newsfirstkannada.com

ಕಡೂರಿನಲ್ಲಿ ಡ್ರೈವರ್ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. ನಾಲ್ವರು ಆರೋಪಿಗಳು ಅರೆಸ್ಟ್!

Share :

Published February 17, 2024 at 2:08pm

  ಸ್ನೇಹಿತರು ಬಂದಿದ್ದಾರೆಂದು ಮೀಟ್ ಮಾಡಲು ಹೋದಾಗ ಹತ್ಯೆ

  ಬೆಂಗಳೂರಿನಲ್ಲಿ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಯುವಕ

  ಫೆ.15ರಂದು ಅಜ್ಜಿ ಮನೆಗೆ ಬಂದಿದ್ದ ಯುವಕನ ಕೊಲೆ ಕೇಸ್​

ಚಿಕ್ಕಮಗಳೂರು: ಕಳೆದ ಫೆಬ್ರವರಿ 15ರಂದು ಹೊಸೂರು ಗ್ರಾಮದಲ್ಲಿ ಅಜ್ಜಿ ಮನೆಗೆ ಬಂದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅರೋಪಿಗಳನ್ನ ಕಡೂರು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ನಾಗಮಂಗಲದ ಮನೋಜ್, ಕೌಶಿಕ್, ಬೆಂಗಳೂರಿನ ಕಿರಣ್, ರಾಜು ಬಂಧನವಾಗಿದ್ದಾರೆ. ತುಮಕೂರಿನ ಮಧುಗಿರಿ ಮೂಲದ ದರ್ಶನ್ ಬೆಂಗಳೂರಿನಲ್ಲಿ ಡ್ರೈವರ್ ಅಗಿ ಕೆಲಸ ಮಾಡುತ್ತಿದ್ದನು. ಆದರೆ ಫೆಬ್ರವರಿ 15ರಂದು ಕಡೂರಿನ ಹೊಸೂರು ಗ್ರಾಮದಲ್ಲಿರುವ ಅಜ್ಜಿ ಮನೆಗೆ ಬಂದಿದ್ದನು.

ಈ ವೇಳೆ ಸ್ನೇಹಿತರು ಬಂದಿದ್ದಾರೆಂದು ಅಜ್ಜಿ ಮನೆಯಿಂದ ಹೋಗಿದ್ದ ಯುವಕ ಕೊಲೆಯಾಗಿದ್ದನು. ಆ ನಂತರ ಯುವಕನ ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಡೂರಿನಲ್ಲಿ ಡ್ರೈವರ್ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. ನಾಲ್ವರು ಆರೋಪಿಗಳು ಅರೆಸ್ಟ್!

https://newsfirstlive.com/wp-content/uploads/2024/02/CKM_DRIVER_ARREST.jpg

Load More