ಮಂಡ್ಯ ಟ್ರಾಫಿಕ್ ಪೊಲೀಸರ ಯಡವಟ್ಟು; ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ

author-image
admin
Updated On
ಮಗಳಿಗೆ ನಾಯಿ ಕಚ್ಚಿತ್ತು.. ಮಂಡ್ಯ ಟ್ರಾಫಿಕ್ ಪೊಲೀಸ್‌ ಅಮಾನವೀಯವಾಗಿ ವರ್ತಿಸಿದ್ರಾ? ಅಸಲಿಗೆ ಏನಾಯ್ತು?
Advertisment
  • ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಕಣ್ಮುಚ್ಚಿದ 3 ವರ್ಷದ ಕಂದಮ್ಮ!
  • ಸ್ವರ್ಣಸಂದ್ರ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆ ವೇಳೆ ದುರಂತ
  • ಮಗ್ದ ಮಗುವಿನ ಸಾವಿಗೆ ಯಾರು ಹೊಣೆ ಎಂದು ಪೊಲೀಸರಿಗೆ ತರಾಟೆ

ಮಂಡ್ಯ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಹೃತೀಕ್ಷ ಕೊನೆಯುಸಿರೆಳೆದಿದೆ. ನಗರದ ಸ್ವರ್ಣಸಂದ್ರ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರು ಬೈಕ್ ಅನ್ನು ಅಡ್ಡಗಟ್ಟಿದ್ದರು. ಬೈಕ್​ನಲ್ಲಿದ್ದ ತಂದೆ, ತಾಯಿ ಆಯತಪ್ಪಿ ಬಿದ್ದಿದ್ದು, ಮಗು ತಲೆಗೆ ಬಲವಾದ ಪೆಟ್ಟಾಗಿತ್ತು. ರಕ್ತಸ್ರಾವದಿಂದ 3 ವರ್ಷದ ಕಂದಮ್ಮ ಸಾವನ್ನಪ್ಪಿದೆ.

ಮಗುವನ್ನ ಮಡಿಲಲ್ಲಿಟ್ಟುಕೊಂಡು ತಂದೆ-ತಾಯಿ ಗೋಳಾಡುತ್ತಿದ್ದರೆ ಟ್ರಾಫಿಕ್​​ ಪೊಲೀಸರ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗ್ದ ಮಗುವಿನ ಸಾವಿಗೆ ಯಾರು ಹೊಣೆ ಎಂದು ಸ್ಥಳೀಯರು, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಪೊಲೀಸರನ್ನ ತರಾಟೆ ತೆಗೆದುಕೊಂಡಿದ್ದಾರೆ.

publive-image

ಮಿಮ್ಸ್ ಆಸ್ಪತ್ರೆ ಶವಗಾರದ ಬಳಿ ತರಲಾಗಿದ್ದ ಮಗುವಿ‌ನ ಮೃತದೇಹವನ್ನು ಕುಟುಂಬಸ್ಥರು ವಾಪಸ್ ತೆಗೆದುಕೊಂಡು ಹೋಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಒಪ್ಪದ ಪೋಷಕರು, ಮತ್ತೆ ಮಗುವಿನೊಂದಿಗೆ ಹೆದ್ದಾರಿಗೆ ತೆರಳಿ ಘೋಷಣೆ ಕೂಗಿ ಪ್ರತಿಭಟನೆ ಮುಂದುವರಿಸಿದ್ದಾರೆ.

publive-image

ಮಿಮ್ಸ್ ಆಸ್ಪತ್ರೆ ಎದುರಿನ ಹೆದ್ದಾರಿಯಲ್ಲಿ ಕುಳಿತ ಮಗುವಿನ ಸಂಬಂಧಿಕರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಘಟನಾ ಸ್ಥಳದಲ್ಲಿ ಇದ್ದ ಪೊಲೀಸರನ್ನು ಕರೆಸುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ‘ನಾನೇ 10 ಲಕ್ಷ ಪರಿಹಾರ ಕೊಡ್ತೀನಿ, ನನ್ನ ಮಗಳ ತಂದುಕೊಡಿ..’ ಪೊಲೀಸರ ಯಡವಟ್ಟಿಗೆ ತಂದೆ ಕಣ್ಣೀರು.. 

ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ. ಘಟನೆಗೆ ವಿಷಾಧ ವ್ಯಕ್ತಪಡಿಸಿರುವ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರಕರಣ ಸಂಬಂಧ ಇಲಾಖೆಯ ತನಿಖೆ ಮಾಡುತ್ತೇವೆ ಎಂದಿದ್ದಾರೆ.

publive-image

ಕರ್ತವ್ಯದಲ್ಲಿದ್ದ ಮೂವರು ASIಗಳನ್ನ ಈಗಾಗಲೇ ಅಮಾನತು ಮಾಡಲಾಗಿದೆ. ಮಂಡ್ಯ ಶಾಸಕರ ಜೊತೆ ಮಾತನಾಡಿದ್ದೇವೆ. ಮಗು ಕುಟುಂಬಕ್ಕೆ ಅಗತ್ಯ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಪೊಲೀಸರಿಗೆ ಸಾರ್ವಜನಿಕರು ಹೆಲ್ಮೆಟ್ ಹಾಕದ ಫೋಟೋ ತೆಗೆದು ಮನೆಗೆ ಕಳುಹಿಸಿ. ಫೈನ್ ಎಷ್ಟಾದ್ರೂ ಕಟ್ಟುತ್ತೇವೆ. ಬೈಕ್ ತಡೆಯೋಕೆ ಯಾಕ್ರೋ ಹೋಗ್ತೀರಾ ಎಂದು ಅವಾಚ್ಯ ಶಬ್ಧಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment