/newsfirstlive-kannada/media/post_attachments/wp-content/uploads/2024/10/raw-curry-leaves-1-1.jpg)
ಸದ್ಯ ಸೋಷಿಯಲ್ ಮೀಡಿಯಾ ಅನ್ನೋದು ಬ್ಯೂಟಿಷಿಯನ್​ಗಳ, ಚೆಫ್​ಗಳದ್ದೆ ದರ್ಬಾರು ಜಾಸ್ತಿ ಇದೆ. ಪ್ರತಿಯೊಂದು ಸಮಸ್ಯೆಗೂ ಒಂದಿಲ್ಲೊಂದು ಪರಿಹಾರವನ್ನು ಹಿಡಿದುಕೊಂಡು ವಿಡಿಯೋಗಳ ಮೂಲಕ ನಮ್ಮ ಎದುರು ಪ್ರತ್ಯಕ್ಷವಾಗುತ್ತಾರೆ. ಹಾಗಂತ ಅಲ್ಲಿ ಸಿಗುವ ಎಲ್ಲ ಪರಿಹಾರಗಳನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು ಅಂತ ಇಲ್ಲ. ಅದರ ಬಗ್ಗೆ ನುರಿತ ತಜ್ಞರಿರುತ್ತಾರೆ ಅವರ ಸಲಹೆಗಳನ್ನು ಪಡೆಯಲೇಬೇಕು. ಇಲ್ಲವಾದಲ್ಲಿ ಒಂದು ಹೋಗಿ ಒಂಬತ್ತು ಆಯ್ತು ಅಂತಾರಲ್ಲ ಆ ರೀತಿ ಆಗುವ ಸಾಧ್ಯತೆಗಳು ಇರುತ್ತದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಸಿ ಕರಿಬೇವು ತಿಂದರೆ ತಲೆ ಕೂದಲು ಉದುರುವುದಿಲ್ಲ ಎಂದು. ಕೇಶ ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು ಹೇಳಲಾಗುತ್ತಿದೆ. ಸದ್ಯ ಈ ತರಹದ ಸಲಹೆ ಇರುವ ವಿಡಿಯೋಗಳು ಈಗ ಟ್ರೆಂಡಿಂಗ್​ನಲ್ಲಿವೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅಂತ ನೋಡುವುದಾದ್ರೆ.
/newsfirstlive-kannada/media/post_attachments/wp-content/uploads/2024/10/raw-curry-leaves-1-1.jpg)
ನವದೆಹಲಿಯ ಇಂದ್ರಪ್ರಸ್ಥದಲ್ಲಿರುವ ಅಪೋಲ್ ಆಸ್ಪತ್ರೆಯ ಡರ್ಮಟೊಲೊಜಿ ಸಿನಿಯರ್ ಕನ್ಸ್​ಲ್ಟಂಟ್ ಹೇಳುವ ಪ್ರಕಾರ ಹಸಿ ಕರಿಬೇವು ತಿನ್ನುವುದರಿಂದ ನಿಜಕ್ಕೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅದು ಕೂಡ ಕೆಲವು ಜನರಿಗೆ ಮಾತ್ರ ಎಂದು ಹೇಳುತ್ತಾರೆ. ಅಂದರೆ ಅತಿಹೆಚ್ಚು ಕರಿಬೇವು ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಹಾಗೂ ಪಚನಕ್ರಿಯೆಯ ತೊಂದರೆಯಂತಹ ಅನುಭವಗಳಾಗುತ್ತವೆ. ಅಂತವನ್ನು ಹೊರತುಪಡಿಸಿ ಕರಿಬೇವನ್ನು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಬಹಳ ಉಪಯೋಗವಿದೆ ಎನ್ನುತ್ತಾರೆ. ಅದು ತನ್ನ ನ್ಯೂಟ್ರಿಷನಲ್ ಪ್ರೋಫೈಲ್ ಹಾಗೂ ಜೈವಿಕ ಪರಿಣಾವವನ್ನು ಉಳಿಸಿ ಹೋಗುತ್ತದೆ.
ಕರಿಬೇವನ್ನು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವ ಅಪಾಯವು ಇರುವುದಿಲ್ಲ ಆದ್ರೆ ಗರ್ಭಿಣಿಯರು ಈ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಹಸಿ ಕರಿಬೇವನ್ನು ತಿನ್ನುವುದರಿಂದ ಅವರ ಅಂಡಾಶಯದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಹಸಿ ಕರಿಬೇವು ತಿನ್ನವುದರಿಂದಾಗಿ ದೇಹಕ್ಕೆ ವಿಟಿಮಿನ್ ಎ,ಬಿ,ಸಿ ಮತ್ತು ಡಿ ಈ ನಾಲ್ಕು ಪೂರೈಕೆ ಆಗುತ್ತವೆ. ಅದು ಮಾತ್ರವಲ್ಲ ಕರಿಬೇವಲ್ಲಿ ಕ್ಯಾಲ್ಸಿಯಂ, ಐರನ್ ಮತ್ತು ಪೊಸ್ಪೊರಸ್​ನಂತಹ ಮಿನರಲ್ಸ್​ಗಳು ಕೂಡ ಇವೆ . ಹೀಗಾಗಿ ಹಸಿ ಕರಿಬೇವು ತಿನ್ನುವುದರಿಂದ ಚರ್ಮದ ಕಾಂತಿಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತವೆ. ಹೊಸ ಸೆಲ್ ಬೆಳವಣಿಗೆಗಳಿಗೂ ಕೂಡ ಕರಿಬೇವು ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ.
ಕೇವಲ ಚರ್ಮ ಕಾಂತಿಗೆ ಮಾತ್ರವಲ್ಲ, ಕೂದಲು ಆರೋಗ್ಯಕ್ಕೂ ಕೂಡ ತುಂಬಾ ಸಹಾಯಕಾರಿ. ಇದರಿಲ್ಲಿರುವ ವಿಟಮಿನ್ಸ್ ಹಾಗೂ ಮಿನರಲ್ಸ್​ಗಳು ಕೂದಲಿಗೆ ಪೋಷಣೆಯನ್ನು ನೀಡಿ, ತಲೆ ಕೂದಲು ಬೆಳವಣಿಗೆಗೆ ದೊಡ್ಡ ಸಹಾಯಕಾರಿಯಾಗುತ್ತದೆ ಎಂದು ಡರ್ಮಟಾಲಿಸ್ಟ್ ಡಾ. ನಿರುಪಮಾ ಪರ್ವಾಂಡ್ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us