ಹೆಂಡತಿ, ಮಕ್ಕಳಿದ್ದರೂ ಇನ್ನೊಂದು ಮದುವೆ.. ಆತನ 2ನೇ ಪತ್ನಿಯನ್ನ ಅಪಹರಿಸಿ ಅಮಾನವೀಯ ಕೃತ್ಯ

author-image
Bheemappa
Updated On
ಹೆಂಡತಿ, ಮಕ್ಕಳಿದ್ದರೂ ಇನ್ನೊಂದು ಮದುವೆ.. ಆತನ 2ನೇ ಪತ್ನಿಯನ್ನ ಅಪಹರಿಸಿ ಅಮಾನವೀಯ ಕೃತ್ಯ
Advertisment
  • ಗಂಡನ್ನ ಬಿಟ್ಟು ಮಹಿಳೆಯನ್ನ ಅಪಹರಣ ಮಾಡಿದ್ದೇ ರೋಚಕ
  • ಕಿಡ್ನಾಪ್ ಮಾಡಿ ಪಾರ್ಮ್​​ಹೌಸ್​ನಲ್ಲಿ ಹಾಕಿ ಹಿಗ್ಗಾಮುಗ್ಗಾ ಥಳಿತ
  • ಮಹಿಳೆಯ ಪೋಷಕರ ಮೇಲೆ ಮೊದಲು ಹಲ್ಲೇ ಮಾಡಿದ್ದರು

ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬಳ ಮೋಹಕ್ಕೆ ಒಳಗಾಗಿದ್ದ. ಆಕೆಯನ್ನ ದೇವಸ್ಥಾನ ಒಂದರಲ್ಲಿ ಮದುವೆ ಕೂಡ ಆಗಿದ್ದ. ಮೊದಲ ಹೆಂಡತಿ ಮಕ್ಕಳು ಹಾಗೂ ಸಂಬಂಧಿಕರು 2ನೇ ಪತ್ನಿಯನ್ನ ಪಾರ್ಮ್ ಹೌಸ್​ಗೆ ಕಿಡ್ನಾಪ್​ ಮಾಡಿಕೊಂಡು ಬಂದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಹೊಡೆತಗಳಿಗೆ ಆಕೆಯ ಮುಖವೇ ಬದಲಾಗಿದೆ. ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ?.

ಕಣ್ಣು ಕಿತ್ತು ಬರುವ ಹಾಗೆ ಹಲ್ಲೆಗೊಳಗಾಗಿ ಮುಖ ಊದಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯನ್ನು ಕಿಡ್ನಾಪ್​​ಗೆ ಒಳಗಾಗಿ ಅಮಾನವೀಯವಾಗಿ ಹಲ್ಲೆಗೊಳಗಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಜೀಗಾನಹಳ್ಳಿ ಗ್ರಾಮದವರು. ಮಹಿಳೆಗೆ ಇಂತಹ ಪರಿಸ್ಥಿತಿ ಬರಲು ಕಾರಣ ಗಂಡನ ಕಡೆಯವರು ಅಂದ್ರೆ ಗಂಡನ ಮೊದಲನೇ ಹೆಂಡತಿ ಕಡೆಯವರು.

publive-image

ಕಳೆದ ಕೆಲ ವರ್ಷಗಳ ಹಿಂದೆ ಹಲ್ಲೆಗೊಳಗಾದ ಮಹಿಳೆ, ಬೆಂಗಳೂರು ಮೂಲದ ಗಂಗರಾಜು ಎಂಬ ವಿವಾಹಿತನೊಂದಿಗೆ 2ನೇ ಮದುವೆಯಾಗಿದ್ದಳಂತೆ. ಅಂದಿನಿಂದ ಗಂಗರಾಜು ಕುಟುಂಬದವರಿಗೆ ಮಹಿಳೆಯ ಕುಟುಂಬದವರಿಗೂ ಗಲಾಟೆ, ಮನಸ್ಥಾಪ ನಡೆಯತ್ತಿತ್ತು. ಮಹಿಳೆ ಬೆಂಗಳೂರಿನಲ್ಲೆ ವಾಸವಿದ್ದರೂ, ಆದ್ರೆ ಗಂಗರಾಜು ಸಂಬಂಧಿಕರು ಬೇಕು ಅಂತಲೇ ಕಿರಿಕ್​ ತೆಗೆದು, ಆಕೆಯ ತಂದೆ- ತಾಯಿಯ ಮೇಲೆ ಅದೇ ಗ್ರಾಮದ ರಾಜೇಶ್ವರಿ ಹಾಗೂ ಕೃಷ್ಣಪ್ಪ ಕಡೆಯವರು ಹಲ್ಲೆ ಮಾಡಿದ್ದಾರೆ.

ಇನ್ನೂ ತಂದೆ ಮೇಲೆ ಹಲ್ಲೆ ಮಾಡಿದ್ದಾರಂತ ಗೊತ್ತಾದಮೇಲೆ ಸಂಗೀತಾ, ಗಂಗರಾಜು ಜೊತೆ ಮೊನ್ನೆ ಜೀಗಾನಹಳ್ಳಿಗೆ ಬರುತಿದ್ದರು. ಈ ವಿಚಾರ ಅರಿತ ಗಂಗರಾಜು ಕಡೆಯವರು ಮಾರ್ಗ ಮಧ್ಯೆ ತಡೆದು ಗಂಗರಾಜುನನ್ನ ಬಿಟ್ಟು ಮಹಿಳೆಯನ್ನ ಮಾತ್ರ ಕಿಡ್ನಾಪ್​ ಮಾಡಿಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಬಿರು ಬಿಸಿಲಿನ ತಾಪ ಇನ್ನಷ್ಟು ಏರಿಕೆ.. ಹವಾಮಾನ ಇಲಾಖೆ ಎಚ್ಚರಿಕೆ ಏನು?

publive-image

ಮಹಿಳೆ ಎನ್ನೋದನ್ನೂ ನೋಡದೆ ಕ್ರಿಕೆಟ್ ಬ್ಯಾಟ್, ರಾಡ್​ಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಪತಿ ಗಂಗರಾಜು ದೂರಿನ ಮೇರೆಗೆ ಪೆರೇಸಂದ್ರ ಪೊಲೀಸರು ಜೀಗಾನಹಳ್ಳಿಯ ಪಾರ್ಮ್ ಹೌಸ್​ಗೆ ತೆರಳಿ ಆಕೆಯನ್ನ ರಕ್ಷಿಸಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ರಾಜೇಶ್ವರಿ, ಮಂಜಮ್ಮ, ರಾಧ, ಚಂದನ, ಲಕ್ಷ್ಮಮ್ಮ, ಹಾಗೂ ಮೇಘನಾರನ್ನ ಬಂಧಿಸಲಾಗಿದೆ. ಆದ್ರೆ, ಕೃಷ್ಣಪ್ಪ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಗಳಿಗೆ ಆಹ್ವಾನ.. 2,691 ಹುದ್ದೆಗಳು

ಘಟನೆ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 307 ಹಾಗು 354 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅತ್ತ ದುರುಳರು ಉದ್ದೇಶಪೂರ್ವಕವಾಗಿಯೇ ಸಂಗೀತಾಳನ್ನ ಕರೆಸಿಕೊಂಡು ಹಲ್ಲೆ ಮಾಡಲು ಇಷ್ಟೆಲ್ಲಾ ನಾಟಕವಾಡಿದ್ದಾರೆ ಅಂತಾ ಆಕೆಯ ಪೋಷಕರು ಆರೋಪ. ಇತ್ತ ಮಹಿಳೆಯರು ಎನ್ನದೇ ಲೆಕ್ಕಿಸದೇ ಪೈಶಾಚಿಕ ಕೃತ್ಯ ನಡೆಸಿದವರ ಕಠಿಣ ಕ್ರಮ ಕೈಗೊಳ್ಳಬೇಕು ಅನ್ನೋದು ದೂರುದಾರೆಯ ಆಗ್ರಹ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment