ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

author-image
Veena Gangani
Updated On
ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video
Advertisment
  • ಮಕ್ಕಳನ್ನ ಕಿಟಕಿಯಿಂದ ರಕ್ಷಿಸಿದ ಅಮ್ಮ
  • ಅಹಮದಾಬಾದ್‌ನ ಖೋಖ್ರಾ ಪ್ರದೇಶದಲ್ಲಿ ಘಟನೆ
  • ಇಬ್ಬರು ಮಕ್ಕಳನ್ನು ಬೆಂಕಿಯಿಂದ ಕಾಪಾಡಿದ ಮಹಾತಾಯಿ

ಗಾಂಧಿನಗರ: ಅಪಾರ್ಟ್ಮೆಂಟ್​ವೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಅಹಮದಾಬಾದ್‌ನ ಖೋಖ್ರಾ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ:ಜೈಲಿಗೆ ಹೋಗಿ ಬಂದೋರು, ಎಚ್ಚರಿಕೆ ಕೊಡೋರು ನಶಿಸಿ ಹೋಗ್ತಾರೆ -ಉಮಾಪತಿ ಗೌಡ ಪರೋಕ್ಷ ವಾಗ್ದಾಳಿ

publive-image

ಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಅದೇ ಮಹಡಿಯಲ್ಲಿದ್ದ ಮಹಿಳೆ ತನ್ನ ಮಕ್ಕಳನ್ನ ಬೆಂಕಿಯಿಂದ ಕಾಪಾಡಲು ಕೆಳಗಿನ ಮಹಡಿಯಲ್ಲಿದ್ದವರಿಗೆ ಆ ಮಕ್ಕಳನ್ನ ಕಿಟಕಿಯಿಂದ ಕೆಳಗೆ ನೀಡಿ ರಕ್ಷಿಸಿದ್ದಾಳೆ.


">April 11, 2025

ಮಕ್ಕಳ ಪ್ರಾಣವನ್ನು ಉಳಿಸಲು ತಾಯಿ ಏನು ಬೇಕಾದ್ರೂ ಮಾಡ್ತಾಳೆ ಎಂಬುವುದಕ್ಕೆ ಈ ದೃಶ್ಯನೇ ಸಾಕ್ಷಿ. ತಾನು ವಾಸವಾಗಿದ್ದ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಇಬ್ಬರು ಮಕ್ಕಳ ತಾಯಿ ಎದೆಗುಂದದೆ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ಅವರ ಪ್ರಾಣ ಉಳಿಸಿದ್ದಾಳೆ. ಆ ಮಕ್ಕಳನ್ನ ಕಾಪಾಡಿದ್ದಷ್ಟೇ ಅಲ್ಲದೆ ತಾನೂ ಮೂರನೇ ಮಹಡಿಯಿಂದ ಇಳಿಯೋದಕ್ಕೆ ಮುಂದಾಗಿದ್ದಾಳೆ.

publive-image

ಹೀಗೆ ಇಳಿಸುವಾಗ ಕೊಂಚ ಜಾರಿದ್ದರೂ ಪ್ರಾಣಾಪಾಯ ಉಂಟಾಗೋ ಸಾಧ್ಯತೆ ಎದುರಾಗಿತ್ತು. ಸ್ವಲ್ಪದರಲ್ಲಿ ಮಹಿಳೆ ಪಾರಾಗಿದ್ದಾರೆ. ಇನ್ನೂ ತಾಯಿ ಬೆಂಕಿಯಿಂದ ತನ್ನ ಮಕ್ಕಳನ್ನು ರಕ್ಷಣೆ ಮಾಡುತ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ತಾಯಿಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment