Advertisment

ನೀವು ಚಿಕನ್ ಲಿವರ್ ತಿನ್ನುತ್ತಿದ್ದೀರಾ..? ಈ ವಿಚಾರ ನಿಮಗೆ ಗೊತ್ತಿರಲೇಬೇಕು..!

author-image
Ganesh
Updated On
ನೀವು ಚಿಕನ್ ಲಿವರ್ ತಿನ್ನುತ್ತಿದ್ದೀರಾ..? ಈ ವಿಚಾರ ನಿಮಗೆ ಗೊತ್ತಿರಲೇಬೇಕು..!
Advertisment
  • ಚಿಕನ್ ಲಿವರ್ ನಮ್ಮ ದೇಹಕ್ಕೆ ಒಳ್ಳೆಯದಾ, ಕೆಟ್ಟದ್ದಾ?
  • ಲಿವರ್‌ನಲ್ಲಿರುವ ಪೋಷಕಾಂಶಗಳು ಯಾವುವು?
  • ಗರ್ಭಿಣಿಯರು ಚಿಕನ್ ಲಿವರ್ ತಿನ್ನಂಗೇ ಇಲ್ಲ

ಅನೇಕರು ಚಿಕನ್ ತಿನ್ನಲು ಇಷ್ಟಪಡ್ತಾರೆ. ಅದರಲ್ಲಿ ಕೆಲವರಿಗೆ ಲಿವರ್ ಇಷ್ಟ ಆಗಲ್ಲ. ಇನ್ನ ಕೆಲವರಿಗೆ ಚಿಕನ್ ಲಿವರ್ ಅಂದರೆ ತುಂಬಾನೇ ಇಷ್ಟ. ಲಿವರ್‌ನಲ್ಲಿರುವ ಪೋಷಕಾಂಶಗಳು ಯಾವುವು? ಚಿಕನ್ ಲಿವರ್ ತಿನ್ನುವುದು ಒಳ್ಳೆಯದಾ? ಕೆಟ್ಟದ್ದಾ? ಆರೋಗ್ಯಕ್ಕೆ ಏನಾದರೂ ಪ್ರಯೋಜನಾ ಇದೆಯಾ? ಅನ್ನೋ ವಿವರ ಇಲ್ಲಿದೆ.

Advertisment

ಈ ವಿಚಾರ ಗೊತ್ತಾದರೆ ಬಹುಶಃ ಲಿವರ್ ತಿನ್ನಲು ಇಷ್ಟಪಡದವರೂ ಮುಂದೊಂದು ದಿನ ತಿಂದರೂ ಅಚ್ಚರಿ ಇಲ್ಲ. ಚಿಕನ್ ಲಿವರ್‌ನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಪ್ರೋಟೀನ್‌ಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 12, ಐರನ್ ಕಂಟೆಂಟ್ ಸೇರಿ ಹಲವು ಪೋಷಕಾಂಶಗಳಿರುತ್ತವೆ. ಮೇಕೆ ಯಕೃತ್ತಿಗಿಂತಲೂ ಹೆಚ್ಚು ಪೋಷಕಾಂಶ ಚಿಕನ್ ಲಿವರ್​​ನಲ್ಲಿ ಇರುತ್ತದೆ.

ಇದನ್ನೂ ಓದಿ:ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?

ಲಿವರ್ ಫೋಲೇಟ್ (folate content) ಅನ್ನು ಹೊಂದಿರುತ್ತದೆ. ಇದು ಲೈಂಗಿಕ ಕಾರ್ಯಕ್ಷಮತೆಗೆ ಶಕ್ತಿಯನ್ನು ನೀಡುತ್ತದೆ. ಚಿಕನ್ ಲಿವರ್ ತಿನ್ನುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಚಿಕನ್ ಲಿವರ್ ಸೆಲೆನಿಯಮ್ (selenium) ಹೊಂದಿರುತ್ತದೆ. ಹೃದ್ರೋಗದಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ಹೃದಯದ ತೊಂದರೆಗಳಿಂದ ಮುಕ್ತವಾಗಿರಿಸುತ್ತದೆ ಎಂದು ತಜ್ಞರು ಹೇಳ್ತಾರೆ.

Advertisment

publive-image

ಆರೋಗ್ಯವಂತ ಹೃದಯವನ್ನು ಹೊಂದಲು ಚಿಕನ್ ಲಿವರ್ ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು. ಲಿವರ್ ಸೇವನೆಯಿಂದ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಚಿಕನ್ ಲಿವರ್‌ನಲ್ಲಿರುವ ವಿಟಮಿನ್ ಎ ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳ್ತಾರೆ.

ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವವರು ಇದನ್ನು ತಿನ್ನುವುದರಿಂದ ಅಗತ್ಯವಾದ ಪೋಷಕಾಂಶ ದೇಹಕ್ಕೆ ಸಿಗಲಿದೆ. ಚಿಕನ್ ಲಿವರ್ ಮಧುಮೇಹವನ್ನು ನಿಯಂತ್ರಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಚಿಕನ್ ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ.

ಅಪಾಯ ಏನು..?
ಚಿಕನ್ ಲಿವರ್​ ಯಾವತ್ತೂ ಅತಿಯಾಗಿ ತಿನ್ನಬಾರದು. ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಹೈಲಿ ಕೊಲೆಸ್ಟ್ರಾಲ್ ಆತಂಕ, ವಿಟಮಿನ್ ಎ ಟಾಕ್ಸಿಟಿ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗರ್ಭಿಣಿಯರು, ಮಧುಮೇಹ ಹೊಂದಿರೋರು ಹಾಗೂ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರೋರಿಗೆ ಇದು ಒಳ್ಳೆಯ ಆಹಾರವಲ್ಲ.

Advertisment

ಇದನ್ನೂ ಓದಿ:ಆಸ್ತಿ ಖರೀದಿಗೆ ಹಣ ಸಿಗಲಿದೆ; ಆರೋಗ್ಯದ ಬಗ್ಗೆ ಎಚ್ಚರ; ಮಿತಿ ಮೀರಬೇಡಿ; ಇಲ್ಲಿದೆ ಇಂದಿನ ಭವಿಷ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment