Advertisment

ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !

author-image
Gopal Kulkarni
Updated On
ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !
Advertisment
  • ಡಿಸೆಂಬರ್​ 4 ರಂದು ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತ
  • ಕಾಲ್ತುಳಿತಕ್ಕೆ ಸಿಲುಕಿದ್ದ 8 ವರ್ಷದ ಬಾಲಕನ ಸ್ಥಿತಿ ಚಿಂತಾಜನಕ
  • ಹೈದ್ರಾಬಾದ್​ನ ಕಿಮ್ಸ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಡಿಸೆಂಬರ್ 4ರಂದು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಭೀಕರ ಕಾಲ್ತುಳಿದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು. ಅವರ ಪುತ್ರನೂ ಕೂಡ ಕಾಲ್ತುಳಿತಕ್ಕೆ ಸಿಲುಕಿ ಪರಿಸ್ಥಿತಿ ಗಂಭೀರವಾಗಿತ್ತು. ಈಗ ಆ ಎಂಟು ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

Advertisment

ಹೈದ್ರಾಬಾದ್​ನ ಕಿಮ್ಸ್ ಆಸ್ಪತ್ರೆಯೂ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಎಂಟು ವರ್ಷದ ಬಾಲಕ ಶ್ರೀತೇಜನನ್ನು ಸದ್ಯ ಇನ್ಸೆಂಟೀವ್ ಕೇರ್​​ನಲ್ಲಿ ಇಡಲಾಗಿದೆ ನ್ಯೂರಾಲಜಿಕಲ್ ಸಮಸ್ಯೆಗಳು ಸುಧಾರಿಸಿವೆ. ಆದ್ರೆ ಬಾಲಕನನ್ನು ಈಗಲೂ ವೆಂಟಿಲೇಟರ್​ ಮೇಲೆಯೇ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:KGF2, RRR ರೆಕಾರ್ಡ್​ ಬ್ರೇಕ್ ಮಾಡಿದ ಪುಷ್ಪ2.. ಅಲ್ಲು ಅರ್ಜುನ್ ಮುಂದಿನ ಟಾರ್ಗೆಟ್​ ಪ್ರಭಾಸ್

ವೈದ್ಯರು ಹೇಳುವ ಪ್ರಕಾರ ಬಾಲಕನು ಆಕ್ಸಿಜನ್ ಪೈಪ್ ಮೂಲಕ ಉಸಿರಾಡುತ್ತಿದ್ದಾರೆ. ಸದ್ಯ ವೆಂಟಿಲೇಟರ್​ನ್ನು ಅಳವಡಿಸಲಾಗಿದೆ. ಜ್ವರವು ನಿಧಾನಕ್ಕೆ ಕಡಿಮೆ ಆಗುತ್ತಿದೆ. ವಿಟಲ್ ಪ್ಯಾರಾಮೀಟರ್ ಸ್ಟೇಬಲ್ ಆಗಿದ್ದು. ನೀಡುತ್ತಿರುವ ಚಿಕಿತ್ಸೆಗೆ ಸದ್ಯ ಸ್ಪಂದಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

Advertisment

publive-image

ಆಸ್ಪತ್ರೆ ನೀಡಿರುವ ವರದಿ ಪ್ರಕಾರ ಡಿಸೆಂಬರ್ 4 ರಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಉಸಿರಾಟದ ಪ್ರಕ್ರಿಯೆ ಸಾಮಾನ್ಯವಾಗಿ ಇರಲಿಲ್ಲ. ಹೀಗಾಗಿ ಬ್ರಿಥೀಂಗ್​ ಸಪೋರ್ಟ್​ ನೀಡಬೇಕಾಯ್ತು. ಬಳಿಕ ಡಿಸೆಂಬರ್ 10 ರಂದು ಅದನ್ನು ತೆಗೆಯಲಾಯ್ತು. ಮರಳಿ ಸಮಸ್ಯೆಗಳು ಶುರುವಾದಾಗ ಮತ್ತೆ ಡಿಸೆಂಬರ್ 12 ರಂದು ಬ್ರಿಥೀಂಗ್ ಸಪೋರ್ಟ್ ನೀಡಬೇಕಾಯ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್​​ಗೆ ಮತ್ತೊಮ್ಮೆ ಕತ್ತಲೆ ಕಂಬಿ ಭಯ.. ಕಾಲ್ತುಳಿತ ಕೇಸ್​​ಗೆ ಟ್ವಿಸ್ಟ್​ ಕೊಟ್ಟ ತೆಲಂಗಾಣ ಸರ್ಕಾರ..!

ಇನ್ನು ಹೈದ್ರಾಬಾದ್​​ನ ಪೊಲೀಸ್ ಕಮಿಷನರ್ ಸಿ.ವಿ. ಆನಂದ ಆಸ್ಪತ್ರೆಗೆ ಭೇಟಿ ನೀಡಿದ್ದು. ಕಾಲ್ತುಳಿತದಲ್ಲಿ ಉಸಿರಾಟದ ತೊಂದರೆಯಾಗಿದ್ದರಿಂದ ಬಾಲಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಇಂತಹ ಸಮಸ್ಯೆಗಳಿಂದ ಹೊರಬರಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ.

Advertisment

ಇದೇ ಡಿಸೆಂಬರ್ 4 ರಂದು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ಗೆ ರೇವತಿ, ಅವರ ಪತಿ, ಮಗಳು ಹಾಗೂ ಮಗ ಪುಷ್ಪಾ-2 ಮೂವಿ ನೋಡಲು ಬಂದಿದ್ದರು. ಈ ವೇಳೆ ಚಿತ್ರದ ನಾಯಕ ಅಲ್ಲು ಅರ್ಜುನ್ ಪ್ರಿಮೀಯರ್​ ಶೋ ನೋಡಲು ಥಿಯೇಟರ್​ಗೆ ಬಂದ ಕಾರಣ ದೊಡ್ಡ ಮಟ್ಟದ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ರೇವತಿ ಹಾಗೂ ಅವರ ಎಂಟು ವರ್ಷದ ಮಗ ಶ್ರೀತೇಜ ಕಾಲ್ತುಳಿತಕ್ಕೆ ಸಿಲುಕಿದರು. ಪರಿಣಾಮ ಸ್ಥಳದಲ್ಲಿಯೇ ರೇವತಿ ಅಸುನೀಗಿದರೆ ಬಾಲಕನ ಪರಿಸ್ಥಿತಿಯೂ ಕೂಡ ಗಂಭೀರವಾಗಿತ್ತು. ಕುಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಘಟನೆ ನಡೆದು 14 ದಿನಗಳಾದರೂ ಕೂಡ ಬಾಲಕನ ಪರಿಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment