24 ವರ್ಷದ ನಂತರ ಗುಡ್ಡದ ಕೋಲ ಸಂಭ್ರಮ.. ದೀಪಾವಳಿ ಬೆನ್ನಲ್ಲೇ ಬಲಿಂದ್ರನ ಪೂಜಾ ಸಡಗರ

author-image
Bheemappa
Updated On
24 ವರ್ಷದ ನಂತರ ಗುಡ್ಡದ ಕೋಲ ಸಂಭ್ರಮ.. ದೀಪಾವಳಿ ಬೆನ್ನಲ್ಲೇ ಬಲಿಂದ್ರನ ಪೂಜಾ ಸಡಗರ
Advertisment
  • ಜನಪದ ಗೀತೆಗಳನ್ನು ಹಾಡಿ ಸಂತಸ ವ್ಯಕ್ತಪಡಿಸಿದ ಗ್ರಾಮಸ್ಥರು
  • ಬಲೀಂದ್ರಯಾನ ಗೊಂಬೆ ಮಾಡಿ ಗುಡ್ಡದ ಕೋಲವನ್ನ ಸಂಭ್ರಮ
  • ಪೂರ್ವಿಕರು ಮಾಡುತ್ತಿದ್ದ ಎಲ್ಲ ಸಂಪ್ರದಾಯ ಮತ್ತೆ ಮರುಕಳಿಸಿದೆ

ದೀಪಾವಳಿಯ ಸಂಭ್ರಮ ಮುಗಿದಿದ್ರೂ ಈ ಗ್ರಾಮದಲ್ಲಿ ಮಾತ್ರ ನಡೆಯುತ್ತಲೇ ಇದೆ. 24 ವರ್ಷದ ನಂತರ ಅಂದು ಹಿರಿಯರು ಮಾಡಿದ್ದ ಹಬ್ಬವನ್ನ ಮತ್ತೆ ನಡೆಸಲಾಗುತ್ತಿದೆ. ಜನರ ಆರಾಧ್ಯ ದೈವ ನೆಲೆಸಿರೋ ಗುಡ್ಡದ ಮೇಲೆ ಬಲೀಂದ್ರಯಾನ ಗೊಂಬೆ ಮಾಡಿ ಗುಡ್ಡದ ಕೋಲವನ್ನ ಸಂಭ್ರಮದಿಂದ ಆಚರಿಸಲಾಗಿದೆ.

publive-image

ಒಂದು ಕಡೆ ರಾಮ, ಲಕ್ಷ್ಮಣ, ಹನುಮಂತ ವೇಷಧಾರಿಗಳು. ಮತ್ತೊಂದೆಡೆ ಯುವಕರು ಕೋಲಾಟವಾಡಿ ಖುಷಿ ಪಟ್ಟಿದ್ದಾರೆ. ಇದರ ಜೊತೆಗೆ ಹಿರಿಯರ ಜನಪದ ಗೀತೆಗಳಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರ ಮಾಗಲು ಗುಡ್ಡದಲ್ಲಿ ದೀಪಾವಳಿಯ ಸಂಭ್ರಮ ಹಿನ್ನೆಲೆಯಲ್ಲಿ ಬಲಿಂದ್ರನ ಪೂಜಾ ಸಡಗರ ಎಲ್ಲರ ಕಣ್ಮನ ಸೆಳೆಯಿತು.

ಇದನ್ನೂ ಓದಿ:ಹಿಂದೂಗಳ ಮನೆ ಮೇಲೆ ಪೊಲೀಸರು, ಸೈನಿಕರಿಂದ ದಾಳಿ.. ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಕೋರಿದ ಇಸ್ಕಾನ್ ವಕ್ತಾರ

ದೀಪಾವಳಿ ಹಬ್ಬದ ಪಟಾಕಿ ಸದ್ದು ಎಲ್ಲ ಕಡೆ ತಣ್ಣಗಾದ್ರೆ ಮಾಗಲು ಗ್ರಾಮದ ಪರಿಶಿಷ್ಟ ಸಮುದಾಯದ ಜನರಿಗೆ ಇನ್ನೂ ದೀಪಾವಳಿ ಹಬ್ಬದ ಸಂತಸ ಮುಗಿದಿಲ್ಲ. ಗ್ರಾಮದ ಜನರು ಆರಾಧ್ಯ ದೈವ ನೆಲೆಸಿರೋ ಗುಡ್ಡದಲ್ಲಿ 24 ವರ್ಷದ ನಂತರ ಬಲೀಂದ್ರಯಾನ ಪೂಜೆ ನಡೆಸಿದ್ದಾರೆ. ಗೊಂಬೆಯಂತೆ ಬಲೀಂದ್ರನ ತಯಾರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಂದಿನ ಪೂರ್ವಿಕರು ನಡೆಸುತ್ತಿದ್ದ ಆ ಸಂಭ್ರಮ ಮತ್ತೆ ಮರುಕಳಿಸಿದ್ದು ಗ್ರಾಮಸ್ಥರು ಸಡಗರದಲ್ಲಿ ಮುಳುಗಿದ್ದರು.

ಇನ್ನೂ ಗುಡ್ಡದ ಕೋಲದ ವಿಶೇಷ ಅಂದ್ರೆ ಕೋಲಾಟ. ಯುವ ಸಮೂದಾಯವೇ ಈ ಬಾರಿ ಕೋಲಾಟದಲ್ಲಿ ಭಾಗಿಯಾದ್ದರು. ವೇಷ ತೋಟ್ಟವರ ಪೌರಾಣಿಕ ಮಾತುಗಳನ್ನ ಕೇಳುತ್ತಲೇ ಜನ ಖುಷಿ ಪಟ್ಟರು‌‌. ಇನ್ನೂ ಕಳಸದ ಕಳಸೇಶ್ವರನ ಗಿರಿಜಾ‌ಕಲ್ಯಾಣ ಕೆಲವೇ ದಿನಗಳಲ್ಲಿ ನಡೆಯಲಿದೆ. ಆ ಬಳಿಕ ಬಲೀಂದ್ರನ ಗೊಂಬೆಯನ್ನ ಭದ್ರಾ ನದಿಯ ತಟಕ್ಕೆ ಕೊಂಡೋಯ್ದು ತೆಪ್ಪೋತ್ಸದ ಮೂಲಕ ನೀರಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

publive-image

ಪಿತೃಗಳಿಗೆ ಒಳ್ಳೆಯದಾಗುತ್ತೇ ಅನ್ನೋ ನಂಬಿಕೆಯಿಂದಲೇ ಬಲೀಂದ್ರಯಾನ ಪೂಜೆ ನಡೆಸಲಾಗುತ್ತದೆ. ಒಟ್ಟಾರೆ ದೀಪಾವಳಿಯಲ್ಲಿ ಮೊದಲ ದಿನ ಭೂಮಿ ಪೂಜೆಯಿಂದ ಪ್ರಾರಂಭವಾದ ಹಬ್ಬದ ಸಡಗರ ಮಾಗಲು ಗ್ರಾಮದಲ್ಲಿ ಗುಡ್ಡದ ಕೋಲದೊಂದಿಗೆ ಸಂಪನ್ನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment