/newsfirstlive-kannada/media/post_attachments/wp-content/uploads/2025/07/MND-BEKARI-1.jpg)
ಮಂಡ್ಯ: ಬೇಕರಿಯಿಂದ ತಂದಿದ್ದ ಕಲುಷಿತ ಕೇಕ್ ತಿಂದು ಮಗು ಅಸ್ವಸ್ಥಗೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ಆನಂದ್ ಎಂಬುವವರು ತಮ್ಮ ಮಗಳಿಗಾಗಿ ಪಟ್ಟಣದ ಕಾವೇರಿ ಬೇಕರಿಯಲ್ಲಿ ಕೇಕ್ ಖರೀದಿಸಿದ್ದರು. ಕೇಕ್ ತಿಂದ ಕೆಲ ಹೊತ್ತಲ್ಲೇ ಮಗು ಅಸ್ವಸ್ಥಗೊಂಡಿದೆ. ಕೊನೆಗೆ ಆಕೆಯ ತಂದೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ಕಾವೇರಿ, ಕಬಿನಿಯಿಂದ ಹೊಸ ದಾಖಲೆ.. ಈ ಬಾರಿ ಕಿರಿಕ್ ಮಾಡಂಗಿಲ್ಲ ತಮಿಳುನಾಡು..!
ತಪಾಸಣೆ ಮಾಡಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ತಂದಿದ್ದ ಕೇಕ್ ಪರಿಶೀಲಿಸಿದಾಗ ಅದರಲ್ಲಿ ಹುಳುಗಳು ಇರೋದು ಪತ್ತೆಯಾಗಿದೆ. ಬೆನ್ನಲ್ಲೇ ಆನಂದ್, ಆತನ ಸ್ನೇಹಿತರು ಹಾಗೂ ಅಧಿಕಾರಿಗಳು ಬೇಕರಿ ಹೋಗಿ ಕಿಚನ್ ಪರಿಶೀಲನೆ ಮಾಡಿದ್ದಾರೆ. ಕಿಚನ್ ಗಬ್ಬು ನಾರುತ್ತಿರೋದನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಬೇಕರಿ ಮಾಲೀಕ ಮಹೇಶ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದು, ನಂತರ ಪುರಸಭಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಬೇಕರಿಗೆ ಬೀಗ ಜಡಿದಿದ್ದಾರೆ.
ಇದನ್ನೂ ಓದಿ: ರಾಯಚೂರಲ್ಲಿ ವಿದ್ರಾವಕ ಘಟನೆ.. ಊಟ ಮಾಡಿ ಮಲಗಿದ್ದ ತಂದೆ, ಇಬ್ಬರು ಹೆಣ್ಮಕ್ಕಳು ಇನ್ನಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ