ಚಿಕ್ಕಮಗಳೂರು ಪರಿಷತ್ ಚುನಾವಣೆಯ ಮತ ಮರುಎಣಿಕೆ.. ಸದ್ಯ ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ

author-image
Gopal Kulkarni
Updated On
ರಾಜ್ಯ ಸರ್ಕಾರದ ಎಡವಟ್ಟಿಗೆ 5 ಲಕ್ಷ ರೂಪಾಯಿ ದಂಡ ಹಾಕಿದ ಸುಪ್ರೀಂಕೋರ್ಟ್‌; ಅಸಲಿಗೆ ಆಗಿದ್ದೇನು?
Advertisment
  • ಸುಪ್ರೀಂಕೋರ್ಟ್​ ಕೈ ಸೇರಿದ ಮರು ಮತ ಎಣಿಕೆಯ ವರದಿ
  • ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳ ಎದೆಯಲ್ಲಿ ಹೆಚ್ಚಿದ ಢವಢವ
  • 2021ರ ಡಿಸೆಂಬರ್ 10ರಂದು ಪರಿಷತ್​ಗೆ ನಡೆದಿದ್ದ ಚುನಾವಣೆ

ಮೂರು ವರ್ಷದ ನಂತರ ಎಂಎಲ್​ಸಿ ಚುನಾವಣೆಯ ಮರು ಎಣಿಕೆ ಮುಗಿದಾಯ್ತು. ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿರೋ ಭವಿಷ್ಯ ನಿನ್ನೆ ಸುಪ್ರಿಂ ಅಂಗಳಕ್ಕೆ ತಲುಪಿದೆ. ಕಾಫಿ ನಾಡಿಗರ ಚಿತ್ತ ತೀರ್ಪಿನತ್ತ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಫಲಿತಾಂಶ ಇವತ್ತು ಹೊರ ಬೀಳಲಿದ್ದು, ಯಾರಿಗೆ ಲಕ್ಕು.. ಯಾರಿಗೆ ಶಾಕು ಅನ್ನೋ ಕತೂಹಲ ಹೆಚ್ಚಾಗಿದೆ.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ಪರಿಷತ್​ಗೆ ನಡೆದಿದ್ದ ಚುನಾವಣೆಯ ಮರು ಮತ ಎಣಿಕೆ ಫಲಿತಾಂಶ ಇವತ್ತು ಹೊರ ಬೀಳಲಿದೆ. ಒಂದಲ್ಲಾ.. ಎರಡಲ್ಲಾ.. ಕಳೆದ ಮೂರು ವರ್ಷದಿಂದ ಕಾಂಗ್ರೆಸ್​ ಹೋರಾಟಕ್ಕೆ ಇವತ್ತು ಫಲ ಸಿಗಲಿದೆ. ಇದೀಗ ಇಡೀ ಚಿಕ್ಕಮಗಳೂರಿನ ಚಿತ್ತ. ಸುಪ್ರೀಂಕೋರ್ಟ್​ನತ್ತ ನೆಟ್ಟಿದೆ.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಫೆಬ್ರವರಿ 28ರಂದು ಮರು ಮತ ಎಣಿಕೆಯ ಕಾರ್ಯ ನಡೆದಿತ್ತು.

publive-image

2021ರ ಡಿಸೆಂಬರ್ 10ರಂದು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ಪರಿಷತ್​ಗೆ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್​ನ ಎ.ವಿ. ಗಾಯತ್ರಿ ಶಾಂತೇಗೌಡ ವಿರುದ್ಧ ಎಂ.ಕೆ. ಪ್ರಾಣೇಶ್ ಕೇವಲ 6 ಮತಗಳ ಅಂತರದಿಂದ ಗೆಲವು ಸಾಧಿಸಿ​ ಪರಿಷತ್​ಗೆ ಪ್ರವೇಶ ಪಡೆದಿದ್ದರು. ಆದ್ರೆ ಇದರಲ್ಲಿ 12 ಜನ ನಾಮನಿರ್ದೇಶಿತರು ತಮ್ಮ ಮತವನ್ನು ಚಲಾಯಿಸಿದ್ದರು. ನಾಮನಿರ್ದೇಶಿತರ ಮತದಾನ ಪ್ರಶ್ನಿಸಿ ಕಾಂಗ್ರೆಸ್​ ಅಭ್ಯರ್ಥಿ ಗಾಯತ್ರಿಗೌಡ ಕೋರ್ಟ್​ ಮೆಟ್ಟಿಲೇರಿದ್ರು. ಅದರಂತೆ ವಿಚಾರಣೆ ನಡೆಸಿದ್ದ ಕೋರ್ಟ್​ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಕೋರ್ಟ್​ಸೂಚನೆಯಂತೆ ಫೆಬ್ರವರಿ 28ರಂದು ಮರು ಮತ ಎಣಿಕೆ ನಡೆದಿತ್ತು.

publive-image

ಇನ್ನು ಮರು ಮತ ಎಣಿಕೆ ಮುಗಿಯುತ್ತಿದ್ದ ಕಾಂಗ್ರೆಸ್​ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನು ಜಿಲ್ಲಾಧಿಕಾರಿ ಅಂಕಿ ಅಂಶವನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರ ಮಾಡಿ ನಿನ್ನೆ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಮಾತ್ರವಲ್ಲದೆ ಅಭ್ಯರ್ಥಿಗಳಾದ ಗಾಯತ್ರಿ ಶಾಂತೇಗೌಡ, ಉಪ ಸಭಾಪತಿ ಎಂ.ಕೆ ಪ್ರಾಣೇಶ್ ರಾಷ್ಟ್ರರಾಜಧಾನಿಯಲ್ಲಿ ಬೀಡುಬಿಟ್ಟು ಫಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದಾರೆ.

ಇದನ್ನೂ ಓದಿ:ಪರಿಷತ್​ ಚುನಾವಣೆಯ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ ಜೈ..ಜೈಕಾರ.. ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಭದ್ರ

ಮೂರು ವರ್ಷದ ಹಿಂದೆ ಬಿಜೆಪಿ ಎಂಎಲ್​ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು‌. ಆದ್ರೆ ಈಗ ಕೈತಪ್ಪೋ ಅತಂಕ ಎದುರಾಗಿದೆ.. ಇವತ್ತಿನ ತೀರ್ಪು ಬಿಜೆಪಿ ಅಭ್ಯರ್ಥಿ ಪ್ರಾಣೇಶ್​ ಅವರನ್ನ ಗೆಲ್ಲಿಸುತ್ತಾ.. ಅಥವಾ ಕಾಂಗ್ರೆಸ್​ ಅಭ್ಯರ್ಥಿಗೆ ಗುಡ್​ನ್ಯೂಸ್​ ನೀಡುತ್ತಾ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment