರಿ ಬಗ್ಗೆ ಅರ್ಥವೇ ಆಗುವುದಿಲ್ಲ. ಏನೋ ಕೆಲಸ ಮಾಡಿ ನಿಮ್ಮ ಪಾರ್ಟನರ್ಗೆ ಫೇವರ್ ಮಾಡುತ್ತಿದ್ದೇನೆ ಎಂದು ಯೋಚಿಸುವುದು ತಪ್ಪು ಎಂದಿದ್ದಾರೆ ಚೇತನಾ. ಈಗ ಚೇತನಾ ಹೇಳಿಕೆಗೆ ಯುವಕರು ಓಪನ್ ಚಾಲೆಂಜ್ ಮಾಡಿದ್ದಾರೆ.
ಇದನ್ನೂ ಓದಿ:Attention Please: ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ