/newsfirstlive-kannada/media/post_attachments/wp-content/uploads/2025/03/Chickens.jpg)
ಸದ್ಯ ರಂಜಾನ್ ಸಂಭ್ರಮದಲ್ಲಿ ಮುಸ್ಲಿಂ ಸಮುದಾಯ ಇದೆ. ಪವಿತ್ರ ಮಾಸವನ್ನು ಅತಿ ನಿಷ್ಠೆಯಿಂದ ವ್ರತವನ್ನು ಪಾಲಿಸುವ ಮುಸ್ಲಿಂರು ಇಡೀ ದಿನ ಉಪವಾಸವಿದ್ದು ಬೆಳಗಿನ ನಸುಕಿನ ಜಾವ ಏನಾದರೂ ಆಹಾರ ಸೇವಿಸುವ ಮೂಲಕ ಅಂದಿನ ರೋಜಾ ಮುರಿಯುತ್ತಾರೆ. ಪಾಕಿಸ್ತಾನದಲ್ಲಿಯೂ ಕೂಡ ಜನರು ರೋಜಾ ಆಚರಿಸುವ ಸಂಭ್ರಮದಲ್ಲಿದ್ದರು ಕೂಡ ಅವರಿಗೆ ಒಂದು ಶಾಕ್ ಎದುರಾಗಿದೆ.
ಮುಂಜಾನೆ ರೋಜಾ ಮುಗಿಸುವ ವೇಳೆ ಸಾಮಾನ್ಯವಾಗಿ ಅವರು ಚಿಕನ್ ಇಲ್ಲವೇ ಮಟನ್ ಸೇವಿಸುತ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಚಿಕನ್ ರೇಟ್ ಕೇಳಿ ಜನರೇ ಬೆಚ್ಚಿ ಬೀಳುತ್ತಿದ್ದಾರೆ. 120 ರಿಂದ 150ರವರೆಗೆ ಇದ್ದ ಚಿಕನ್ ರೇಟ್ ಈಗ 720 ರೂಪಾಯಿಯಿಂದ 800 ರುಪಾಯಿಗೆ ಏರಿಕೆ ಕಂಡಿದೆ. ಇನ್ನು ಕರಾಚಿಯಂತಹ ನಗರಗಳಲ್ಲಿ ಇದು 900 ಪಾಕಿಸ್ತಾನ ರೂಪಾಯಿಗೂ ಕೂಡ ತಲುಪಿದೆ. ಹೀಗೆ ಏಕಾಏಕಿ ಚಿಕನ್ ರೇಟ್ ಗಗನಕ್ಕೆ ಮುಟ್ಟಿದ್ದು ಹೇಗೆ ಮತ್ತು ಪಾಕಿಸ್ತಾನ ಸರ್ಕಾರ ಅದನ್ನು ನಿಯಂತ್ರಿಸುವಲ್ಲಿ ಎಲ್ಲಿ ಎಡವಿತು ಗೊತ್ತಾ.
ಇದನ್ನೂ ಓದಿ:ಈ ದೇಶದಲ್ಲಿ ಹುಡುಕಿದರೂ ಒಂದೇ ಒಂದು ಆಸ್ಪತ್ರೆ ಸಿಗಲ್ಲ.. 96 ವರ್ಷಗಳಿಂದ ಇಲ್ಲಿ ಒಂದೇ ಒಂದು ಮಗುವು ಹುಟ್ಟಿಲ್ಲ!
ಚಿಕನ್ ಬೆಲೆ ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿರುವುದರಿಂದ ಕರಾಚಿ ಆಡಳಿತ ಮಂಡಳಿ ಎಲ್ಲ ಚಿಕನ್ ಮಾರಾಟಗಾರರು ಕೆಜಿಗೆ 650 ರೂಪಾಯಿಗಿಂತ ಹೆಚ್ಚು ದರ ಪಡೆಯಬಾರದು ಎಂದು ದರ ನಿಗದಿ ಮಾಡಿತ್ತು. ಆದರೆ ಸ್ಥಳೀಯ ಚಿಕನ್ ವ್ಯಾಪಾರಿಗಳು ಅದಕ್ಕೆ ಕ್ಯಾರೆ ಎಂದಿಲ್ಲ. ಸರ್ಕಾರದ ಆದೇಶಕ್ಕೆ ತಲೆಯನ್ನು ಕೂಡ ಕೆಡೆಸಿಕೊಂಡಿಲ್ಲ ತಮಗೆ ತಿಳಿದ ರೇಟ್ಗೆ ಚಿಕನ್ ಮಾರಲು ಶುರು ಮಾಡಿದ್ದಾರೆ. ಸಾಮಾನ್ಯ ದಿನಕ್ಕಿಂತಲೂ ಈಗ ಶೇಕಡಾ 50 ರಷ್ಟು ದರ ಹೆಚ್ಚಿಗೆಯಾಗಿದೆ. ಹೀಗಾಗಿ ಪುಣ್ಯಮಾಸಗಳನ್ನು ಚೆಂದದಿಂದ ಕಳೆಯಬೇಕು ಎಂದುಕೊಂಡಿದ್ದ ಪಾಕ್ ಪ್ರಜೆಗಳ ಜೇಬಿಗೆ ಬರೆ ಬಿದ್ದಿದೆ.
ಇದನ್ನೂ ಓದಿ:6 ಕೋಟಿ ಮೌಲ್ಯದ ವಜ್ರದ ಇಯರ್ರಿಂಗ್ ನುಂಗಿ ಓಡಿ ಹೋದ ಭೂಪ! ಆಮೇಲಾಗಿದ್ದೇನು?
ಇನ್ನು ಇದಕ್ಕೆ ಕಾರಣವೇನು ಅನ್ನೋದು ನೋಡುವುದಾದ್ರೆ ಸಾಮಾನ್ಯ ಅರ್ಥಶಾಸ್ತ್ರದ ವ್ಯಾಖ್ಯಾನ. ಚಿಕನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆಯಿದೆ. ಇದನ್ನೇ ಪಾಕಿಸ್ತಾನದ ಚಿಕನ್ ಸೆಲ್ಲರ್ ಯುನಿಯನ್ನ ಉಪಾಧ್ಯಕ್ಷ ಫೈಸಲ್ ಅಭ್ಯಾಸಿ ಹೇಳಿದ್ದಾರೆ. ಸಾಮಾನ್ಯ ದಿನಕ್ಕಿಂತ ರಂಜಾನ್ ಹಬ್ಬ ಬಂದ ವೇಳೆ ಪಾಕಿಸ್ತಾನದಲ್ಲಿ ಚಿಕನ್ ಬೇಡಿಕೆ ಶೇಕಡಾ 40ರಷ್ಟು ಏರಿಕೆಯಾಗುತ್ತದೆ. ಆದ್ರೆ ಬೇಡಿಕೆಗೆ ತಕ್ಕಂತೆ ಅಲ್ಲಿ ಪೂರೈಕೆಯಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿಲ್ಲ. ಪರ್ಯಾಯವಾಗಿ ಬೇರೆ ರಾಷ್ಟ್ರಗಳಿಂದ ಜನರ ಬೇಡಿಕೆಗೆ ತಕ್ಕಂತೆ ಆಹಾರವನ್ನು ಆಮದು ಮಾಡಿಕೊಳ್ಳುವಷ್ಟು ಪಾಕಿಸ್ತಾನ ಆರ್ಥಿಕವಾಗಿ ಗಟ್ಟಿಯೂ ಇಲ್ಲ. ಇವೆಲ್ಲಾ ಕಾರಣಗಳಿಂದಾಗಿ ಪಾಕಿಸ್ತಾನದ ಎಲ್ಲಾ ಕಡೆ ಚಿಕನ್ ರೇಟ್ ಗಗನಕ್ಕೆ ಮುಟ್ಟಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ