ಅಪ್ಪನ ಮೃತದೇಹದ ಮೇಲೆ ಕೂತು ಕಂದಮ್ಮ ಕಣ್ಣೀರು.. ಚಾಕೊಲೇಟ್ ಇದೆ ಎಂದಾಗ ಪಪ್ಪ ಬೇಕು ಎಂದ ಪಾಪು

author-image
Veena Gangani
Updated On
ಅಪ್ಪನ ಮೃತದೇಹದ ಮೇಲೆ ಕೂತು ಕಂದಮ್ಮ ಕಣ್ಣೀರು.. ಚಾಕೊಲೇಟ್ ಇದೆ ಎಂದಾಗ ಪಪ್ಪ ಬೇಕು ಎಂದ ಪಾಪು
Advertisment
  • ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 30 ಪ್ರವಾಸಿಗರು ಸಾವು
  • ಪುಟ್ಟ ಕಂದ ಅಳುತ್ತಿರೋ ವಿಡಿಯೋ ನೋಡಿ ನೆಟ್ಟಿಗರು ಭಾವುಕ
  • ಜಮ್ಮು-ಕಾಶ್ಮೀರದಲ್ಲಿ ನರಮೇಧ ನಡೆಸಿದ ಭಯೋತ್ಪಾದಕರು

ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿ ನರಮೇಧ ನಡೆಸಿದ್ದಾರೆ. ತಮ್ಮ ಕುಟುಂಬದವರಿಗೆ ಆಸರೆಯಾಗಿದ್ದವರನ್ನು ಬಲಿ ಪಡೆದಿದ್ದಾರೆ.

ಇದನ್ನೂ ಓದಿ: ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!

ಪಶ್ಚಿಮ ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದು, ಈ ದಾಳಿಯಲ್ಲಿ 30 ಪ್ರವಾಸಿಗರು ಸಾವನ್ನಪಿರುವ ಮಾಹಿತಿ ಲಭ್ಯವಾಗಿದೆ. ಹಿಂದೂಗಳನ್ನೇ ಟಾರ್ಗೆಟ್​ ಮಾಡಿ ಭಯೋತ್ಪಾದಕರು ಫೈರಿಂಗ್​ ಮಾಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಇನ್ನೂ ಹಲವು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಇದರ ಮಧ್ಯೆ ಪುಟ್ಟ ಮಗುವೊಂದು ತನ್ನ ತಂದೆಯ ಮೃತದೇಹದ ಮೇಲೆ ಕುಳಿತು ಕಣ್ಣೀರಿಡುವ ಭಾವನಾತ್ಮಕ ದೃಶ್ಯ ಕಂಡು ಬಂದಿದೆ. ತನ್ನ ತಂದೆಯನ್ನ ಕಳೆದುಕೊಂಡು ಪುಟ್ಟ ಕಂದಮ್ಮ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ. ಸದ್ಯ ಪುಟ್ಟ ಕಂದಮ್ಮನ ಮನಮಿಡಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದೇ ವಿಡಿಯೋದಲ್ಲಿ ಮಹಿಳೆ ಒಬ್ಬರು ನೋಡು ನಿನಗಾಗಿ ಬಿಸ್ಕೆಟ್, ಚಾಕೊಲೇಟ್ ಇದೆ ಎಂದಿದ್ದಾರೆ. ಆಗ ಪುಟ್ಟ ಕಂದಮ್ಮ, ನನಗೆ ಬೇಡ, ಅಪ್ಪ ಬೇಕು ಅಂತ ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟಿದೆ. ಇದನ್ನು ನೋಡಿದ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಹೇಯ ಕೃತ್ಯ ನಡೆಸಿದ ಭಯೋತ್ಪಾದಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment