ಪೋಷಕರೇ ಎಚ್ಚರ.. ಆಟವಾಡುತ್ತಿದ್ದ ಮಗು ನೀರಿನ ಬಕೆಟ್​ಗೆ ಬಿದ್ದು ದಾರುಣ ಅಂತ್ಯ

author-image
admin
Updated On
ಪೋಷಕರೇ ಎಚ್ಚರ.. ಆಟವಾಡುತ್ತಿದ್ದ ಮಗು ನೀರಿನ ಬಕೆಟ್​ಗೆ ಬಿದ್ದು ದಾರುಣ ಅಂತ್ಯ
Advertisment
  • ಬಕೆಟ್​​ನಲ್ಲಿದ್ದ ನೀರಿನಲ್ಲಿ ಆಟವಾಡುತ್ತಿದ್ದ ಪುಟಾಣಿ ಪೂರ್ವಿ
  • ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದ ಮಗು
  • ಆಕಸ್ಮಿತವಾಗಿ ನೀರಿನ ಬಕೆಟ್‌ಗೆ ಬಿದ್ದ ಒಂದೂವರೆ ವರ್ಷದ ಪೂರ್ವಿ

ಚಿಕ್ಕಮಗಳೂರು: ಆಟವಾಡ್ತಿದ್ದ ಮಗು ನೀರಿನ ಬಕೆಟ್​ಗೆ ಬಿದ್ದು ಪ್ರಾಣ ಬಿಟ್ಟಿರುವ ದಾರುಣ ಘಟನೆ ಎನ್.ಆರ್. ಪುರ ತಾಲೂಕಿನ ಮೀನುಕ್ಯಾಂಪ್ ರಾವೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಒಂದೇ ಕುಟುಂಬದ 6 ಮಂದಿ ದುರಂತ.. ಹುಟ್ಟೂರಲ್ಲಿ ಸಾಮೂಹಿಕ ಸಂಸ್ಕಾರ; ಮುಗಿಲು ಮುಟ್ಟಿದ ಆಕ್ರಂದನ 

ಒಂದೂವರೆ ವರ್ಷದ ಪೂರ್ವಿ ಬಕೆಟ್​​ನಲ್ಲಿದ್ದ ನೀರಿನಲ್ಲಿ ಆಟವಾಡುತ್ತಾ ಇತ್ತು. ಆಡವಾಡುತ್ತಲೇ ಆಕಸ್ಮಿತವಾಗಿ ನೀರಿನ ಬಕೆಟ್‌ಗೆ ಬಿದ್ದು ಉಸಿರುಗಟ್ಟಿದೆ. ತಕ್ಷಣ ಮಗುವನ್ನ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಮಗು ಪ್ರಾಣ ಬಿಟ್ಟಿದೆ.

ತಡವಾಗಿ ಬೆಳಕಿಗೆ ಬಂದ ಪ್ರಕರಣ!
ರಾವೂರು ಗ್ರಾಮದಲ್ಲಿ ಕಳೆದ ಡಿಸೆಂಬರ್ 19ರಂದೇ ಈ ದಾರುಣ ಘಟನೆ ನಡೆದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿದ್ದು, ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment