newsfirstkannada.com

ಅಯೋಧ್ಯೆ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಿಗೆ ಆಹ್ವಾನ ಕೊಟ್ಟ ಟ್ರಸ್ಟ್

Share :

Published January 20, 2024 at 9:28am

    ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

    ಆಹ್ವಾನ ಸ್ವೀಕರಿಸಿದ ಐವರು ನ್ಯಾಯಮೂರ್ತಿಗಳು ಯಾರು?

    2019, ನವೆಂಬರ್​ನಲ್ಲಿ ಐತಿಹಾಸಿಕ ತೀರ್ಪು ಪ್ರಕಟವಾಗಿತ್ತು

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗುವಂತೆ ಕೋರಿ ಸುಪ್ರೀಂ ಕೋರ್ಟ್​ನ ಐವರು ನ್ಯಾಯಮೂರ್ತಿಗಳಿಗೆ ಆಹ್ವಾನ ನೀಡಲಾಗಿದೆ.

ಚೀಫ್ ಜಸ್ಟೀಸ್ ಆಫ್ ಇಂಡಿಯಾ ಚಂದ್ರಚೂಡ್, ನಿವೃತ್ತ ಚೀಫ್ ಜಸ್ಟೀಸ್ ಆಫ್ ಇಂಡಿಯಾದ ರಂಜನ್ ಗೊಗೊಯಿ, ಎಸ್​ಎ ಬೋಬ್ಡೆ, ನಿವೃತ್ತ ನ್ಯಾಯಮೂರ್ತಿಗಳಾದ ಅಶೋಬ್ ಭೂಷಣ್, ಎಸ್​, ಅಬ್ದುಲ್ ನಜೀರ್​ ಅವರಿಗೆ ಆಯೋಧ್ಯೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ವಿವಾದಿತ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠವು 2019, ನವೆಂಬರ್ 9 ರಂದು ಐತಿಹಾಸಿಕ ತೀರ್ಪು ನೀಡಿತ್ತು. ಈ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳಿಗೆ ಆಹ್ವಾನ ನೀಡಲಾಗಿದೆ.

ರಾಮ ಮಂದಿರ ನಿರ್ಮಾಣ ಮಾಡಲು ಸರ್ಕಾರ ರಚಿಸಿದ್ದ ಟ್ರಸ್ಟ್​ಗೆ ಇವರು ನೀಡಿದ್ದ ತೀರ್ಪು ಪ್ರೇರಣೆ ಆಯಿತು. ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಾಗೂ ಮಸೀದಿ ನಿರ್ಮಿಸಲು ಪರ್ಯಾಯ ಭೂಮಿ ನೀಡಲು ಅಂದು ಸುಪ್ರೀಂ ಕೋರ್ಟ್​ ಆದೇಶ ನೀಡಿತ್ತು. ರಾಮ ಮಂದಿರ ನಿರ್ಮಾಣ ಮಾಡಲು ಟ್ರಸ್ಟ್ ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ಮಂದಿರ ನಿರ್ಮಾಣದ ಹೊಣೆ ಸರ್ಕಾರಕ್ಕೆ, ಅದನ್ನು ನಿರ್ವಹಣೆ ಮಾಡಬೇಕಾದ ಹೊಣೆಯನ್ನು ಟ್ರಸ್ಟ್​ಗೆ ಸುಪ್ರೀಂ ಕೋರ್ಟ್​ ನೀಡಿತ್ತು. ಈ ಮೂಲಕ ವಿವಾದಿತ ಜಮೀನು ರಾಮಲಲ್ಲಾಗೆ ಸೇರಿದ್ದು, ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ ಎಂದು ಸಾಂವಿಧಾನಿಕ ಪೀಠ ಆದೇಶ ನೀಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಿಗೆ ಆಹ್ವಾನ ಕೊಟ್ಟ ಟ್ರಸ್ಟ್

https://newsfirstlive.com/wp-content/uploads/2024/01/Ayodhya-Ramamandira.jpg

Load More