Advertisment

ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..

author-image
Ganesh
Updated On
ಮೂರಂತಸ್ತಿನ ಮನೆಯಲ್ಲಿ ದುರಂತ.. ರಮಾನಂದ ಶೆಟ್ಟಿ ದಂಪತಿ ಸಾವಿಗೆ ಕಾರಣವೇನು? ಆಗಿದ್ದೇನು?
Advertisment
  • ಬೆಂಕಿಯ ಕೆನ್ನಾಲಿಗೆಗೆ ಅಪ್ಪ-ಅಮ್ಮನ ಕಳೆದುಕೊಂಡ ಮಕ್ಕಳು
  • ಅಂಬಲಪಾಡಿಯ ಶೆಟ್ಟಿ ಬಾರ್ ಮಾಲೀಕ ರಮಾನಂದ್ ಶೆಟ್ಟಿ ನಿಧನ
  • ರಾತ್ರಿ ಮಲಗಿದ್ದ ವೇಳೆ ಸಂಭವಿಸಿದ ದುರಂತ, ಮಕ್ಕಳಿಗೂ ಗಾಯ

ಉಡುಪಿ: ಮಧ್ಯರಾತ್ರಿ ನಿದ್ರೆಗೆ ಜಾರಿದ್ದ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನ ದುರಂತ ಸಾವಿನಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Advertisment

ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ, ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ಬಿದ್ದಿತ್ತು. ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ಆವರಿಸಿದ್ದರಿಂದ ನಿದ್ರೆಗೆ ಜಾರಿದ್ದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ (55) ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದರು.

ಇದನ್ನೂ ಓದಿ: ರಮಾನಂದ್ ಶೆಟ್ಟಿ ಸಾವಿನ ಬೆನ್ನಲ್ಲೇ ಅವರ ಪತ್ನಿಯೂ ನಿಧನ.. ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಅಶ್ವಿನಿ

publive-image

ಇನ್ನು ಅಶ್ವಿನಿ (50) ಅವರಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಪತಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಅವರಿಬ್ಬರ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಪ್ಪ-ಅಮ್ಮನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

Advertisment

ಇದನ್ನೂ ಓದಿ:‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

publive-image

ಸದ್ಯ ಇಬ್ಬರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಿರಿಯ ಮಗನೊಂದಿಗೆ ರೀಲ್ಸ್ ಮಾಡಿ ಅಶ್ವಿನಿ ಖ್ಯಾತಿ ಪಡೆದಿದ್ದರು. ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ವಸ್ತುಗಳೆಲ್ಲ ನಾಶವಾಗಿವೆ.

ಇದನ್ನೂ ಓದಿ:ಮೋಟರ್ ಬಳಸಿ ಪೆಟ್ರೋಲ್ ಸುರಿದ್ರು.. ಬೆಂಕಿ ಹಾಕಿ ಶೆಡ್​ಗೆ ಬೀಗ ಜಡಿದ್ರು.. ಬೆಂದು ನರಳಿ, ನರಳಿ ಪ್ರಾಣ ಬಿಟ್ರು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment