newsfirstkannada.com

ತನ್ನ ಸ್ವಾರ್ಥಕ್ಕಾಗಿ ಬೆಳೆದು ನಿಂತ ಬೃಹತ್ ಮರಗಳಿಗೆ ವಿಷ ಉಣಿಸಿದ ಡಾಕ್ಟರ್​​.. ಏನಿದು ಸ್ಟೋರಿ?

Share :

Published May 17, 2024 at 6:05am

  ಸಿಲಿಕಾನ್​ ಸಿಟಿಯಲ್ಲಿ ಮರಗಳಿಗೆ ವಿಷ ಉಣಿಸಿದ ಮಕ್ಕಳ ತಜ್ಞ

  ಮಕ್ಕಳ ತಜ್ಞ ಅಶ್ವತ್ಥ್​​​ ರಾಮ್​​ ರಾವ್​​ನಿಂದ ಮರಗಳ ಕಗ್ಗೊಲೆ

  ಕುಮಾರ ಪಾರ್ಕ್​​ ವೆಸ್ಟ್ ಬಿಡಿಎ ಕಚೇರಿ ಹಿಂಭಾಗದಲ್ಲಿ​ ಘಟನೆ

ಬೆಂಗಳೂರು: ಕಾಡು ಉಳಿಸಿದರೆ ಮಾನವನ ಜೀವ ಉಳಿದಂತೆ. ಕಾಡು ಕಡಿದರೆ ಹೆತ್ತ ತಾಯಿಯನ್ನ ಕೊಂದಂತೆ ಅನ್ನೋ ಮಾತಿದೆ. ಆ ಮಾತಿನಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಹೆತ್ತ ತಾಯಿಯನ್ನೇ ಕೊಂದು ಬಿಟ್ಟಿದ್ದಾನೆ. ಉಸಿರನ್ನ ಕಾಪಾಡೋ ವ್ಯಕ್ತಿಯೇ ಆ ವೃಕ್ಷಗಳ ಉಸಿರನ್ನ ಬಿಗಿಯಾಗಿಸಿ, ವಿಷ ಉಣಿಸಿ, ವಿಲವಿಲ ಒದ್ದಾಡಿಸಿ ಕಗ್ಗೊಲೆಗೆ ಕಾರಣನಾಗ್ಬಿಟ್ಟಿದ್ದಾನೆ. ಇನ್ನಷ್ಟು ಮರಗಳ ಹೋಮ ನಡೆಯೋ ಮುನ್ನ ಆ ವ್ಯಕ್ತಿಗೆ ಶಿಕ್ಷೆಯಾಗ್ಬೇಕೆಂಬ ಕೂಗು ಕೇಳಿಬಂದಿದೆ.

ಇದನ್ನೂ ಓದಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ವೈದ್ಯೋ ನಾರಾಯಣ ಹರಿ ಅನ್ನೋ ಕಾಲವೊಂದಿತ್ತು. ಆದ್ರೀಗ ಯಮಪುರಿಯತ್ತ ಸಾಗಿಸೋ ಯಮ ರಾಕ್ಷಸ ಅನ್ನುವಂತಾಗ್ಬಿಟ್ಟಿದೆ. ಆ ಲಿಸ್ಟ್​​ಗೆ ಈತನೂ ಸೇರ್ಬಿಟ್ಟಿದ್ದಾನೆ. ಹೆಸರು ಅಶ್ವಥ್​​ ರಾಮ್​​ ರಾವ್, ಮಕ್ಕಳ ತಜ್ಞ. ಉಸಿರನ್ನ ಕಾಪಾಡೋ ವೈದ್ಯನೇ ಉಸಿರನ್ನ ನಿಲ್ಲಿಸ್ತಿದ್ದಾನೆ. ಪಾಪಿ ವೈದ್ಯನ ಪಾಪದ ಕೆಲಸ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಹೌದು, ಮಕ್ಕಳ ತಜ್ಞ ಅಶ್ವತ್ಥ್​​​, ಸರ್ಪಂಟೈನ್ ​ರಸ್ತೆಯಲ್ಲಿ 3 ಅಂತಸ್ಥಿನ ಕಮರ್ಷಿಯಲ್​​ ಕಟ್ಟಡವನ್ನ ಹೊಂದಿದ್ದ. ಇದಕ್ಕೆ ಈ ಮರಗಳು ಅಡ್ಡಿಯಾಗುತ್ವೆ ಅನ್ನೋ ಒಂದೇ ಒಂದು ಕಾರಣಕ್ಕೆ ಮರಗಳ ಮಾರಣಹೋಮ ನಡೆಸಿದ್ದಾನೆ. ಕಾರ್ಮಿಕನನ್ನ ಕರೆಸಿ ಎರಡು ಮರದ ಬುಡದ ಸುತ್ತಲು ಡ್ರಿಲ್​​​ ಹೊಡೆಸಿ, 4ರಿಂದ 5 ಹೋಲ್​ ಮಾಡಿಸಿ, ಅದರೊಳಗೆ ಮರ ಒಣಗುವ ಕೆಮಿಕಲ್​ಯುಕ್ತ ಔಷಧಿ​ಯನ್ನ ಹಾಕಿ ಕಗ್ಗೊಲೆಗೈದು ಕಾಲ್ಕಿತ್ತಿದ್ದಾನೆ.

ಈಗಾಗಲೇ ವೈದ್ಯನ ಕೃತ್ಯಕ್ಕೆ ಮರಗಳು ಸಾವಿನಂಚಿನಲ್ಲಿವೆ. ಎರಡೇ ವಾರದಲ್ಲಿ ಆಕಾಶದೆತ್ತರಕ್ಕೆ ಹೆಮ್ಮಾರವಾಗಿ ಬೆಳೆದು ನಿಂತಿದ್ದ ವೃಕ್ಷಗಳು ಸಂಪೂರ್ಣ ಒಣಗಿ ಈಗ್ಲೋ? ಆಗ್ಲೋ ಅನ್ನೋ ಪರಿಸ್ಥಿತಿಯಲ್ಲಿದೆ. ಅಲ್ಲದೆ ವೈದ್ಯ ಅಶ್ಚತ್ಥ್​​ ರಾಮ್​ ರಾಮ್​​​ನ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ FIR ದಾಖಲಿಸಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸ್ತಿದ್ದಾರೆ. ಒಟ್ಟಿನಲ್ಲಿ ಮರಗಳನ್ನ ಉಳಿಸಿ ಬೆಳಸಬೇಕು ಅಂತಿರೋ ಬಿಬಿಎಂಪಿ, ಅರಣ್ಯ ಇಲಾಖೆ ರೂಲ್ಸ್​ಗೆ ಡೋಂಟ್​ ಕೇರ್ ಎಂಬಂತೆ ವರ್ತಿಸಿರೋ ಈ ಪಾಪಿ ವೈದ್ಯ ಮನಸೋ ಇಚ್ಛೆ ಮರಗಳಿಗೆ ವಿಷವಿಟ್ಟು ಕಗ್ಗೊಲೆ ನಡೆಸಿದ್ದಾನೆ. ಪರಿಸರ ಉಳಿಸಿ ಅನ್ನೋರ ಮಧ್ಯೆ ಇಂತಹ ಒಂದು ಕೆಟ್ಟ ಹುಳಗಳಿದ್ರೂ ಭವಿಷ್ಯದ ಹಾದಿ ವಿನಾಶದತ್ತ ಸಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಪಾಪಿ ವೈದ್ಯನಿಗೆ ತಕ್ಕ ಶಾಸ್ತಿ ಆಗಲೇ ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನ ಸ್ವಾರ್ಥಕ್ಕಾಗಿ ಬೆಳೆದು ನಿಂತ ಬೃಹತ್ ಮರಗಳಿಗೆ ವಿಷ ಉಣಿಸಿದ ಡಾಕ್ಟರ್​​.. ಏನಿದು ಸ್ಟೋರಿ?

https://newsfirstlive.com/wp-content/uploads/2024/05/bng13.jpg

Load More