ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ

author-image
Ganesh
Updated On
ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ
Advertisment
  • 20ರ ಹರೆಯದ ಯುವತಿಗೆ 40ರ ವ್ಯಕ್ತಿ ಜೊತೆ ಲವ್!
  • ವಿರೋಧದ ನಡುವೆಯೂ ಮದುವೆಯಾದ ಜೋಡಿ!
  • ರಕ್ಷಣೆಗಾಗಿ ಪೊಲೀಸ್ ಠಾಣೆ ಮಟ್ಟಿಲೇರಿದ ನವಜೋಡಿ!

20 ವಯಸ್ಸಿನ ಯುವತಿಯೊಬ್ಬಳು ಪೋಷಕರ ವಿರೋಧದ ನಡುವೆಯೂ 40 ವರ್ಷದ ವ್ಯಕ್ತಿಯನ್ನ ವರಿಸಿದ್ದಾಳೆ. ಮದುವೆ ಬಳಿಕ ಯುವತಿಯ ಪೋಷಕರು ಕೊಟ್ಟ ಕಾಟಕ್ಕೆ ನವಜೋಡಿ ಠಾಣೆ ಮೆಟ್ಟಿಲೇರಿದೆ.

ಚಿಕ್ಕಬಳ್ಳಾಪುರ ನಗರದ ಯುವತಿಗೆ ವಿಜಯಕುಮಾರ್ ಎಂಬಾತನ ಮೇಲೆ ಲವ್​ ಆಗಿತ್ತು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಪ್ಯಾಷನ್ ಡಿಸೈನಿಂಗ್​ ವ್ಯಾಸಂಗ ಮಾಡುವ ಇಬ್ಬರ ಮಧ್ಯೆ ಪರಿಚಯವಾಗಿತ್ತು.. ಪರಿಚಯ ಪ್ರೀತಿಯಾಗಿ ಮದುವೆಯ ಕಂಕಣ ತೊಡಿಸಿತ್ತು. ಆದರೆ ವಿಜಯ್​ ಕುಮಾರ್​ಗೆ 40 ವರ್ಷ ವಯಸ್ಸಾಗಿದೆ ಎಂಬ ಕಾರಣವೇ ಯುವತಿಯ ಪೋಷಕರಿಗೆ ನುಂಗಲಾರದ ತುತ್ತಾಗಿತ್ತು.

ಇದನ್ನೂ ಓದಿ:ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್​ ಒನ್​​ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!

publive-image

ರಕ್ಷಣೆಗಾಗಿ ಪೊಲೀಸ್ ಠಾಣೆಯ ಮಟ್ಟಿಲೇರಿದ ನವಜೋಡಿ!
ಇದೇ ತಿಂಗಳ 15ರಂದು ದೇವನಹಳ್ಳಿಯಲ್ಲಿ ಪ್ರೇಮಿಗಳು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ಹಿನ್ನೆಲೆ ಜುಲೈ 19ರಂದು ವಿಜಯ್ ​ಕುಮಾರ್ ಕ್ಯಾಮೆರಾ ಅಂಗಡಿಗೆ ನುಗ್ಗಿ ಯುವತಿಯ ಪೋಷಕರು ಗಲಾಟೆ ಮಾಡಿದ್ದರು. ಈ ಹಿನ್ನೆಲೆ ತಮಗೆ ರಕ್ಷಣೆ ನೀಡಿ ಅಂತ ಹಂಸಲೇಖ ಮತ್ತು ವಿಜಯ್​ಕುಮಾರ್ ಚಿಕ್ಕಬಳ್ಳಾಪುರ ಠಾಣೆ ಮೆಟ್ಟಿಲೇರಿದ್ದಾರೆ.

ಚಿಕ್ಕಬಳ್ಳಾಪುರ ಪೊಲೀಸ್​ ಠಾಣೆಗೂ ಬಂದಿದ್ದ ಯುವತಿಯ ಪೋಷಕರು ಆಕೆಯ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದ್ರೆ ಪೋಷಕರ ಮಾತಿಗೆ ಕರಗದ ಆಕೆ ನಾನು ವಿಜಯ್ ಕುಮಾರ್ ಜೊತೆಯಲ್ಲಿಯೇ ಬಾಳುತ್ತೇನೆ, ನನ್ನ ಹೆಸರಿನಲ್ಲಿರುವ ಆಸ್ತಿಯನ್ನ ವಾಪಸ್ ಬರೆದುಕೊಡುತ್ತೇನೆ ಎಂದು ತಿಳಿಸಿದ್ದಾಳೆ. ಒಟ್ನಲ್ಲಿ ಪೋಷಕರ ವಿರೋಧದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ ತಮ್ಮ ಪ್ರೀತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment