ಮನೆಯಲ್ಲಿ ಆಟವಾಡುವ ವೇಳೆ ಮುಚ್ಚಳ ನುಂಗಿದ ಮಗು
ಉಸಿರಾಟದ ತೊಂದರೆಯಿಂದ ಪುಟ್ಟ ಮಗು ಸಾವು
ಗಂಟಲಲ್ಲಿ ಸಿಲುಕಿಕೊಂಡ ಬಾಟಲಿ ಮುಚ್ಚಳ
ಶಿವಮೊಗ್ಗ: ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಆಟವಾಡುವ ವೇಳೆ ಬಾಟಲಿಯ ಮುಚ್ಚಳ ನುಂಗಿ ಮಗು ಸಾವನ್ನಪ್ಪಿದೆ.
ಇದನ್ನೂ ಓದಿ: ನಾನು ದರ್ಶನ್ನನ್ನು ಮದ್ವೆ ಆಗ್ತೀನಿ.. ಬೆಂಗಳೂರಿಂದ ಬಳ್ಳಾರಿ ಜೈಲಿಗೆ ಬಂದ ಮಹಿಳಾ ಅಭಿಮಾನಿಯ ರಂಪಾಟ!
ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್(1.5) ಮೃತಪಟ್ಟ ಮಗು. ಉಸಿರಾಟದ ತೊಂದರೆಯಿಂದ ನಂದೀಶ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್ ಹರಿದು ವಿಕೃತಿ.. ಡಿಲೀಟ್ ಆದ ರೇಣುಕಾಸ್ವಾಮಿ ಫೋಟೋ ಪತ್ತೆ
ಬುಧವಾರ ಬೆಳಗ್ಗೆ ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ನಂದೀಶ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ನುಂಗಿದ ಮುಚ್ಚಳ ಗಂಟಲಲ್ಲಿ ಸಿಲುಕಿದೆ. ನಂತರ ಮುಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬದವರು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಮಗು ಸಾವನ್ನಪ್ಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ