/newsfirstlive-kannada/media/post_attachments/wp-content/uploads/2025/07/Varsha-Digraje.jpg)
ಮಹಾನಟಿ ವೇದಿಕೆ ಮೇಲೆ ಚಿಕ್ಕೋಡಿಯ ವರ್ಷ ಡಿಗ್ರಜೆ ದೂಳೆಬ್ಬಿಸಿದ್ದಾರೆ. ದಿನದಿಂದ ದಿನಕ್ಕೆ ಮಹಾನಟಿಯರು ಜಬರ್ದಸ್ತ್ ಪರ್ಫಾರ್ಮೆನ್ಸ್ ಜಡ್ಜ್‌ಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಹುಡುಗಿ ವರ್ಷ ಡಿಗ್ರಜೆ ಬೆಂಕಿ ಪರ್ಫಾರ್ಮೆನ್ಸ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/07/mahanati9.jpg)
ಹೌದು, ವಿಭಿನ್ನ ಕಾನ್ಸೆಪ್ಟ್ನೊಂದಿಗೆ ಬಂದ ಮಹಾನಟಿ ರಿಯಾಲಿಟಿ ವೀಕ್ಷಕರಿಗೆ ಇಷ್ಟವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್ ಕೊಟ್ಟಿದ್ದವರಲ್ಲಿ 24 ಮಂದಿ ಆಯ್ಕೆ ಆಗಿದ್ದರು. ಸದ್ಯ ಈ ವಾರ ಹೀರೋಯಿನ್ ಇಂಟ್ರಡಕ್ಷನ್ ರೌಂಡ್ (Heroine Introduction Round) ನಡೆಯುತ್ತಿದೆ.
ಇನ್ನೂ, ರಿಲೀಸ್ ಆಗಿರೋ ಪ್ರೋಮೋದಲ್ಲಿ ವರ್ಷ ಡಿಗ್ರಜೆ ಪ್ರದರ್ಶನ ಕೊಟ್ಟಿದ್ದಾರೆ. ಚಿಕ್ಕೋಡಿಯ ವರ್ಷ ಡಿಗ್ರಜೆ ಅವರನ್ನ ಏಳುಮಲೆಯ ದಿಟ್ಟತನ, ಧೈರ್ಯದ ಹೆಣ್ಣಾಗಿ ಪರಿಚಯ ಮಾಡಲಾಗಿದೆ. ಇದೇ ಕಾನ್ಸೆಪ್ಟ್ನಲ್ಲಿ ವರ್ಷ ಡಿಗ್ರಜೆ ಯೂನಿಕ್ ಆಗಿ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ವರ್ಷ ಡಿಗ್ರಜೆ ವಿಡಿಯೋ ಕ್ಲಿಪ್ ಹಾಕಲಾಗಿತ್ತು. ಆಗ ಜಡ್ಜ್ ಸರ್ಪ್ರೈಸ್ ಆಗಿದ್ದಾರೆ. ಆದರೆ ವೇದಿಕೆ ಮೇಲೆ ಅಭಿನಯಿಸಿದ ವರ್ಷ ಡಿಗ್ರಜೆಗೆ ಕೆಲವೊಂದು ಸಲಹೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ