newsfirstkannada.com

ಮ್ಯಾಗಿ ತಿಂದು ಬಾಲಕ ದಾರುಣ ಸಾವು.. 6ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ!

Share :

Published May 11, 2024 at 10:19pm

Update May 11, 2024 at 10:20pm

    ರಾತ್ರೋರಾತ್ರಿ ಮನೆಯವರಲ್ಲಿ ಕಾಣಿಸಿಕೊಂಡ ಹೊಟ್ಟೆ ನೋವು!

    ಪುರನ್‌ಪುರ ತಹಸಿಲ್ ಪ್ರದೇಶದಲ್ಲಿ ನಡೆದ ದಾರುಣ ಘಟನೆ ಇದು

    ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕ ರೋಹನ್ ಸಾವು

ಲಕ್ನೋ: ಥಟ್‌ ಅಂತ ತಿನ್ನಬೇಕು ಅಂದ್ರೆ ಎಲ್ಲರ ತಲೆಗೂ ಬರೋ ಆಪ್ಷನ್‌ ಅಂದ್ರೆ ಮ್ಯಾಗಿ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಈ ಮ್ಯಾಗಿ ಫೇವೆರಿಟ್ ಅಂದ್ರೆ ತಪ್ಪಾಗಲ್ಲ. ಇದೇ ಮ್ಯಾಗಿ ಹಾಗೂ ನೂಡಲ್ಸ್ ತಿಂದು ಬಾಲಕ ಸಾವನ್ನಪ್ಪಿರೋ ಘಟನೆ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ. ರೋಹನ್ (6) ಮೃತ ಬಾಲಕ.

ಹೌದು, ಉತ್ತರ ಪ್ರದೇಶದ ನೂಡಲ್ಸ್ ಜೊತೆ ಅನ್ನ ತಿಂದು ಒಂದೇ ಕುಟುಂಬದ 6 ಜನರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸ್ಸ್​ ಆದ ಬಳಿಕ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಅಸಲಿಗೆ ಆಗಿದ್ದೇನು?

ಪುರನ್‌ಪುರ ತಹಸಿಲ್ ಪ್ರದೇಶದಲ್ಲಿ ಮೃತ ಬಾಲಕನ ಕುಟುಂಬಸ್ಥರು ವಾಸಿಸುತ್ತಿದ್ದರು. ಮೃತ ರೋಹನ್ ತಾಯಿ ಸೀಮಾ ತನ್ನ ಮಕ್ಕಳಾದ ರೋಹನ್, ವಿವೇಕ್ ಹಾಗೂ ಮಗಳು ಸಂಧ್ಯಾ ಜೊತೆ ರಾತ್ರಿ ನೂಡಲ್ಸ್ ಅನ್ನ ತಿಂದು ಮಲಗಿದರು. ಇದಾದ ನಂತರ ಸೀಮಾ ಹಾಗೂ ಆಕೆಯ ಮೂವರು ಮಕ್ಕಳು ರಾತ್ರೋರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮರುದಿನ ಕುಟುಂಬಸ್ಥರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಕುಟುಂಬಸ್ಥರು ಮನೆಗೆ ವಾಪಸ್​ ಬಂದಿದ್ದರು. ಮತ್ತೊಮ್ಮೆ ಕುಟುಂಬಸ್ಥರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಹನ್ ಮೃತಪಟ್ಟಿದ್ದಾನೆ.

ಇನ್ನು, ಈ ಘಟನೆ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆ ತಂಡ ಈ ಬಗ್ಗೆ ತನಿಖೆ ಆರಂಭಿಸಿದೆ. ಈ ಕುರಿತು ಮಾಹಿತಿ ನೀಡಿದ ಪುರನ್‌ಪುರ ಆರೋಗ್ಯ ಕೇಂದ್ರದ ಡಾ.ರಶೀದ್, ಸಮುದಾಯ ಆರೋಗ್ಯ ಕೇಂದ್ರಕ್ಕೆ ಐವರನ್ನು ಕರೆತರಲಾಗಿದೆ. ನೂಡಲ್ಸ್ ಜೊತೆ ಅನ್ನ ತಿಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉನ್ನತ ಕೇಂದ್ರಕ್ಕೆ ಕಳುಹಿಸಲಾಗಿದೆ. ಇತರ ಜನರ ಚಿಕಿತ್ಸೆಯು ನಡೆಯುತ್ತಿದೆ ಅಂತ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯಾಗಿ ತಿಂದು ಬಾಲಕ ದಾರುಣ ಸಾವು.. 6ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ!

https://newsfirstlive.com/wp-content/uploads/2024/05/maggi1.jpg

Load More