Advertisment

77 ವರ್ಷಗಳಿಂದಲೂ ಕತ್ತಲಕೂಪದಲ್ಲಿ ಬದುಕಿದ್ದ ಗ್ರಾಮ; ಸ್ವಾತಂತ್ರ್ಯನಂತರ ಮೊದಲ ಬಾರಿ ವಿದ್ಯುತ್ ಸಂಪರ್ಕ

author-image
Gopal Kulkarni
Updated On
77 ವರ್ಷಗಳಿಂದಲೂ ಕತ್ತಲಕೂಪದಲ್ಲಿ ಬದುಕಿದ್ದ ಗ್ರಾಮ; ಸ್ವಾತಂತ್ರ್ಯನಂತರ ಮೊದಲ ಬಾರಿ ವಿದ್ಯುತ್ ಸಂಪರ್ಕ
Advertisment
  • ಸ್ವಾತಂತ್ರ್ಯ ಬಂದ 77 ವರ್ಷಗಳ ಬಳಿಕ ವಿದ್ಯುತ್ ದೀಪ ಕಂಡ ಹಳ್ಳಿ
  • 77 ವರ್ಷಗಳವರೆಗೆ ಕತ್ತಲಲ್ಲಿಯೇ ಬದುಕಿತ್ತು ಛತ್ತೀಸ್​ಗಢದ ಈ ಹಳ್ಳಿ
  • ನಕ್ಸಲ್ ಪೀಡಿತ ಪ್ರದೇಶ ಚಲ್ಕಪಲಿ ಗ್ರಾಮದಲ್ಲಿ ಕೊನೆಗೂ ಬಂತು ಬೆಳಕು

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಛತ್ತೀಸ್​ಗಢದ ಹಳ್ಳಿಯೊಂದು ವಿದ್ಯುತ್​ ಸಂಪರ್ಕ ಕಂಡಿದೆ. ಇದು ಗ್ರಾಮಸ್ಥರ ಮೊಗದಲ್ಲಿ ಸಂತಸ ತಂದಿದೆ. ನಕ್ಸಲ್​ಪೀಡಿತ ಪ್ರದೇಶದ ಗ್ರಾಮ ನಮ್ಮ ಬದುಕು ಬದಲಾಗಲಿದೆ ಎಂದು ಗ್ರಾಮದ ಬುಡಕಟ್ಟು ಮಹಿಳೆಯೊಬ್ಬರು ತಮ್ಮ ಸಂತಸವನ್ನು ಹಂಚಿಕೊಂಡರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸುಮಾರು 77 ವರ್ಷ ಕಳೆದಿವೆ.. ದೇಶದ ಸಾಕಷ್ಟು ನಗರಗಳು ಹೈಟೆಕ್​ ಸಿಟಿಯಾಗಿ ಮಾರ್ಪಟ್ಟಿವೇ.. ಏಐ, ಐಟಿ ಅಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರಿದಿದೆ.. ಆದ್ರೆ ಇಲ್ಲೊಂದು ಹಳ್ಳಿ ಮಾತ್ರಾ ಇದುವರೆಗೂ ವಿದ್ಯುತ್​ ಬೆಳಕನ್ನೇ ಕಂಡಿರಿಲಿಲ್ಲ, ಆದೀಗ 77 ವರ್ಷಗಳ ಬಳಿಕ ನನಸಾಗಿದೆ.

Advertisment

ಮೊದಲ ಬಾರಿಗೆ ವಿದ್ಯುತ್​ ಬೆಳಕು ಕಂಡ ಗ್ರಾಮ!
ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಛತ್ತೀಸ್​ಗಢದ ಹಳ್ಳಿಯೊಂದು ವಿದ್ಯುತ್​ ಸಂಪರ್ಕ ಕಂಡಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಹಳ್ಳಿ ಚಿಲ್ಕಪಲ್ಲಿ ಗ್ರಾಮಕ್ಕೆ ಮೊಲದ ಬಾರಿಗೆ ವಿದ್ಯುತ್​​ ಸಂಪರ್ಕ ಅಳವಡಿಸಲಾಗಿದೆ.

ಇದನ್ನೂ ಓದಿ:ಭಾರತದಲ್ಲಿ ಹೆಚ್ಚಾಯ್ತು ವಿವಾಹೇತರ ಸಂಬಂಧ; ಬೆಂಗಳೂರು ಬಗ್ಗೆ ಶಾಕಿಂಗ್‌ ಮಾಹಿತಿ ಬಹಿರಂಗ

ಛತ್ತೀಸ್​ಗಢ ರಾಜ್ಯ ಸರ್ಕಾರ ಜಾರಿ ಮಾಡಿರುವ 'ನಿಯದ್​ ನೆಲ್ಲನಾರ್' ಯೋಜನೆ ಅಡಿ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಮೊದಲ ಬಾರಿಗೆ ವಿದ್ಯುತ್​ ಬೆಳಕನ್ನ ಕಂಡ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.. ಇನ್ನು, ಈ ಬಗ್ಗೆ ಗ್ರಾಮದ ಮಹಿಳೆಯೊಬ್ಬರು ಮಾತನಾಡಿ, ಇಲ್ಲಿಯವರೆಗೆ ನಮ್ಮ ಹಳ್ಳಿ ವಿದ್ಯುತ್ ಕಂಡಿರಲಿಲ್ಲ. ಈಗ ಪ್ರತಿ ಮನೆಯಲ್ಲೂ ವಿದ್ಯುತ್ ದೀಪಗಳು ಬೆಳಗುತ್ತಿವೆ. ನಮ್ಮ ಮಕ್ಕಳು ಈಗ ರಾತ್ರಿಯಲ್ಲೂ ಓದಬಹುದು ಅಂತೇಳಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ರು..

Advertisment

ನಕ್ಸಲ್​ ಪೀಡಿತ ಪ್ರದೇಶವಾಗಿದ್ದ ಚಿಲ್ಕಪಲ್ಲಿ ಗ್ರಾಮ
ಅಂದ್ಹಾಗೇ, ಚತ್ತೀಸಘಡ್​ದಂತಹ ರಾಜ್ಯಗಳಲ್ಲಿ ಇನ್ನು ನಕ್ಸಲರು ಆ್ಯಕ್ಟೀವ್​ ಆಗಿದ್ದಾರೆ.. ಚಿಲ್ಕಪಲ್ಲಿ ಗ್ರಾಮವು ಇಷ್ಟು ವರ್ಷ ನಕ್ಸಲರ​ ನಿಯಂತ್ರಣದಲ್ಲಿತ್ತು. ಆದ್ರೀಗ ಪರಿಸ್ಥಿತಿ ಬದಲಾಗಿದ್ದು, ಭದ್ರತಾ ಪಡೆಗಳು ನಕ್ಸಲ್​​ ನಿಗ್ರಹ ಕಾರ್ಯಾಚರಣೆ ಮತ್ತು ಸಿಆರ್‌ಪಿಎಫ್ ಪಡೆಗಳ ನಿಯೋಜನೆಯ ನಂತರ ಚಿಲ್ಕಪಲ್ಲಿ ಗ್ರಾಮ, ನಕ್ಸಲರಿಂದ ಮುಕ್ತಿ ಪಡೆದಿದೆ.. ಇದ್ರ ಜೊತೆಗೆ ಚತ್ತೀಸ್​ಘಡ ಸರ್ಕಾರ ಕೂಡ ಮಾವೋವಾದಿ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ, ಚಿಲ್ಕಪಲ್ಲಿ ಸೇರಿದಂತೆ ಸುತ್ತಲಿನ ಆರು ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.

ಇದನ್ನೂ ಓದಿ:ಭಾರತ್​ ಮಹಾ ಆರತಿ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ.. ಕೆರೆ ಮಧ್ಯದಲ್ಲಿ ಹೊತ್ತಿ ಉರಿದ 2 ಬೋಟ್​​ಗಳು..!

ಒಟ್ಟಾರೆ, ಸ್ವಾತಂತ್ರ್ಯ ಬಂದು 77 ವರ್ಷಗಳ ಬಳಿಕ ಕಾಡಿನಂಚಿನಲ್ಲಿದ್ದ ಕುಗ್ರಾಮವೊಂದು ಮೊದಲ ಬಾರಿಗೆ ವಿದ್ಯುತ್​ ಸಂಪರ್ಕ ಕಂಡಿದ್ದು, ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ. ಮಕ್ಕಳನ್ನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸುವ ಕನಸು ಕಾಣ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment