/newsfirstlive-kannada/media/post_attachments/wp-content/uploads/2025/01/NAXAL_ATTACK.jpg)
ಗಡಿಯಲ್ಲಿ ದೇಶವಿರೋಧಿಗಳ ಹಾಗೂ ಚೀನಾ ಹದ್ದು ಮೀರಿ ವರ್ತಿಸುತ್ತಿದೆ. ಇದಕ್ಕೆ ನಮ್ಮ ಸೈನಿಕರು ಕೂಡ ಖಡಕ್ಕಾಗಿ ಕೌಂಟರ್ ಕೊಡುತ್ತಿದ್ದಾರೆ. ಇತ್ತ ದೇಶದ ಒಳಗೂ ವಿರೋಧಿಗಳ ಕಾಟ ಹೆಚ್ಚಾಗಿದೆ. ಸೈನಿಕರನ್ನೇ ಟಾರ್ಗೆಟ್ ಮಾಡಿ ವಾಹನವನ್ನು ಸ್ಫೋಟಿಸಿ ಮಾವೋವಾದಿಗಳು ಅಟ್ಟಹಾಸಗೈದಿದ್ದಾರೆ. ಇದಕ್ಕೆ ಪ್ರತೀಕಾರದ ಪ್ರತಿಜ್ಞೆ ಕೂಡ ಮಾಡಲಾಗಿದೆ.
ಛತ್ತೀಸ್‌ಗಢದಲ್ಲಿ ಮುಂದುವರೆದ ನಕ್ಸಲರ ಅಟ್ಟಹಾಸ
ಉಡುಪಿಯಲ್ಲಿ ಇತ್ತೀಚೆಗಷ್ಟೇ ನಕ್ಸಲ್ ನಾಯಕ ವಿಕ್ರಮ್ ಗೌಡ ಎಂಬ ನಕ್ಸಲ್ ನಾಯಕನನ್ನು ಹೊಡೆದುರುಳಿಸಲಾಗಿತ್ತು. ದಕ್ಷಿಣದಲ್ಲಿ ನಕ್ಸಲರನ್ನು ಹತ್ತಿಕ್ಕಲಾಗುತ್ತಿದ್ರೆ ಅತ್ತ ಉತ್ತರ ಭಾರತದಲ್ಲಿ ನಕ್ಸಲರು ಅಕ್ರಶಃ ಅಟ್ಟಹಾಸಗೈದಿದ್ದಾರೆ. ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಸೈನಿಕರ ವಾಹನವನ್ನೇ ಗುರಿಯಾಗಿಸಿಕೊಂಡು ನಕ್ಸಲರು ಮಾಡಿದ ಐಇಡಿ ಸ್ಫೋಟದಿಂದ 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಬೇದ್ರೆ-ಕುತ್ರು ರಸ್ತೆಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ದಂತೇವಾಡ ಜಿಲ್ಲಾ ಮೀಸಲು ಪಡೆಯ 8 ಯೋಧರು, ಓರ್ವ ಚಾಲಕ ಹುತಾತ್ಮರಾಗಿದ್ದಾರೆ. ಈ ಸ್ಫೋಟದಲ್ಲಿ ಕೆಲವು ಯೋಧರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೈನಿಕರು ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟಿಸಿದ ಸ್ಥಳದಲ್ಲಿ ಬೃಹತ್ ಹೊಂಡ ಬಿದ್ದಿದೆ.
ನಕ್ಸಲರ ಅಟ್ಟಹಾಸಕ್ಕೆ 9 ಯೋಧರು ಹುತಾತ್ಮ
- ಛತ್ತೀಸ್‌ಗಢದಲ್ಲಿ ಮಾವೋವಾದಿ ನಕ್ಸಲೀಯರಿಂದ ಅಟ್ಟಹಾಸ
- ಮಾವೋವಾದಿಗಳು ವಾಹನ ಸ್ಫೋಟಿಸಲು ಸುಧಾರಿತ ಸ್ಫೋಟಕ ಬಳಕೆ
- ಈ ಸೇನಾ ವಾಹನದಲ್ಲಿ 20 ಡಿಆರ್‌ಜಿ ಯೋಧರು ಪ್ರಯಾಣ
- ದಾಂತೇವಾಡ, ನಾರಾಯಣಪುರ್, ಬಿಜಾಪುರಗಳಲ್ಲಿ ಕಾರ್ಯಾಚರಣೆ
- ಜಂಟಿ ಕಾರ್ಯಾಚರಣೆ ಬಳಿಕ ವಾಪಸ್ಸಾಗುತ್ತಿದ್ದಾಗ ಐಇಡಿ ಸ್ಫೋಟ
- ನಿನ್ನೆ ಭದ್ರತಾ ಪಡೆಗಳಿಂದ ಮಾವೋವಾದಿಗಳ ಮೇಲೆ ದಾಳಿ
- ಇಬ್ಬರು ಮಹಿಳೆಯರು ಸೇರಿ ಐವರು ಬಂಡುಕೋರರ ಹತ್ಯೆ
- ಎಕೆ 47 ಮತ್ತು ಸೆಲ್ಫ್ ಲೋಡ್ ರೈಫಲ್ಸ್ ವಶಪಡಿಸಿಕೊಳ್ಳಲಾಗಿತ್ತು
- ಕೆಲಸ ಮುಗಿಸಿ ವಾಪಸ್ ಆಗುವಾಗ ಯೋಧರ ಮೇಲೆ ದಾಳಿ
ಇದನ್ನೂ ಓದಿ:ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಬಿಗ್ಶಾಕ್.. ಕೋಟಿ ಕೋಟಿ ಹಣ ಕೇಳಿದ ನಿರ್ಮಾಪಕ, ಯಾಕೆ?
ಇನ್ನು ಬಸ್ತಾರ್‌ನ ಬಿಜೆಪಿ ಸಂಸದ ಮಹೇಶ್ ಕಶ್ಯಪ್ ದಾಳಿಯನ್ನು ಹೇಡಿತನ ಎಂದು ಜರಿದಿದ್ದಾರೆ. ಈ ಘಟನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನಾನು ನನ್ನ ಸಂತಾಪ ಸೂಚಿಸುತ್ತೇನೆ. ನಾವು ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. 2026ರ ವೇಳೆಗೆ ಬಸ್ತಾರ್ ಅನ್ನು ಮಾವೋವಾದಿಗಳಿಂದ ತೆರವುಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣದ ರಾಜ್ಯಗಳಲ್ಲಿ ನಕ್ಸಲರನ್ನು ಹೊಡೆದುರುಳಿಸುವ ಮೂಲಕ ಹಾಗೂ ಅವರ ಮನವೊಲಿಸಿ ಸಮಾಜಮುಖಿಗಳನ್ನಾಗಿ ಮಾಡಲಾಗುತ್ತಿದೆ. ಆದರೆ ಉತ್ತರದಲ್ಲಿ ನಕ್ಸಲರು ಯೋಧರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದು ನಿಜಕ್ಕೂ ದುರಂತ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ