newsfirstkannada.com

Breaking: ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಮೇಲಕ್ಕೆತ್ತಲು ರಕ್ಷಣಾ ಕಾರ್ಯಚರಣೆ ಚುರುಕು

Share :

Published July 23, 2023 at 2:36pm

Update July 23, 2023 at 3:10pm

    ತಾಯಿಯೊಂದಿಗೆ ಹೊಲಕ್ಕೆ ಹೋದಾಗ ಅವಘಡ

    100 ಅಡಿ ತೆರೆದ ಬೋರ್​ವೆಲ್​ಗೆ ಬಿದ್ದ ಮಗು

    ಎನ್​ಡಿಆರ್​​ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಶುರು

ಮೂರು ವರ್ಷದ ಮಗು 100 ಅಡಿ ಆಳದ ತೆರೆದ ಬೋರ್​ ವೆಲ್​ಗೆ ಬಿದ್ದ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ. ತಾಯಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗು ಕೂಡ ತಾಯಿಯ ಜೊತೆಗೆ ಹೋಗಿದೆ. ಈ ವೇಳೆ ಘಟನೆ ಸಂಭವಿಸಿದೆ.

ತೆರೆದ ಬೋರ್​ವೆಲ್​ಗೆ ಬಿದ್ದ ಮಗು 40-50 ಅಡಿಯಲ್ಲಿ ಸಿಲುಕಿಕೊಂಡಿದ್ದು, ಮಗುವನ್ನು ಮೇಲೆತ್ತಲು ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಲಾಗಿದೆ. ಎನ್​ಡಿಆರ್​ಎಫ್​ ತಂಡ ಮಗುವನ್ನು ಮೇಲಕ್ಕೆತ್ತಲು ಹರಸಾಹಸ ಪಡುತ್ತಿವೆ.

ಘಟನೆ ಸಂಬಂಧಿಸಿ ಸಿಲ್ವಾ ಸರ್ಕಲ್​ ಅಧಿಕಾರಿ ಶಂಭು ಮಂಡಲ್​ ಮಾತನಾಡಿದ್ದು, ‘ಮಗುವೊಂದು ಬೋರ್​ವೆಲ್​ಗೆ ಸಿಲುಕಿದ ಬಗ್ಗೆ ಮಾಹಿತಿ ಸಿಕ್ಕಿದೆ. ಮಗುವನ್ನು ರಕ್ಷಿಸಲು ನಮ್ಮ ಕೈಯಲ್ಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಎನ್​ಡಿಆರ್​​ಎಫ್​ ಮತ್ತು ರಕ್ಷಣಾ ತಂಡ ಸ್ಥಳದಲ್ಲಿದೆ. ಮಗು ಜೀವಂತವಾಗಿದ್ದು, ಮಗುವಿನ ಧ್ವನಿ ಕೇಳಿಸಿದೆ’ ಎಂದು ಹೇಳಿದ್ದಾರೆ.

ಇನ್ನು ರಕ್ಷಣಾ ತಂಡ ಬೋರ್​ವೆಲ್​ನಲ್ಲಿ ಸಿಲುಕಿರುವ ಮಗುವಿಗೆ ಆಮ್ಲಜನಕ ಪೂರೈಕೆ ಮಾಡಿದೆ. ಸದ್ಯ ದೀರ್ಘ ಪ್ರಯತ್ನದ ಮೂಲಕ ಮಗುವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಮೇಲಕ್ಕೆತ್ತಲು ರಕ್ಷಣಾ ಕಾರ್ಯಚರಣೆ ಚುರುಕು

https://newsfirstlive.com/wp-content/uploads/2023/07/Borwell.jpg

Load More