ಐ ಲವ್​ ಯೂ ಹೇಳೋದ್ರಲ್ಲಿ ತಪ್ಪಿಲ್ಲ -ಪೋಕ್ಸೋ ಕೇಸ್​​ಗೆ ಸಂಬಂಧಿಸಿ ಹೈಕೋರ್ಟ್​ನಿಂದ ಮಹತ್ವದ ತೀರ್ಪು

author-image
Ganesh
Updated On
ಐ ಲವ್​ ಯೂ ಹೇಳೋದ್ರಲ್ಲಿ ತಪ್ಪಿಲ್ಲ -ಪೋಕ್ಸೋ ಕೇಸ್​​ಗೆ ಸಂಬಂಧಿಸಿ ಹೈಕೋರ್ಟ್​ನಿಂದ ಮಹತ್ವದ ತೀರ್ಪು
Advertisment
  • ಆರೋಪಿಯನ್ನು ಖುಲಾಸೆ ಮಾಡಿದ ಛತ್ತೀಸ್‌ಗಢ ಹೈಕೋರ್ಟ್​
  • ನ್ಯಾ.ಸಂಜಯ್ ಅಗರ್ವಾಲ್ ಏಕಸದಸ್ಯ ಪೀಠದಿಂದ ತೀರ್ಪು
  • ಏನಿದು ಪ್ರಕರಣ..? ಹೈಕೋರ್ಟ್ ಖುಲಾಸೆ ಮಾಡಿದ್ದೇಕೆ..?

ಛತ್ತೀಸ್‌ಗಢ ಹೈಕೋರ್ಟ್ (Chhattisgarh High court) ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಯಾಗಿದ್ದ ಯುವಕನ ಪ್ರಕರಣ ಒಂದನ್ನ ಖುಲಾಸೆಗೊಳಿಸಿದೆ.

ಸ್ಪಷ್ಟ ಲೈಂಗಿಕ ಉದ್ದೇಶವಿಲ್ಲದಿದ್ದಾಗ ‘ಐ ಲವ್ ಯು’ ಎಂದು ಹೇಳೋದನ್ನ ಲೈಂಗಿಕ ಕಿರುಕುಳ ಅಂತಾ ಪರಿಗಣಿಸಲಾಗುವುದಿಲ್ಲ ಅಂತಾ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸಂಜಯ್.ಎಸ್.ಅಗರ್ವಾಲ್ ಅವರನ್ನೊಳಗೊಂಡ ಏಕಸದಸ್ಯ ಪೀಠವು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಆರೋಪಿಯ ಉದ್ದೇಶ ಅಥವಾ ಬಲಿಪಶುವಿನ ವಯಸ್ಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆ ಒದಗಿಸಲು ವಿಫಲವಾಗಿದೆ ಎಂದು ಕೋರ್ಟ್​ ಹೇಳಿದೆ. ಆ ಮೂಲಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಮರವೇರಿ ಕೂತ ಸ್ವಾಮೀಜಿ.. 101 ದಿನ ಅಲ್ಲೇ ವಾಸ.. ಯಾಕಿರಬಹುದು..?

publive-image

ಛತ್ತೀಸ್‌ಗಢ ಧಮತರಿ ಜಿಲ್ಲೆಯ ಕುರುಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮನೆಗೆ ಹೋಗ್ತಿದ್ದಾಗ ಯುವಕನೋರ್ವ ಐ ಲವ್​ ಯೂ ಎಂದಿದ್ದಾನೆ ಅಂತಾ ಆರೋಪಿಸಿದ್ದಳು. ಆತ ಈ ಹಿಂದೆಯೂ ಅನೇಕ ಬಾರಿ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಡಿ (ಹಿಂಬಾಲಿಸುವುದು), 509 (ಮಹಿಳೆಯ ನಮ್ರತೆಗೆ ಧಕ್ಕೆ ತರುವುದು), ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(2)(ವಿಎ) ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಪ್ರಕರಣದಿಂದ ಖುಲಾಸೆ ಮಾಡಿತ್ತು.

ಇದನ್ನೂ ಓದಿ: ಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ್ದು ಯಾರೋ, ಬೆನ್ನು ತಟ್ಟಿಕೊಂಡಿದ್ದು ಮಾತ್ರ ಟ್ರಂಪ್​​..!

ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವ ಪ್ರಕರಣವು POCSO ಕಾಯ್ದೆಯಡಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಕಾನೂನು ಮಾನದಂಡಗಳನ್ನ ಪೂರೈಸಲ್ಲ ಎಂದು ಹೈಕೋರ್ಟ್ ಒತ್ತಿ ಹೇಳಿದೆ. ಅಟಾರ್ನಿ ಜನರಲ್ ಫಾರ್ ಇಂಡಿಯಾ ವರ್ಸಸ್ ಸತೀಶ್ (2021) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಕಾಯ್ದೆಯ ಸೆಕ್ಷನ್ 7ರಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವ ಸ್ಪಷ್ಟ ಉದ್ದೇಶದಿಂದ ಲೈಂಗಿಕ ಹೇಳಿಕೆಯನ್ನು ಬೆಂಬಲಿಸಬೇಕು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬೀದಿ ನಾಯಿಗಳ ರಾಕ್ಷಸೀ ಕೃತ್ಯ.. ವಾಕಿಂಗ್ ಬಂದಿದ್ದ ವೃದ್ಧನ ಜೀವ ತೆಗೆದು ಮಾಂಸ ತಿಂದಿವೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment