/newsfirstlive-kannada/media/post_attachments/wp-content/uploads/2025/01/CHOTA-RAJAN.jpg)
ಮುಂಬೈ ಭೂಗತ ಜಗತ್ತನ್ನು ಒಂದು ಕಾಲದಲ್ಲಿ ತನ್ನ ಕಣ್ಣ ಇಶಾರೆಯಲ್ಲಿ ನಡೆಸುತ್ತಿದ್ದ ಚೊಟಾ ರಾಜನ್​ನ್ನು ತಿಹಾರ್ ಜೈಲಿನಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಲು ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆಗೆಂದು ಇಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇ 2024ರಂದು ಮುಂಬೈನ ಸ್ಪೇಷಲ್ ಕೋರ್ಟ್​ ಗ್ಯಾಂಗ್​ಸ್ಟಾರ್ ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆಯನ್ನು ಜಾರಿ ಮಾಡಿತ್ತು. 2001ರಲ್ಲಿ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಎಂಬುವವರ ಹತ್ಯೆಯ ಪ್ರಕರಣದಲ್ಲಿ ಶಿಕ್ಷೆ ಜಾರಿಯಾಗಿತ್ತು. ಆರು ವರ್ಷದ ಬಳಿಕ ಪತ್ರಕರ್ತ ಜೆ ಡೇಯ್ ಕೊಲೆಯಲ್ಲಿಯೂ ಕೂಡ ಅದೇ ಮಾದರಿಯ ಶಿಕ್ಷೆಗೆ ಒಳಗಾಗಿದ್ದ ಛೋಟಾ ರಾಜನ್
ವಿಶೇಷ ನ್ಯಾಯಾಲಯ ಈತನ ಮೇಲಿದ್ದ MCOCA ಆ್ಯಕ್ಟ್​, ಸೆಕ್ಷನ್ 302, 12ಬಿ ಸೇರಿದಂತೆ ಹಲವು ಸೆಕ್ಷನ್​ಗಳಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಿಚಾರಣೆ ಮಾಡಿ ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಧಿಸಿತ್ತು
ಸದ್ಯ ಈ ಎಲ್ಲಾ ದೋಷಗಳನ್ನು ಹೊತ್ತುಕೊಂಡಿರುವ ರಾಜನ್ ದೆಹಲಿಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜೀವಾವಧಿ ಶಿಕ್ಷೆ ಹಾಗೂ 16 ಲಕ್ಷ ರೂಪಾಯಿ ದಂಡವನ್ನು ಕೂಡ ಈತ ನೀಡಿದ್ದಾನೆ.
ಛೋಟಾ ರಾಜನ್​ನ ಮೂಲ ಹೆಸರು, ರಾಜೇಂದ್ರ ಸದಾಶಿವ ನಿಕಾಲ್ಜಿ. ಅಕ್ಟೋಬರ್ 2025ರಲ್ಲಿ ಈತನನ್ನು ಇಂಡೋನೇಷಿಯಾ ಪೊಲೀಸರು ಬಂಧಿಸಿ ಭಾರತಕ್ಕೆ ಒಪ್ಪಿಸಿದ್ದರು. ಸುಮಾರು ಮೂರು ದಶಕಗಳ ಕಾಲ ಈತ ಮುಂಬೈ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಾ ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ. ಒಂದು ಕಾಲದಲ್ಲಿ ಈತ ಮುಂಬೈ ಅಂಡರ್​​ವರ್ಲ್ಡ್​ನ ಅನಭಿಷಿಕ್ತ ದೊರೆ ದಾವೂದ್ ಇಬ್ರಾಹಿಂನ ಬಲಗೈ ಬಂಟ ಕೂಡ ಆಗಿದ್ದ.
ಇದನ್ನೂ ಓದಿ:Google Maps: ಅಸ್ಸಾಂ ಟು ನಾಗಲ್ಯಾಂಡ್.. ಪೊಲೀಸರಿಗೆ ಒದೆ ತಿನ್ನಿಸಿದ ಗೂಗಲ್ ಮ್ಯಾಪ್..!
ಸದ್ಯ ಛೋಟಾ ರಾಜನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ರಾಜನ್​ಗೆ ಏನಾಗಿದೆ. ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಇನ್ನೂ ಕೂಡ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us