/newsfirstlive-kannada/media/post_attachments/wp-content/uploads/2025/02/CHICKEN-LOOTING.jpg)
ಬಿಟ್ಟಿಯಾಗಿ ಏನು ಸಿಕ್ಕರೂ ನಾವು ಬಿಡುವುದಿಲ್ಲ, ದೋಚಿಕೊಂಡು ಬಾಚಿಕೊಂಡು ಹೋಗುವುದೇ ಮನುಷ್ಯನ ಅಸಲಿ ಗುಣ ಎಂಬುದು ಆಗ್ರಾದಲ್ಲಿ ಸಾಬೀತಾಗಿದೆ. ಎಕ್ಸ್ಪ್ರೆಸ್ ವೇನಲ್ಲಿ ಕೋಳಿಗೊಳನ್ನು ಹೊತ್ತುಕೊಂಡ ವಾಹನ ವೇಗವಾಗಿ ಸಾಗುತ್ತಿತ್ತು ಈ ವೇಳೆ ನಿಯಂತ್ರಣ ತಪ್ಪಿ ಪಲ್ಟಿಗೊಂಡಿದೆ. ಚಾಲಕ ಮತ್ತು ಕ್ಲೀನರ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
💥💥💥 Truck Carrying Chicken Crashes on the UP national highway yesterday in Agra and soon people were seen carrying chicken to their homes 😂😂😂👇 pic.twitter.com/XIRYb6pzcl
— Naren Mukherjee (@NMukherjee6)
💥💥💥 Truck Carrying Chicken Crashes on the UP national highway yesterday in Agra and soon people were seen carrying chicken to their homes 😂😂😂👇 pic.twitter.com/XIRYb6pzcl
— Naren Mukherjee (@NMukherjee6) December 28, 2023
">December 28, 2023
ಕೋಳಿಗಳು ರಾಶಿಗಟ್ಟಲೇ ವಾಹನದಲ್ಲಿ ಇದ್ದಿದ್ದನ್ನು ಕಂಡ ಜನರು, ಅದರ ರಕ್ಷಣೆಗೂ ಯಾರೂ ಇಲ್ಲದ್ದನ್ನು ನೋಡಿ ನನಗೊಂದಿರ್ಲಿ, ನಮ್ಮಪ್ಪನಿಗೊಂದ ಇರ್ಲಿ ಎಂದು ಕೈಗೆ ಸಿಕ್ಕಷ್ಟು ಕೋಳಿಗಳನ್ನು ದೋಚಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುವವರೆಗೂ ಸ್ಥಳೀಯರು ಕೈಗೆ ಎಷ್ಟು ಕೋಳಿಗಳು ಸಿಕ್ಕಿವೆ ಅಷ್ಟು ಕೋಳಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಬರೀ ಕೈಗೆ ಸಿಕ್ಕಷ್ಟು ಅಲ್ಲ, ಚೀಲಗಳನ್ನು ತಂದು ಅದರಲ್ಲಿಯೂ ಕೂಡ ಕೋಳಿಗಳನ್ನು ತುಂಬಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಜಯಲಲಿತಾ ಸೀರೆ, ಕಿರೀಟ, ಚಿನ್ನಾಭರಣ, ವಜ್ರ ತಮಿಳುನಾಡಿಗೆ ವಾಪಸ್; ಏನೇನಿದೆ? ಮೌಲ್ಯ ಎಷ್ಟು ಕೋಟಿ?
ಹೈವೇನಲ್ಲಿ ಅನಾಥವಾಗಿ ಬಿದ್ದಿದ್ದ ಕೋಳಿಗಳನ್ನು ಸಾಗಿಸುವ ವಾಹನದಿಂದ ಕೋಳಿಗಳನ್ನು ಜನರು ದೋಚಿಕೊಂಡು ಹೋಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ನಿಜಕ್ಕೂ ನಾವು ನಾಗರಿಕ ಸಮಾಜದಲ್ಲಿ ಇದ್ದೀವಾ ಎಂದು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ ಅಲ್ಲಿ ನಡೆದ ಘಟನೆಯೇ ಹಾಗಿದೆ. ನಾಗರಿಕ ಸಮಾಜವನ್ನು ಸ್ಪಷ್ಟವಾಗಿ ಅರಿತವರು ಈ ರೀತಿಯ ದೋಚುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಉಳಿದವರು ಕೂಡ ಆ ಕಮೆಂಟ್ಗೆ ಸಮರ್ಥನೆ ನೀಡಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಲೂಟಿ ಮಾಡುತ್ತಿದ್ದ ಜನರನ್ನು ಗದರಿಸಿ ಮನೆಗೆ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ