newsfirstkannada.com

ದತ್ತಪೀಠದಲ್ಲಿ ಶ್ರೀರಾಮನ ಪೂಜೆಗೆ ಸಿಗದ ಅವಕಾಶ; ಚಿಕ್ಕಮಗಳೂರು ನಗರದಲ್ಲಿ ಬಿಗುವಿನ ವಾತಾವರಣ

Share :

Published January 22, 2024 at 1:59pm

  ದತ್ತಪೀಠದಲ್ಲಿ ಪೂಜೆ ಮಾಡಬಾರ್ದು ಎಂದು ಜಿಲ್ಲಾಡಳಿತ ನಿರ್ಬಂಧ

  ಮುಜರಾಯಿ ಇಲಾಖೆಗೆ ವಿವಾದಿತ ಇನಾಂ ದತ್ತಾತ್ರೇಯ ಪೀಠ ಸೇರಿದೆ

  ದತ್ತಪೀಠದಲ್ಲಿ ಹೋಮಕ್ಕೆ ಅವಕಾಶ ನೀಡಲು ಒಪ್ಪದ ಜಿಲ್ಲಾಡಳಿತ

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಪೂಜೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿ ಕಚೇರಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ನುಗ್ಗಿದ್ದಾರೆ. ಈ ವೇಳೆ ಪೊಲೀಸರು-ಹಿಂದೂ ಕಾರ್ಯಕರ್ತರ ಮಧ್ಯೆ ನೂಕಾಟ-ತಳ್ಳಾಟ ನಡೆಯಿತು. ಸದ್ಯ ಸ್ಥಳದಲ್ಲಿ ಬಿಗುವಿನ ವಾರಾವರಣ ಏರ್ಪಟ್ಟಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ವಿಶೇಷ ಪೂಜೆಗೆ ದತ್ತಪೀಠ ವ್ಯವಸ್ಥಾಪನಾ ಸಮಿತಿ ಸಿದ್ಧತೆ ನಡೆಸಿತ್ತು. ರಾಮತಾರಕ ಹೋಮ ಮಾಡಲು ಎಲ್ಲ ಸಿದ್ಧತೆ ನಡೆಸಿತ್ತು. ಆದರೆ ದತ್ತಪೀಠದಲ್ಲಿ ಪೂಜೆ ಮಾಡಬಾರದು ಎಂದು ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಯಾಗ ಶಾಲೆಗೆ ಬೀಗ ಹಾಕಿದೆ. ಮುಜರಾಯಿ ಇಲಾಖೆಗೆ ವಿವಾದಿತ ಇನಾಂ ದತ್ತಾತ್ರೇಯ ಪೀಠ ಸೇರಿದೆ. ಮುಜರಾಯಿ ದೇವಾಲಯದಲ್ಲಿ ಪೂಜೆಗೆ ಸರ್ಕಾರ ಅದೇಶ ನೀಡಿತ್ತು. ರಾಜ್ಯ ಸರ್ಕಾರದ ಈ ದ್ವಂದ್ವ ನೀತಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹೀಗಾಗಿ ಸಂಘಟನೆಯ ಕಾರ್ಯಕರ್ತರು ದತ್ತಪೀಠ ಚಲೋ ಎಂದು ಅಂತ ಹೋಗುವಾಗ ಪೊಲೀಸರು ಕಾರ್ಯಕರ್ತರನ್ನ ಬಂಧಿಸಲು ಮುಂದಾಗಿದ್ದಾರೆ. ಸಂಘಟನೆಯ ಮತ್ತೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಪೊಲೀಸರು ಮತ್ತು ಸಂಘಟನೆಯ ಮಧ್ಯೆ ಭಾರೀ ಗಲಾಟೆ ನಡೆದಿದೆ. ಹೀಗಾಗಿ ರಸ್ತೆಯಲ್ಲಿ ಬಿದ್ದು ಸಂಘಟನೆಯ ಕಾರ್ಯಕರ್ತರು ಹೊರಳಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದತ್ತಪೀಠದಲ್ಲಿ ಶ್ರೀರಾಮನ ಪೂಜೆಗೆ ಸಿಗದ ಅವಕಾಶ; ಚಿಕ್ಕಮಗಳೂರು ನಗರದಲ್ಲಿ ಬಿಗುವಿನ ವಾತಾವರಣ

https://newsfirstlive.com/wp-content/uploads/2024/01/CKM_RAM_1.jpg

Load More