newsfirstkannada.com

ಆಸ್ಪತ್ರೆಯಲ್ಲಿ ಮಕ್ಕಳ ಸಾವು ಕೇಸ್: ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಅಲರ್ಟ್

Share :

Published January 26, 2024 at 6:05am

    ಸಾಲು ಸಾಲು ಮಕ್ಕಳ ಸಾವಿನ ಬಗ್ಗೆ ನ್ಯೂಸ್​ ಫಸ್ಟ್​ ವರದಿ

    ವರದಿ ಬೆನ್ನಲ್ಲೇ ಅಲರ್ಟ್​ ಆದ ವೈದ್ಯಕೀಯ ಶಿಕ್ಷಣ ಇಲಾಖೆ

    ರಾಜ್ಯದ 2 ಕಡೆಗಳಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ

ಬೆಂಗಳೂರು: ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ಆದ್ರೆ ಈ ಆಸ್ಪತ್ರೆಗೇನೆ ಟ್ರಿಟ್​ಮೆಂಟ್​ನ ಅವಶ್ಯಕತೆ ಎದುರಾಗಿತ್ತು. ಈ ಬಗ್ಗೆ ನ್ಯೂಸ್ ಫಸ್ಟ್ ಸತತ ವರದಿ ಪ್ರಸಾರ ಮಾಡಿದ ಬೆನ್ನಲೆ, ಇದೀಗ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಚಿಕಿತ್ಸೆ ನೀಡಲು ಮುಂದಾಗಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ನಗರದ ಪ್ರತಿಷ್ಠಿತ ಆಸ್ಪತ್ರೆ.

ರಾಜ್ಯದ ಮೂಲೆ ಮೂಲೆಗಳಿಂದಲೂ ಅನಾರೋಗ್ಯಕ್ಕೀಡಾದ ಮಕ್ಕಳನ್ನ ಈ ಆಸ್ಪತ್ರೆಗೆ ಕರೆದುಕೊಂಡು ಬರ್ತಾರೆ. ಆದ್ರೆ, ಇದೇ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ನ್ಯೂಸ್​ಫಸ್ಟ್ ಸತತವಾಗಿ ಸುದ್ದಿಯನ್ನ ಪ್ರಸಾರ ಮಾಡಿತ್ತು. ಇದೀಗ, ನ್ಯೂಸ್ ಫಸ್ಟ್ ಪ್ರಸಾರ ಮಾಡಿದ ಸುದ್ದಿ ಇಂಪ್ಯಾಕ್ಟ್ ಆಗಿದ್ದು, ಕಡೆಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಇಂದಿರಾಗಾಂಧಿ ಆಸ್ಪತ್ರೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ರೋಗಿಗಳು ಬರ್ತಾರೆ. ಕಲಬುರಗಿ ಮತ್ತು ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ದಾಖಲಾಗ್ತಾರೆ. ಆಸ್ಪತ್ರೆಯಲ್ಲಿ ದಾಖಲಾತಿ ಹೆಚ್ಚಾಗ್ತಿರೋದರಿಂದ ಸರಿಯಾಗಿ ಚಿಕಿತ್ಸೆ ಕೊಡಲು ಸಾಧ್ಯವಾಗದೆ, ಮಕ್ಕಳ ಜೀವಕ್ಕೆ ಕುತ್ತು ಬರ್ತಿರೋದರ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು.

ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು 40-50 ಮಕ್ಕಳು ಸಾವನಪ್ಪುತಿರೋದರ ಬಗ್ಗೆ ವಿಸ್ತ್ರತ ವರದಿ ಮಾಡಲಾಗಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದ್ದು, ಆಸ್ಪತ್ರೆಯ ಸಬ್ ಬ್ರಾಂಚ್‌ಗಳ ನಿರ್ಮಾಣಕ್ಕೆ ಸಜ್ಜಾಗಿದೆ. ಇನ್ನು, ಅಧಿಕಾರಿಗಳ ಗಮನಕ್ಕೆ ತರುವಲ್ಲಿ ನ್ಯೂಸ್​ಫಸ್ಟ್ ವಹಿಸಿದ ಕಾಳಜಿಗೆ ಇಂದಿರಾಗಾಂಧಿ ಆಸ್ಪತ್ರೆಯ ರೆಸಿಡೆಂಟ್ ಆಫೀಸರ್ ಡಾ.ಮಹಾಂತೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ನ್ಯೂಸ್ ಫಸ್ಟ್ ವರದಿಯ ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆ ಕಡೆಗೂ ಎಚ್ಚೆತ್ತುಕೊಂಡಿದ್ದು, ಸಬ್ ಬ್ರಾಂಚ್​ಗಳ ನಿರ್ಮಾಣಕ್ಕೆ ಮುಂದಾಗಿರೋದು ನಿಜಕ್ಕೂ ಒಳ್ಳೆಯ ವಿಚಾರ. ಇನ್ನಾದ್ರೂ ಆಸ್ಪತ್ರೆಗೆ ದಾಖಲಾಗ್ತಿರುವ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಯಲ್ಲಿ ಮಕ್ಕಳ ಸಾವು ಕೇಸ್: ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಅಲರ್ಟ್

https://newsfirstlive.com/wp-content/uploads/2024/01/indira.jpg

Load More