ರೇಡ್ ಆಗುತ್ತಿದ್ದಂತೆ ಕಿಟಕಿಯಲ್ಲಿ ಕಂತೆ, ಕಂತೆ ನೋಟು ಎಸೆದ ಸರ್ಕಾರಿ ನೌಕರ; ಸಿಕ್ಕಿಬಿದ್ದಿದ್ದು ಹೇಗೆ?

author-image
admin
Updated On
ರೇಡ್ ಆಗುತ್ತಿದ್ದಂತೆ ಕಿಟಕಿಯಲ್ಲಿ ಕಂತೆ, ಕಂತೆ ನೋಟು ಎಸೆದ ಸರ್ಕಾರಿ ನೌಕರ; ಸಿಕ್ಕಿಬಿದ್ದಿದ್ದು ಹೇಗೆ?
Advertisment
  • ಅಧಿಕಾರಿಯ ಫ್ಲಾಟ್‌ನಲ್ಲಿ ಒಂದು ಕೋಟಿಗೂ ಅಧಿಕ ನಗದು ಜಪ್ತಿ
  • ಕೋಟಿ, ಕೋಟಿ ನೋಟಿನ ಕಂತೆ ಕಿಟಕಿ ಮೂಲಕ ಹೊರಗೆ ಎಸೆದ ಆಸಾಮಿ
  • ಪ್ಲ್ಯಾಟ್ ಮತ್ತು ಮನೆಯಲ್ಲಿ ಸಿಕ್ಕ ಹಣವನ್ನು ಎಣಿಸುವ ಕಾರ್ಯ

ಅಬ್ಬಾ.. ದುಡ್ಡು, ದುಡ್ಡು, ದುಡ್ಡು. ಕಂತೆ, ಕಂತೆ ಹಣದ ರಾಶಿ. ಚಿನ್ನಾಭರಣ, ಬೆಲೆಬಾಳುವ ವಸ್ತುಗಳ ಖಜಾನೆಯೇ ಸಿಕ್ಕಿದೆ. ಇದು ಯಾವುದೋ ದೇವರ ಹುಂಡಿಯನ್ನ ತೆಗೆದು ಎಣಿಸುತ್ತಿರೋದಲ್ಲ. ಒಬ್ಬ ಚೀಫ್ ಇಂಜಿನಿಯರ್ ಮನೆಯಲ್ಲಿ ಸಿಕ್ಕಿರೋ ಅಪಾರ ಸಂಪತ್ತು.

publive-image

ಒಡಿಶಾದಲ್ಲಿ ಇಂದು ವಿಜಿಲೆನ್ಸ್‌ (ವಿಚಕ್ಷಣ) ಅಧಿಕಾರಿಗಳು ದಾಳಿ ಮಾಡಿದ್ದು, ದೊಡ್ಡ ತಿಮಿಂಗಿಲವನ್ನೇ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಈ ಸರ್ಕಾರಿ ನೌಕರನ ಭುವನೇಶ್ವರದ ಫ್ಲಾಟ್‌ನಲ್ಲಿ ಒಂದು ಕೋಟಿ ರೂಪಾಯಿ ನಗದು ಜಪ್ತಿಯಾಗಿದ್ರೆ, ಇನ್ನೊಂದೆಡೆ ಅಂಗೂಲ್ ಜಾಗದ ಮನೆಯಲ್ಲಿ 1.1 ಕೋಟಿ ರೂಪಾಯಿ ನಗದು ಸಿಕ್ಕಿದೆ.

ಇದನ್ನೂ ಓದಿ: ಕ್ಷಮೆ ಕೇಳಲ್ಲ, ಕ್ಷಮೆ ಕೇಳಲ್ಲ.. ಮತ್ತೊಮ್ಮೆ ನಿರಾಕರಿಸಿದ ನಟ ಕಮಲ್ ಹಾಸನ್; ಈಗ ಏನಂದ್ರು? 

publive-image

ಒಡಿಶಾದ ಗ್ರಾಮೀಣಾಭಿವೃದ್ದಿ ಇಲಾಖೆಯ ಮುಖ್ಯ ಇಂಜಿನಿಯರ್ ಬೈಕುನಾಥ್ ನಾಥ ಸಾರಂಗಿ ಮನೆ ಮೇಲೆ ವಿಜಿಲೆನ್ಸ್ ರೇಡ್ ಆಗಿದೆ. ಕೂಡಲೇ ಚೀಫ್ ಇಂಜಿನಿಯರ್‌ ಕೋಟ್ಯಾಂತರ ರೂಪಾಯಿ ನೋಟಿನ ಕಂತೆಯನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ.

publive-image

ವಿಚಕ್ಷಣ ಅಧಿಕಾರಿಗಳ ರೇಡ್ ವೇಳೆ 500 ರೂಪಾಯಿ ನೋಟುಗಳ ಕಂತೆಯನ್ನು ಮುಖ್ಯ ಇಂಜಿನಿಯರ್ ಬೈಕುನಾಥ್ ನಾಥ ಸಾರಂಗಿ ಅವರು ಕಿಟಕಿಯಿಂದ ಹೊರಗೆ ಎಸೆದಿದ್ದು, ವಶಕ್ಕೆ ಪಡೆಯಲಾಗಿದೆ.

publive-image

ಚೀಫ್‌ ಇಂಜಿನಿಯರ್ ಪ್ಲ್ಯಾಟ್‌ನ ಕಿಟಕಿಯಿಂದ ಹೊರಗೆ ಎಸೆದ ಹಣವನ್ನು ವಿಜಿಲೆನ್ಸ್ ಅಧಿಕಾರಿಗಳು ಕೂಡಲೇ ವಶಪಡಿಸಿಕೊಂಡಿದ್ದಾರೆ. ಈಗ ಸುಮಾರು 2 ಕೋಟಿ ರೂಪಾಯಿ ನಗದು ಸೇರಿದಂತೆ ಪ್ಲ್ಯಾಟ್ ಮತ್ತು ಮನೆಯಲ್ಲಿ ಸಿಕ್ಕ ಹಣವನ್ನು ಎಣಿಸುವ ಕಾರ್ಯ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment