/newsfirstlive-kannada/media/post_attachments/wp-content/uploads/2023/07/GOAT04072023.jpg)
ಏನೋ ಮಾಡಲು ಹೋಗಿ, ಜನ ಹೆಂಗೆಲ್ಲ ಪ್ರಾಣ ಬಿಡ್ತಾರೆ ಅಂದರೆ ನೀವು ನಂಬಲೇಬೇಕು. ಛತ್ತೀಸ್​ಗಢದಲ್ಲಿ ದುರಂತವೊಂದು ಸಂಭವಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಏನಿದು ಕಥೆ..?
50 ವರ್ಷದ ಬಗರ್ ಸಾಯಿ ಎಂಬ ವ್ಯಕ್ತಿ, ಚತ್ತೀಸ್​ಗಢದ ಸುರಪುರ ಜಿಲ್ಲೆಯ ಮದನಪುರ ಗ್ರಾಮದ ನಿವಾಸಿ ಆಗಿದ್ದರು. ಇವರು ತಮ್ಮ ಸಂಕಷ್ಟ ಪರಿಹರಿಸಿ ಇಷ್ಟಾರ್ಥ ನೆರವೇರಿಸುವಂತೆ ದೇವರದಲ್ಲಿ ಹರಕೆ ಮಾಡಿಕೊಂಡಿದ್ದರು. ತನ್ನೆಲ್ಲ ಬೇಡಿಕೆಗಳನ್ನು ಈಡೇರಿಸಿದರೆ ಮೇಕೆಯನ್ನು ನೀಡೋದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು.
ತಮ್ಮ ಹರಕೆಯಂತೆ ಇತ್ತೀಚೆಗೆ ಖೊಪ ಡ್ಯಾಂ ಬಳಿಯಿರುವ ದೇವರಿಗೆ ಮೇಕೆ ಬಲಿಕೊಡಲು ಗ್ರಾಮಸ್ಥರನ್ನು ಕರೆದುಕೊಂಡು ಬಂದಿದ್ದರು. ಅದರಂತೆ ಬಗರ್ ಸಾಯಿ ಮೇಕೆಯನ್ನು ಬಲಿಕೊಟ್ಟರು. ನಂತರ ಗ್ರಾಮಸ್ಥರೆಲ್ಲ ಸೇರಿ ಮೇಕೆ ಮಾಂಸ ಕಟ್ ಮಾಡಿ ತಮಗೆ ಬೇಕಾದ ಅಡುಗೆ ಮಾಡಿದ್ದರು.
ಎಲ್ಲವೂ ಕೈಮೀರಿ ಹೋಗಿತ್ತು
ಬಗರ್ ಕೂಡ ಗ್ರಾಮಸ್ಥರ ಜೊತೆಯಲ್ಲೇ ಊಟ ಮಾಡಲು ಕೂತಿದ್ದ. ಈ ವೇಳೆ ಬಗರ್, ಮೇಕೆ ಮಾಂಸದ ಜೊತೆ ಬೆರೆತಿದ್ದ ಕಣ್ಣನನ್ನು ತಿನ್ನಲ್ಲು ಮುಂದಾಗಿದ್ದಾರೆ. ದುರಾದೃಷ್ಟ ಎಂಬಂತೆ ಮೇಕೆಯ ಕಣ್ಣು ಆತನ ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಊಟಕ್ಕೆ ಕೂತ ಜಾಗದಲ್ಲೇ ಆತ ಪ್ರಾಣವನ್ನೇ ಬಿಟ್ಟಿದ್ದಾನೆ ಎಂದು ವರದಿಯಾಗಿದೆ. ಹೇಗಾದರೂ ಮಾಡಿ, ತಮಗೆಲ್ಲ ಬಾಡೂಟ ಹಾಕಿಸಿದ್ದ ವ್ಯಕ್ತಿಯನ್ನು ಬದುಕಿಸಿಕೊಳ್ಳಬೇಕು ಅಂತಾ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಷ್ಟರಲ್ಲೇ ಎಲ್ಲವೂ ಕೈಮೀರಿ ಹೋಗಿತ್ತು. ಕುರಿ ಬಲಿಕೊಟ್ಟು ಕುರಿಯ ಕಣ್ಣಿನಿಂದ ಹತನಾಗಿರೋದು ದುರಾದೃಷ್ಟವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us