Advertisment

‘ಡಿಂಗ ಡಿಂಗ’.. ಮಕ್ಕಳು, ಮಹಿಳೆಯರನ್ನೇ ಕಾಡುತ್ತಿದೆ ಈ ವಿಲಕ್ಷಣ ಕಾಯಿಲೆ; ಔಷಧಿಯೇ ಇಲ್ಲ!

author-image
admin
Updated On
‘ಡಿಂಗ ಡಿಂಗ’.. ಮಕ್ಕಳು, ಮಹಿಳೆಯರನ್ನೇ ಕಾಡುತ್ತಿದೆ ಈ ವಿಲಕ್ಷಣ ಕಾಯಿಲೆ; ಔಷಧಿಯೇ ಇಲ್ಲ!
Advertisment
  • ಬಂದಿದೆ ವಿಚಿತ್ರ ಕಾಯಿಲೆ, ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾಯಿಲೆ
  • ಈ ವಿಲಕ್ಷಣ "ಡಿಂಗ ಡಿಂಗ" ಡ್ಯಾನ್ಸ್​ ಕಾಯಿಲೆಗೆ ಔಷಧಿ ಇಲ್ಲ!
  • ಮಹಿಳೆ, ಮಕ್ಕಳೇ ಈ ಕಾಯಿಲೆಗೆ ಹೆಚ್ಚು ಬಲಿ ಆಗೋದೇಕೆ?

ಕಾಯಿಲೆ ಹೇಗೆಲ್ಲಾ ಇರುತ್ತವೆ ಅನ್ನೋದನ್ನ ಕೊರೊನಾ ಹೇಳಿ ಕೊಟ್ಟಿದೆ. ಆದರೆ ಡಿಂಗ ಡಿಂಗ ಅನ್ನೋ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದೆ. ತೀರಾ ವಿಚಿತ್ರ ಏನಂದ್ರೆ ಈ ಕಾಯಿಲೆ ಬಂದವರು ಡ್ಯಾನ್ಸ್​ ಮಾಡ್ತಾನೇ ಇರ್ತಾರೆ. ಅತ್ಯಂತ ವಿಚಿತ್ರ ಅನಿಸೋ ಈ ಕಾಯಿಲೆ ಅಕ್ಷರಶಃ ಬೆಚ್ಚಿ ಬೀಳಿಸುತ್ತಿದೆ.

Advertisment

publive-image

ಇದು ಡಿಂಗ ಡಿಂಗ ಡ್ಯಾನ್ಸ್​ ರೋಗ!
ಹೌದು, ಈ ಕಾಯಿಲೆ ಹೆಸರೂ ವಿಚಿತ್ರವಾಗಿದೆ. ಇದು ಡಿಂಗ ಡಿಂಗ ಕಾಯಿಲೆ. ಡಿಂಗ ಡಿಂಗ ಅಂದ್ರೆ ಶೇಕ್​ ಶೇಕ್ ಡ್ಯಾನ್ಸ್ ಅನ್ನೋ ಅರ್ಥ. ಉಗಾಂಡದಲ್ಲಿ ಕಾಣಿಸಿಕೊಂಡಿರೋ ಈ ಕಾಯಿಲೆಯಿಂದಾಗಿ ಈಗಾಗಲೇ ಮಹಿಳೆಯರು ಹಾಗೂ ಮಕ್ಕಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಅದರಲ್ಲೂ ಬುಂಡಿಬುಗ್ಯೋ ಜಿಲ್ಲೆಯನ್ನ ಅಕ್ಷರಶಃ ಡಿಂಗ ಡಿಂಗ ಡ್ಯಾನ್ಸ್​ ಡಿಸೀಸ್ ಬೆಚ್ಚಿ ಬೀಳಿಸುತ್ತಿದೆ.

ಇದನ್ನೂ ಓದಿ: ಇಡೀ ಭಾರತೀಯರಿಗೆ ಗುಡ್‌ನ್ಯೂಸ್.. ಜಗತ್ತಿನ ಮಹಾಮಾರಿ ಕ್ಯಾನ್ಸರ್‌ಗೂ ಬಂತು ವ್ಯಾಕ್ಸಿನ್​; ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ! 

300ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
ಮೊದಲಿಗೆ ಇಡೀ ದೇಹ ಶೇಕ್ ಆಗೋ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅದನ್ನ ಸುಮ್ಮನೇ ಬಿಟ್ಟು ಬಿಟ್ಟರೆ, ನಡೆದಾಡೋದಕ್ಕೂ ಆಗದೇ ಪಾರ್ಶ್ವವಾಯು ಬಡಿಯುತ್ತದೆ. ವಿಪರೀತ ಜ್ವರ, ಅತಿಯಾದ ಸುಸ್ತು ಕಾಣಿಸಿಕೊಂಡು ಮನುಷ್ಯ ಸತ್ತೇ ಹೋಗುವ ಸಾಧ್ಯತೆ ಇದೆ ಅಂತ ಉಗಾಂಡ ವೈದ್ಯಾಧಿಕಾರಿಗಳು ಡಿಂಗ ಡಿಂಗ ಡ್ಯಾನ್ಸ್​ ಲಕ್ಷಣಗಳನ್ನು ಗುರ್ತಿಸಿದ್ದಾರೆ. ಇದುವರೆಗೂ ಉಗಾಂಡದ ಒಂದೇ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಕೇಸ್​ಗಳು ಪತ್ತೆ ಆಗಿವೆ.

Advertisment

publive-image

ಕಾರಣ ಗೊತ್ತಿಲ್ಲ, ಔಷಧಿಯೂ ಇಲ್ಲ
ಇಂಥದ್ದೊಂದು ವಿಲಕ್ಷಣ ಕಾಯಿಲೆಗೆ ಕಾರಣ ಏನು ಅನ್ನೋದೇ ವಿಜ್ಞಾನಿಗಳನ್ನು ತಲೆ ಕೆಡಸಿಕೊಳ್ಳುವಂತೆ ಮಾಡಿದೆ. 2023ರಲ್ಲೇ ಮೊದಲ ಸಲ ಇಂಥದ್ದೊಂದು ಕಾಯಿಲೆ ಕಾಣಿಸಿಕೊಂಡಿತ್ತು. ಆವಾಗಿನಿಂದ್ಲೂ ಉಗಾಂಡ ವಿಜ್ಞಾನಿಗಳು ಈ ಕಾಯಿಲೆ ಯಾಕೆ ಬರುತ್ತೆ ಅನ್ನೋ ಮೂಲವನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಇದುವರೆಗೂ ಈ ಕಾಯಿಲೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು, ಇದಕ್ಕೆ ಔಷಧಿ ಇಲ್ಲ. ಜ್ವರ, ಸುಸ್ತಿಗೆ ನೀಡುವ ಔಷಧಿ ಜೊತೆ ಪಾರ್ಶ್ವವಾಯುಗೆ ನೀಡುವ ಔಷಧವನ್ನೇ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment