ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ದುರಂತ ಕೇಸ್​; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

author-image
Bheemappa
Updated On
ಆಟ ಆಡಲು ಹೋಗಿ ಮಕ್ಕಳು ಸೇರಿ 35ಕ್ಕೂ ಹೆಚ್ಚು ಮಂದಿ ಸಾವು; ಅಸಲಿಗೆ ಆಗಿದ್ದೇನು?
Advertisment
  • ಮೃತದೇಹಗಳ ಗುರುತು ಸಿಗದಿದ್ದಕ್ಕೆ ಸಂಬಂಧಿಕರ ಗೋಳಾಟ
  • ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ
  • ನಿನ್ನೆಯಿಂದಲೂ ಇದುವರೆಗೂ ರಕ್ಷಣೆ ಕಾರ್ಯ ಮಾಡಲಾಗ್ತಿದೆ

ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್‌ ಝೋನ್​ನಲ್ಲಿ ಭಾರೀ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. 9 ಮಕ್ಕಳು ಸೇರಿ ಒಟ್ಟು 32 ಜನರು ಸಾವನ್ನಪ್ಪಿರುವ ಮಾಹಿತಿ ಇದೀಗ ತಿಳಿದು ಬಂದಿದೆ.

ಇದನ್ನೂ ಓದಿ:ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು

ಘಟನೆಯಲ್ಲಿ ಬೆಂಕಿಯಿಂದ ಸುಟ್ಟು ಹೋದವರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಡ್​ಶೀಟ್​ ಹಾಗೂ ಮೂಟೆಯಲ್ಲಿ ಕಟ್ಟಿಕೊಂಡು ಹೊರಕ್ಕೆ ತಂದಿದ್ದರು. ಹೀಗಾಗಿ ಮೃತಪಟ್ಟವರು ಯಾರು ಯಾರು ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ. ಎಲ್ಲ ಮೃತದೇಹಗಳ ಡಿಎನ್​ಎ ಪರೀಕ್ಷೆ ಮಾಡಿ ಅವರವರ ಕುಟುಂಬಗಳಿಗೆ ಅಸ್ತಾಂತರ ಮಾಡಲಾಗುವುದು. ಇನ್ನು ಘಟನೆಯಲ್ಲಿ ಗಾಯಗೊಂಡವರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆಯಿಂದಲೂ ರಕ್ಷಣಾ ಕಾರ್ಯ ಇದುವರೆಗೂ ನಡೆಯುತ್ತಿದೆ ಎಂದು ಎಸಿಪಿ ವಿನಾಯಕ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: 9 ಮಕ್ಕಳು ಸೇರಿ 27 ಜನ ಬೆಂಕಿಯಲ್ಲಿ ಸಜೀವ ದಹನ.. ಮೃತದೇಹಗಳನ್ನು ಮೂಟೆಯಲ್ಲಿ ಕಟ್ಟಿ ತಂದ ಸಿಬ್ಬಂದಿ

publive-image

ಗುಜರಾತ್​ ಸಿಎಂ ಭೂಪೆಂದ್ರಭಾಯ್ ಪಟೇಲ್ ಅವರು ನಾನಾ ಮಾವ ರಸ್ತೆಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಇನ್ನೂ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕರು, ನಿರ್ದೇಶಕರು, ನಿರ್ವಹಣಾ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಟಿಆರ್‌ಪಿ ಗೇಮ್ ಝೋನ್‌ನ ಮಾಲೀಕರು ಮತ್ತು ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ವಿಷಯ ತಿಳಿದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಘೋಷಿಸಿದ್ದಾರೆ. 65ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ದುರಂತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment