newsfirstkannada.com

Video: ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ -ಸಿಕ್ಕ ಗ್ಯಾಪ್​​ನಲ್ಲೇ ಡೈಲಾಗ್ ಹೊಡೆದ ಪ್ರದೀಪ್ ಈಶ್ವರ್

Share :

12-07-2023

  ಹಸಿವಿನ ಬಗ್ಗೆ ಮಾತನಾಡಿ ಸಿದ್ದು ಹೊಗಳಿದ ಪ್ರದೀಪ್ ಈಶ್ವರ್

  ಅಪ್ಪ-ಅಮ್ಮನ ಕಳೆದುಕೊಂಡ ನೋವನ್ನು ಬಿಚ್ಚಿಟ್ಟ ಶಾಸಕ

  ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ನನಗೆ ದೇವಾಲಯ-ಪ್ರದೀಪ್ ಈಶ್ವರ್

ವಿಧಾನಸಭೆ: ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ ವಿಧಾನಸಭೆ ಕಲಾಪದಲ್ಲಿ ಇವತ್ತು ಮಾತನಾಡಿದರು. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘೀಸಿ ಸಿದ್ದರಾಮಯ್ಯ ಅವರನ್ನು ಹೊಗಳಿದರು.

ಸಿದ್ರಾಮನ ಹುಂಡಿಯಲ್ಲಿ ಹುಟ್ಟಿದಂತಹ ಹುಡುಗನಿಗೆ ಹಸಿವಿನ ಬೆಲೆ ಗೊತ್ತಿತ್ತು ಅನಿಸುತ್ತೆ. ಹಸಿವಿನ ಬೆಲೆ ಗೊತ್ತಿದ್ದವರಿಗೆ ಮಾತ್ರ ಇಂತಹ ಗ್ಯಾರಂಟಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ರಾಜ್ಯದ ಭರವಸೆಗಳು. ‘ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಅಂತಾರೆ’. ಹೀಗಾಗಿ ನಾನು ವಿರೋಧ ಪಕ್ಷಗಳಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಗ್ಯಾರಂಟಿ ಯೋಜನೆಗಳಲ್ಲಿ ಯಾರೂ ಕೂಡ ರಾಜಕೀಯ ಮಾಡಬೇಡಿ. ಮುಖ್ಯವಾದ ಯೋಜನೆ ಇದು.

ಇನ್ನೊಂದು ನನ್ನಲ್ಲಿ ಸದಾ ಕಾಡುವ ಪ್ರಶ್ನೆ ಏನೆಂದರೆ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ನಾವು ಅಭಿವೃದ್ಧಿಪಡಿಸಬೇಕಿದೆ. ಲಕ್ಷಾಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಿಯಾದ ಟೈಂ ಟೇಬಲ್ ಹಾಕಿ ಱಂಕ್ ಕೊಡಿಸುತ್ತಾರೆ. ಆದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಅದು ಆಗಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರಿಗಿಂತ, ಸರ್ಕಾರಿ ಶಾಲೆಗಳಲ್ಲಿರುವ ಗುರುಗಳು ಬುದ್ಧಿವಂತರಿರುತ್ತಾರೆ. ಆದರೆ, ಅಲ್ಲಿ ಕೆಲವೊಂದು ಅನಾನುಕೂಲಗಳಿಂದಾಗಿ ಸರ್ಕಾರಿ ಶಾಲೆಗಳ ಗುಣಮಟ್ಟ ಕಮ್ಮಿ ಆಗ್ತಿದೆ.

ನನಗೊಂದು ಭಾವುಕ

ಅದೇ ರೀತಿ ಸರ್ಕಾರಿ ಆಸ್ಪತ್ರೆ ಅಂದರೆ ನನಗೊಂದು ಭಾವುಕ. ನಾನು ನನ್ನ ತಂದೆ, ತಾಯಿಯನ್ನು ಕಳೆದುಕೊಂಡಿದ್ದೇನೆ. ಆ ನೋವು ನನ್ನಲ್ಲಿ ಇದೆ. ಅಂದು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಅವರು ಬದುಕುಳಿಯುತ್ತಿದ್ದರು. ಆದರೆ ನನ್ನ ಬ್ಯಾಡ್​ಲಕ್. ಅಪ್ಪ-ಅಮ್ಮನನ್ನು ಕಳೆದುಕೊಂಡು ನೋವು ನನ್ನಲ್ಲಿ ಇನ್ನೂ ಉಳಿದುಕೊಂಡಿದೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು, ಆಸ್ಪತ್ರೆಗಳಿಗೆ ಪುನರ್ಜೀವನ ಕೊಡಬೇಕಿದೆ. ನನ್ನ ಪ್ರಕಾರ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ಎರಡೂ ದೇವಾಲಯಗಳು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ -ಸಿಕ್ಕ ಗ್ಯಾಪ್​​ನಲ್ಲೇ ಡೈಲಾಗ್ ಹೊಡೆದ ಪ್ರದೀಪ್ ಈಶ್ವರ್

https://newsfirstlive.com/wp-content/uploads/2023/07/PRADEEP-1.jpg

Load More