ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ

author-image
Bheemappa
Updated On
ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ
Advertisment
  • ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು
  • ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಕಾಡು ಆನೆ ದಾಳಿ
  • ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹೋದ ಜೀವ

ಚಿಕ್ಕಮಗಳೂರು: ಕಾಡು ಆನೆ ದಾಳಿಗೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬನ್ನೂರಿನ ಕಾಫಿತೋಟದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ಮಹಿಳೆ ಅನಿತಾ ಮೃತ ದುರ್ದೈವಿ. ಬನ್ನೂರಿನ ಕಾಫಿತೋಟದಲ್ಲಿ ಅನಿತಾ ಅವರು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ನಿವಾಸಕ್ಕೆ ಹೋಗುವಾಗ ಆನೆ ದಾಳಿ ಮಾಡಿತ್ತು. ಇದರಿಂದ ಅವರು ತೀವ್ರವಾಗಿ ಗಾಯಗೊಂಡು ಭಯಭೀತರಾಗಿದ್ದರು.

ಇದನ್ನೂ ಓದಿ: ತುಂಗಭದ್ರಾ ನದಿಗೆ ಜಾರಿದ ವೃದ್ಧ.. 15 ಕಿಮೀ ದೂರ ಈಜಿ ಬದುಕಿ ಬಂದ..!

ಗಾಯಗೊಂಡಿದ್ದ ಮಹಿಳೆಯನ್ನು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಶಿವಮೊಗ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇನ್ನು ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment