/newsfirstlive-kannada/media/post_attachments/wp-content/uploads/2025/02/RCB-FAN.jpg)
ಚಿಕ್ಕಮಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭ ನಡೆಯುತ್ತಿದೆ. ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಕುಂಭದಲ್ಲಿ ಸ್ನಾನ ಮಾಡ್ತಿದ್ದಾರೆ. ಅದರಂತೆ ನಮ್ಮ ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ಕುಂಭ ಮೇಳಕ್ಕೆ ಬಂದು ಹೋಗುತ್ತಿದ್ದಾರೆ.
ಅದರಂತೆ ಚಿಕ್ಕಮಗಳೂರಿನ ಖಾಂಡ್ಯದ ದೇವೇಂದ್ರ ಅನ್ನೋರು ಕುಂಭ ಮೇಳಕ್ಕೆ ಹೋಗಿ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಪವಿತ್ರ ಸ್ನಾನದ ವೇಳೆ, ವೈಯಕ್ತಿಕ ಶ್ರೇಯಸ್ಸಿಗಾಗಿ ಬೇಡಿಕೊಳ್ತಾರೆ. ಆದರೆ ಈ ದೇವೇಂದ್ರ ಜನರ ಒಳಿತಿಗಾಗಿ 7 ಬೇಡಿಕೆಗಳನ್ನು ಇಟ್ಟುಕೊಂಡು ಪುಣ್ಯಸ್ನಾನ ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾನ ಪಾಕ್​ಗೆ ಆಹ್ವಾನ ಮಾಡಿದ ಹಿಂದಿನ ಉದ್ದೇಶವೇನು.. ದೊಡ್ಡ ಲಾಭವಿತ್ತಾ?/newsfirstlive-kannada/media/post_attachments/wp-content/uploads/2025/02/RCB-FAN-2.jpg)
ಯುವಕನ ಬೇಡಿಕೆ ಏನು..?
- ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಸಂಪೂರ್ಣ ನಿಲ್ಲಬೇಕು
- 25 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಂಕಣ ಭಾಗ್ಯ ಸಿಗಲಿ
- ಕಾಲಕ್ಕೆ ತಕ್ಕಂತೆ ಮಳೆಯಾಗಿ ರೈತರ ಬೆಳೆ ಉತ್ತಮವಾಗಲಿ
- ಮಲೆನಾಡಿನ ಒತ್ತುವರಿ ಸಮಸ್ಯೆ ಬಗೆಹರಿಯಲಿ
- ಪ್ರಾಣಿಗಳಿಂದ ಆಗುತ್ತಿರುವ ಪ್ರಾಣಿ ಹಾನಿ ನಿಲ್ಲಲಿ
- ಈ ಬಾರಿ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಲಿ
- ರಾಜನ ಅಳ್ವಿಕೆ ಹೋಗಲಿ, ಪ್ರಜೆಗಳು ರಾಜರಾಗಲಿ
ಈ ಬೇಡಿಕೆಗಳನ್ನು ಇಟ್ಕೊಂಡು ಕುಂಭ ಮೇಳಕ್ಕೆ ಹೋಗಿರುವ ದೇವೇಂದ್ರ ನದಿಯಲ್ಲಿ ಬರೋಬ್ಬರಿ 101 ಬಾರಿ ಮುಳಗಿ ಎದ್ದಿದ್ದಾರೆ. ವಿಶೇಷ ಅಂದರೆ ಕೈಯಲ್ಲಿ ಬ್ಯಾನರ್ ಹಿಡಿದೇ ಪುಣ್ಯ ಸ್ನಾನ ಮಾಡಿದ್ದಾರೆ.
ಇದನ್ನೂ ಓದಿ: ಅಮೃತಧಾರೆ ಧಾರಾವಾಹಿಯಿಂದ ಆಚೆ ಬಂದ್ರಾ ಮತ್ತೊಬ್ಬ ಸ್ಟಾರ್​ ನಟಿ? ಯಾರದು?
/newsfirstlive-kannada/media/post_attachments/wp-content/uploads/2025/02/RCB-FAN-1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us