/newsfirstlive-kannada/media/post_attachments/wp-content/uploads/2025/05/Mandya-Girl-Tragedy.jpg)
ಮಂಡ್ಯ: ಇದೊಂದು ಅಮಾನವೀಯ ಘಟನೆ. ಟ್ರಾಫಿಕ್​ ಪೊಲೀಸರು ಮಾಡಿದ ಒಂದು ಯಡವಟ್ಟಿಗೆ ಪುಟ್ಟ ಮಗು ರಸ್ತೆಯಲ್ಲೇ ಪ್ರಾಣ ಬಿಟ್ಟಿದೆ. ಮಗಳಿಗೆ ನಾಯಿ ಕಚ್ಚಿತ್ತು. ಅಪ್ಪ-ಅಪ್ಪ ಚಿಕಿತ್ಸೆಗಾಗಿ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ಹೋಗುತ್ತಿದ್ದ ಕರೆದುಕೊಂಡು ಹೋಗುತ್ತಿದ್ದರು. ಬೈಕ್ ​ಅನ್ನು ಪೊಲೀಸರು ಅಡ್ಡಗಟ್ಟಲು ಹೋಗಿ ದೊಡ್ಡ ಅನಾಹುತವೇ ಸಂಭವಿಸಿದೆ.
ಪೊಲೀಸರು ಬೈಕ್​ ಅಡ್ಡಗಟ್ಟುವ ವೇಳೆ ಕೆಳಗೆ ಬಿದ್ದ ಮಗು!
ಮಂಡ್ಯದಲ್ಲಿ ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ ಮೂರು ವರ್ಷದ ಪುಟ್ಟ ಕಂದಮ್ಮ ಬಲಿಯಾಗಿದೆ. ಹೆಲ್ಮೆಟ್​ ತಪಾಸಣೆ ವೇಳೆ ಬೈಕ್​ ಅಡ್ಡಗಟ್ಟುವ ಭರದಲ್ಲಿ ಅಮಾನವೀಯವಾಗಿ ವರ್ತಿಸಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2025/05/MND-FATHER-1.jpg)
ಘೋರ ದುರಂತ ಹೇಗಾಯ್ತು?
ಮದ್ದೂರು ತಾಲೂಕಿನ ಗೊರವನಹಳ್ಳಿ ಮೂಲದ ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾಗೆ ನಾಯಿ ಕಚ್ಚಿತ್ತು. ಹೀಗಾಗಿ ಚಿಕಿತ್ಸೆ ಕೊಡಲಿಸಲು ಬೈಕ್​ನಲ್ಲಿ ಮಗಳನ್ನು ಮಂಡ್ಯದ ಮಿಮ್ಸ್​ಗೆ ದಂಪತಿ ಕರೆದೊಯ್ಯುತ್ತಿದ್ದರು.
ಸ್ವರ್ಣಸಂದ್ರ ಸರ್ಕಲ್ ಬಳಿಯ ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯದ ಟ್ರಾಫಿಕ್​ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಅದೇ ಮಾರ್ಗದಲ್ಲಿ ಹೆಲ್ಮೆಟ್​ ಧರಿಸದೇ ಬರುತ್ತಿದ್ದ ಮಗು ಇದ್ದ ಬೈಕ್​ ಅನ್ನು ಪೊಲೀಸರು ಅಡ್ಡ ಹಾಕಿದ್ದಾರೆ.
ಇದನ್ನೂ ಓದಿ: ಮಗು ಅಲ್ಲಾಡುತ್ತಿದೆ.. ಆಸ್ಪತ್ರೆಗೆ ಓಡೋಡಿ ಬಂದ ಪೋಷಕರು; ಮಂಡ್ಯದಲ್ಲಿ ಮನಮಿಡಿಯುವ ದೃಶ್ಯಗಳು!
ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೀವಿ ಎಂದ ಕಾರಣ ಮೊದಲು ಹಿಡಿದ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಮತ್ತೆ ಸ್ಪಲ್ಪ ದೂರದಲ್ಲೇ ಇದ್ದ ಇನ್ನೊಬ್ಬ ಟ್ರಾಫಿಕ್​ ಸಿಬ್ಬಂದಿ ಬೈಕ್​​ ಅನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ನಿಯಂತ್ರಣ ಬೈಕ್​ನಿಂದ ಕೆಳಗೆ ಬಿದ್ದ ಮಗುವಿನ ತಲೆ ಮೇಲೆ ಹಿಂದೆಯಿಂದ ಬರುತ್ತಿದ್ದ ಲಾರಿ ಹರಿದಿದೆ. ಇದರಿಂದ ತೀವ್ರ ರಕ್ತ ಸ್ರಾವವಾಗಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
/newsfirstlive-kannada/media/post_attachments/wp-content/uploads/2025/05/Mandya-Girl-police.jpg)
ಫೈನ್ ಹಾಕೋ ಭರದಲ್ಲಿ ಜೀವ ರಕ್ಷಣೆ ಮರೆತ್ರಾ ಪೊಲೀಸರು?
ಮೃತ ಮಗಳನ್ನು ಮಡಿಲಲ್ಲಿ ಹಿಡಿದುಕೊಂಡು ತಾಯಿ ಕಣ್ಣೀರು
ಹೆತ್ತವರ ಕಣ್ಣೆದುರೇ 3 ವರ್ಷದ ಹೆಣ್ಣು ಮಗು ಮೃತಪಟ್ಟಿದ್ದು, ಮನಕಲಕುವಂತಿತ್ತು. ತಾಯಿ ವಾಣಿ ಮುದ್ದಾದ ಮಗಳನ್ನು ಕಳೆದುಕೊಂಡು ಕಣ್ಣೀರಾಕಿದ್ರು. ಮಗುವನ್ನು ಮಡಿಲಲ್ಲಿಟ್ಟುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಈ ದುರಂತದ ವೇಳೆ ಮಂಡ್ಯ ಟ್ರಾಫಿಕ್ ಪೊಲೀಸರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾರೆ ಅನ್ನೋ ಆರೋಪ ಕೂಡ ಇದೆ. ಕೆಳಗೆ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸೋದನ್ನು ಬಿಟ್ಟು, ಸಾರ್ವಜನಿಕರಿಗೆ ಮಗು ಎತ್ತಲೂ ಸೂಚನೆ ನೀಡಿದ್ದಾರೆ. ಫೈನ್​ ಹಾಕುವ ತರಾತುರಿಯಲ್ಲಿ ಬೈಕ್​ ತಳ್ಳಿಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು, ಮಿಮ್ಸ್ ಆಸ್ಪತ್ರೆ ಎದುರಿನ ಹೆದ್ದಾರಿ ತಡೆದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/mandya5.jpg)
ಆಕ್ರೋಶದ ಬೆನ್ನಲ್ಲೇ ಮೂವರು ASIಗಳು ಸಸ್ಪೆಂಡ್​!
ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಮಂಡ್ಯ ಎಸ್​ಪಿ, ಪೊಲೀಸರ ತಪ್ಪು ಇದ್ರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಎಸ್​ಪಿ ಭರವಸೆಗೆ ಮಣಿದ ಮಗುವಿನ ಪೋಷಕರು, ಮರಣೋತ್ತರ ಪರೀಕ್ಷೆಗೆ ಮುಂದಾದ್ರು. ಈ ವೇಳೆ ಪ್ರತಿಭಟನಾಕಾರರು ಈ ಕ್ಷಣದಲ್ಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಹೆದ್ದಾರಿಯಲ್ಲಿ ಮತ್ತೆ ಪ್ರತಿಭಟನೆ ಮುಂದುವರಿಸಿದರು. ಆಮೇಲೆ ಸ್ಥಳಕ್ಕೆ ಬಂದ ಮಂಡ್ಯ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮೂವರು ಎಎಸ್‌ಐಗಳನ್ನು ಸಸ್ಪೆಂಡ್​ ಮಾಡಿರುವುದಾಗಿ ತಿಳಿಸಿದರು.
ಮಂಡ್ಯದ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಒಂದು ಪುಟ್ಟ ಮಗು ಜೀವವನ್ನೇ ಕಳೆದುಕೊಂಡಿದ್ದು, ನಿಜಕ್ಕೂ ದುರಂತ. ಒಂದು ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ನೋಟಿಸ್​ ಕೊಟ್ಟು ದಂಡ ವಸೂಲಿ ಮಾಡಬಹುದಿತ್ತು. ಆದ್ರೆ ಫೈನ್​ಗೋಸ್ಕರ ಒಂದು ಜೀವವನ್ನೇ ಬಲಿ ಪಡೆದಿದ್ದು ಎಷ್ಟು ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us