/newsfirstlive-kannada/media/post_attachments/wp-content/uploads/2025/04/Gruhalakshmi-borewell-Chikkmagalore-1.jpg)
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾದದ್ದು. ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ಹಣ ಜಮೆ ಮಾಡುವ ಯೋಜನೆ ಇದಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಸಾಕಷ್ಟು ವಿಳಂಬದ ಬಳಿಕ ಸರ್ಕಾರ ಗೃಹಲಕ್ಷ್ಮಿ ಹಣವನ್ನು ಜಮೆ ಮಾಡುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಈ ಟೀಕೆ, ಚರ್ಚೆಯ ಮಧ್ಯೆ ಚಿಕ್ಕಮಗಳೂರಿನ ರೈತ ದಂಪತಿ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದಾರೆ. ಜೇಮ್ಸ್-ಜೆಸ್ಸಿ ದಂಪತಿ ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್‌ವೆಲ್ ತೆಗೆಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಳುತ್ತಿದ್ದ ಮಕ್ಕಳಿಗೆ ಚಾಕ್ಲೆಟ್ ತರಲು ಹೋಗ್ತಿದ್ದ ತಾಯಿ ದಾರುಣ ಸಾವು; ಹಾಸನದಲ್ಲಿ ಘೋರ ದುರಂತ!
ಈ ಜೇಮ್ಸ್-ಜೆಸ್ಸಿ ದಂಪತಿ ಎನ್.ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ನಿವಾಸಿಗಳು. ಇವರು ಕಳೆದ ವರ್ಷ 2 ಬೋರ್ ತೆಗೆಸಿದ್ರು ಅದು ಸಂಪೂರ್ಣ ವಿಫಲ ಆಗಿದ್ದವು. ಇದೀಗ ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ತೋಟದಲ್ಲಿ ಬೋರ್ ಕೊರೆಸಲಾಗಿದ್ದು, 3 ಇಂಚಿನಷ್ಟು ನೀರು ಉಕ್ಕಿ ಬಂದಿದೆ.
ಜೇಮ್ಸ್ ತನ್ನ ತೋಟದಲ್ಲಿ ಬೋರ್‌ವೆಲ್ ಕೊರೆಸಲು ಪತ್ನಿ ಜೆಸ್ಸಿ 13 ತಿಂಗಳ 26 ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣವನ್ನು ನೀಡಿದ್ದಾರೆ. ಇದರ ಜೊತೆ ಜೇಮ್ಸ್ ತಾಯಿ ಕೂಡ ತನ್ನ ಬಳಿ ಇದ್ದ 13 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೊಟ್ಟಿದ್ದಾರೆ. ಒಟ್ಟು 52 ಸಾವಿರ ರೂಪಾಯಿ ವೆಚ್ಚದಲ್ಲಿ ಜೇಮ್ಸ್ ಬೋರ್‌ವೆಲ್ ಕೊರೆಸಿದ್ದು, ಗೃಹಲಕ್ಷ್ಮಿ ಯೋಜನೆ ಹಾಗೂ ಸಿಎಂ ಸಿದ್ದರಾಮಯ್ಯನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ