newsfirstkannada.com

ಮಕ್ಕಳಿಗೆ ಮೊಬೈಲ್​​ ಕೊಡೋ ಮುನ್ನ ಎಚ್ಚರ; ಪೋಷಕರು ಓದಲೇಬೇಕಾದ ಸ್ಟೋರಿ ಇದು!

Share :

Published August 6, 2023 at 7:30pm

    ಮಕ್ಕಳಿಗೆ ಮೊಬೈಲ್​​​ ಕೊಡುತ್ತೀರಾ?

    ಪೋಷಕರೇ ಈ ಬಗ್ಗೆ ಎಚ್ಚರವಹಿಸಿ

    ಎಲ್ಲರೂ ಓದಲೇಬೇಕಾದ ಸ್ಟೋರಿ!

ಬೆಂಗಳೂರು: ನಿಮ್ಮ ಮಕ್ಕಳಿಗೆ ಮೊಬೈಲ್‌ ಕೊಡ್ತಿದ್ದೀರಾ? ಹಾಗಿದ್ರೆ ಪೋಷಕರು ಈ ಗಮನ ಕೊಡಲೇಬೇಕು. ಕಾರಣ ನೀವು ಸ್ವಲ್ಪ ಮೈ ಮರೆತರೂ ಮಗು ಗೇಮಿಂಗ್ ಥ್ರಿಲ್ ವ್ಯಸನಕ್ಕೆ ಬೀಳಬಹುದು. ಅಯ್ಯೋ ಇದೇನಿದು ಗೇಮಿಂಗ್ ಥ್ರಿಲ್ ವ್ಯಸನ. ಇದರಿಂದ ನಿಮ್ಮ ಮಕ್ಕಳನ್ನ ಕಾಪಾಡೋದು ಹೇಗೆ ಗೊತ್ತಾ ಇಲ್ಲಿದೆ ಮಾರ್ಗ!

ಫಾಸ್ಟ್ ಮೂವಿಂಗ್ ಯುಗದಲ್ಲಿ ಮೊಬೈಲ್‌ಗಳ ಬಳಕೆ ಅತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್‌ಕೆಜಿ ಮಕ್ಕಳೇ ಮೊಬೈಲ್ ಬಳಕೆ‌ ಮಾಡೋದನ್ನ ನೋಡಿರುತ್ತೇವೆ. ಮಕ್ಕಳು ಈ ರೀತಿಯಾಗಿ ಮಾರ್ಪಾಡಾಗಲು ಕೋವಿಡ್ ಕಾರಣ ಎಂದು ವೈದ್ಯರು ಹೇಳುತ್ತಾರೆ. ಅದ್ಹೇಗೆ ಅಂದ್ರೆ, ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಕ್ಲಾಸ್ ಅಂತ ಶುರುವಾಗಿದ್ದು, ಈಗ ಮಕ್ಕಳಿಗೆ ಮೊಬೈಲ್ ಗೇಮಿಂಗ್ ಅಡಿಕ್ಷನ್ ಆಗಿದೆ..

ಏನಿದು ಗೇಮಿಂಗ್​ ಅಡಿಕ್ಷನ್?​​

ಕೇವಲ 3-4 ನಿಮಿಷಗಳ ಕಾಲ ಮೊಬೈಲ್ ಗೇಮ್ ಆಡಿದರೆ 5 ನಿಮಿಷದಲ್ಲಿ ಸುಮಾರು 10 ಸಿಗರೇಟು ಸೇದಿದಾಗ ಬಿಡುಗಡೆಯಾಗುವಷ್ಟು ಡೊಪಮೈನ್ ಬಿಡುಗಡೆಯಾಗುತ್ತದೆ. ಇದರಿಂದಾಗಿ ಒಂದು ರೀತಿಯ ಥ್ರಿಲ್ ಆಗುತ್ತಿರುತ್ತದೆ. ಮಕ್ಕಳ ಸಾಮಾನ್ಯ ಚಟುವಟಿಕೆಗಳಾದ ಆಟ, ಬೇರೆ ಬೇರೆ ಕೆಲಸ ಮಾಡುವುದರಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ. ಆಗ ಅವರಿಗೆ ಬೇಕಾದಷ್ಟು ಡೊಪಮೈನ್ ಬಿಡುಗಡೆಯಾಗುತ್ತಿಲ್ಲ ಎಂದರ್ಥ.

ಒಂದು ವೇಳೆ ನಿಮ್ಮ ಮಕ್ಕಳಲ್ಲಿ ಈ ರೀತಿ ಬದಲಾವಣೆ ಆಗಿದ್ರೆ, ಮಕ್ಕಳ ವರ್ತನೆ ಮಿತಿ ಮೀರುತ್ತಿದೆ ಎಂದು ಗೊತ್ತಾದ ಕೂಡಲೇ ಮಗುವನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗೋದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಿಗೆ ಮೊಬೈಲ್​​ ಕೊಡೋ ಮುನ್ನ ಎಚ್ಚರ; ಪೋಷಕರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/08/Game_Childrens.jpg

Load More